2025ನೇ ಸಾಲಿನ ‘ಭಾರತದ ಅತ್ಯಂತ ಜನಪ್ರಿಯ ತಾರೆ’ ಪಟ್ಟಿಯನ್ನು ಐಎಂಡಿಬಿ ರಿಲೀಸ್ ಮಾಡಿದೆ. ಇದರಲ್ಲಿ ಶಾರುಖ್ ಖಾನ್ ಆಗಲಿ, ಸಲ್ಮಾನ್ ಖಾನ್ ಆಗಲಿ ಸ್ಥಾನ ಪಡೆದಿಲ್ಲ. ಟಾಪ್ 10ರಲ್ಲಿ ಇರುವ ಬಹುತೇಕರು ಹೊಸ ಮುಖಗಳು. ಇದರಲ್ಲಿ ಕನ್ನಡದ ಮೂವರಿಗೆ ಸ್ಥಾನ ಸಿಕ್ಕಿದೆ ಎಂಬುದು ಮತ್ತೊಂದು ವಿಶೇಷ. ತೆಲುಗು ಹಾಗೂ ತಮಿಳಿನ ಯಾರೊಬ್ಬ ಕಲಾವಿದರೂ ಇದರಲ್ಲಿ ಸ್ಥಾನ ಪಡೆದಿಲ್ಲ.
ಐಎಂಡಿಬಿ ಪ್ರತಿ ವರ್ಷದ ಅಂತ್ಯದಲ್ಲಿ ಜನಪ್ರಿಯ ಸ್ಟಾರ್ಸ್ ಪಟ್ಟಿ ಬಿಡುಗಡೆ ಮಾಡುತ್ತದೆ. ವರ್ಷ ಪೂರ್ತಿ ಹೆಚ್ಚು ಟ್ರೆಂಡ್ ಆದ ಸೆಲೆಬ್ರಿಟಿಗಳ ಹೆಸರನ್ನು ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ಕನ್ನಡದವರಾದ ರಶ್ಮಿಕಾ ಮಂದಣ್ಣ, ರಿಷಬ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಪಟ್ಟಿಯಲ್ಲಿ ಇದ್ದಾರೆ.
‘ಸಯ್ಯಾರ’ ಸಿನಿಮಾ ಮೂಲಕ ಹಿಟ್ ಆದ ಜೋಡಿ ಎಂದರೆ ಅದು ಅಹಾನ್ ಪಾಂಡೆ ಹಾಗೂ ಅನೀತ್ ಪಡ್ಡಾ. ಇವರಿಬ್ಬರು ಜನಪ್ರಿಯ ತಾರೆ ಪಟ್ಟಿಯಲ್ಲಿ ಮೊದಲ ಹಾಗೂ ಎರಡನೇ ಸ್ಥಾನದಲ್ಲಿ ಇದ್ದಾರೆ. ಮೂರನೇ ಸ್ಥಾನದಲ್ಲಿ ಆಮಿರ್ ಖಾನ್ ಇದ್ದಾರೆ. ಇಶಾನ್ ಖಟ್ಟರ್ಗೆ ನಾಲ್ಕನೇ ಸ್ಥಾನ ಸಿಕ್ಕಿದೆ. ‘ಬ್ಯಾಡ್ಸ್ ಆಫ್ ಬಾಲಿವುಡ್’ ಮೂಲಕ ಮಿಂಚಿದ ಲಕ್ಷ್ಯ್ಗೆ ಐದನೇ ಸ್ಥಾನ ಸಿಕ್ಕಿದೆ.
ಕನ್ನಡದ ನಟಿ ರಶ್ಮಿಕಾ ಮಂದಣ್ಣ ಸದ್ಯ ಪರಭಾಷೆಯಲ್ಲಿ ಬ್ಯುಸಿ ಇದ್ದಾರೆ. ಅವರಿಗೆ ಆರನೇ ಸ್ಥಾನ ಸಿಕ್ಕಿದೆ.‘ಲೋಕಃ’ ಸಿನಿಮಾ ಮೂಲಕ ಮತ್ತಷ್ಟು ಜನ ಮನ್ನಣೆ ಪಡೆದ ಕಲ್ಯಾಣಿ ಪ್ರಿಯದರ್ಶನ್ 7ನೇ ಸ್ಥಾನದಲ್ಲಿ ಇದ್ದಾರೆ. ಗ್ಲಾಮರ್ ಮೂಲಕ ಮಿಂಚೋ ತೃಪ್ತಿ ದಿಮ್ರಿಗೆ ಪಟ್ಟಿಯಲ್ಲಿ 8ನೇ ಸ್ಥಾನ. ‘ಕಾಂತಾರ: ಚಾಪ್ಟರ್ 1’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ದೊಡ್ಡ ಯಶಸ್ಸು ಕಂಡಿತು. ಈ ಚಿತ್ರದ ನಟಿ, ಪಕ್ಕಾ ಕನ್ನಡತಿ ರುಕ್ಮಿಣಿ ವಸಂತ್ ಅವರು ಈ ಲಿಸ್ಟ್ನಲ್ಲಿ 9ನೇ ಸ್ಥಾನದಲ್ಲಿ ಇದ್ದಾರೆ. ಈ ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ 10ನೇ ಸ್ಥಾನ ಸಿಕ್ಕಿದೆ.
IMDb ಟಾಪ್ 10 ಅತ್ಯಂತ ಜನಪ್ರಿಯ ಭಾರತೀಯ ನಿರ್ದೇಶಕರು
1)ಮೋಹಿತ್ ಸೂರಿ, 2) ಆರ್ಯನ್ ಖಾನ್,3) ಲೋಕೇಶ್ ಕನಗರಾಜ್,4) ಅನುರಾಗ್ ಕಶ್ಯಪ್, 5) ಪೃಥ್ವಿರಾಜ್ ಸುಕುಮಾರನ್, 6) ಆರ್.ಎಸ್. ಪ್ರಸನ್ನ, 7) ಅನುರಾಗ್ ಬಸು, 8) ಡಾಮಿನಿಕ್ ಅರುಣ್, 9) ಲಕ್ಷ್ಮಣ್ ಉಟೇಕರ್, 10) ನೀರಜ್ ಘಯ್ವಾನ್
For More Updates Join our WhatsApp Group :
