ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ದರ್ಶನ್, ಜೈಲಿನಲ್ಲಿರುವಾಗಲೇ ಸಿನಿಮಾದ ಪ್ರಚಾರ ಕಾರ್ಯವನ್ನು ಚಿತ್ರತಂಡ ಮಾಡುತ್ತಿದ್ದು, ಸಿನಿಮಾದ ಬಿಡುಗಡೆಗೂ ರೆಡಿಯಾಗಿದೆ. ಇತ್ತೀಚೆಗಷ್ಟೆ ಸಿನಿಮಾ ತಂಡ ಸುದ್ದಿಗೋಷ್ಠಿ ಆಯೋಜನೆ ಮಾಡಿತ್ತು.
ಸಿನಿಮಾನಲ್ಲಿ ನಟಿಸಿರುವ ಕಲಾವಿದರು, ತಂತ್ರಜ್ಞರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. ನಟಿ ಶರ್ಮಿಳಾ ಮಾಂಡ್ರೆ ಸಹ ‘ಡೆವಿಲ್’ ಸಿನಿಮಾನಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿದ್ದು, ಶರ್ಮಿಳಾ ಅವರು ಸಹ ದರ್ಶನ್ ಜೊತೆಗೆ ನಟಿಸಿದ ಅನುಭವ, ಸಿನಿಮಾದ ಚಿತ್ರೀಕರಣದ ಅನುಭವವನ್ನು ಹಂಚಿಕೊಂಡರು. ಹದಿನೆಂಟು ವರ್ಷದ ಹಿಂದೆ ತಾವು ಪ್ರಕಾಶ್ ಅವರ ನಿರ್ದೇಶನದ ಸಿನಿಮಾನಲ್ಲಿ ನಟಿಸಬೇಕಿತ್ತು ಆದರೆ ಅದು ಈಗ ಸಾಧ್ಯವಾಗಿದೆ’ ಎಂದರು.
For More Updates Join our WhatsApp Group :
