ಜೈಲಿನಲ್ಲೇ ಇದ್ದುಕೊಂಡು ದರ್ಶನ್ ಸಂದೇಶವಿತ್ತರಾ?
ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲಿನಲ್ಲಿರುವಾಗಲೇ ಅವರ ‘ಡೆವಿಲ್’ ಸಿನಿಮಾ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್‌ನಲ್ಲಿನ ‘ಸೂರ್ಯಂಗೆ ಗ್ರಹಣ ಹಿಡ್ಯಲ್ಲ, ನಾನು ಬರ್ತಾ ಇದೀನಿ ಚಿನ್ನ’ ಎಂಬ ಡೈಲಾಗ್ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದೆ. ಇದು ಜೈಲಿನಿಂದ ಬೇಗ ಹೊರಬರುವ ದರ್ಶನ್ ಅವರ ಸಂದೇಶವೇ ಎಂಬ ಚರ್ಚೆ ಶುರುವಾಗಿದೆ.
ನಟ ದರ್ಶನ್ ಅವರು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲಿನಲ್ಲಿ ಇದ್ದಾರೆ. ಜೈಲಿನಲ್ಲಿ ಇರುವಾಗಲೇ ಅವರ ನಟನೆಯ ‘ಡೆವಿಲ್’ ಸಿನಿಮಾ ತೆರೆಗೆ ಬರುತ್ತಿದೆ. ಈ ಚಿತ್ರದ ಟ್ರೇಲರ್ ಇಂದು (ಡಿಸೆಂಬರ್ 5) ರಿಲೀಸ್ ಆಗಿದೆ. ಔಟ್ ಆ್ಯಂಡ್ ಔಟ್ ಮಾಸ್ ಆ್ಯಕ್ಷನ್ ಅಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಟ್ರೇಲರ್ ಅಲ್ಲೇ ಅವರು ಅಭಿಮಾನಿಗಳಿಗೆ ಸಂದೇಶ ಒಂದನ್ನು ನೀಡಿದ್ದಾರೆ.
ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್ ಅಲ್ಲಿ ಒಮ್ಮೆ ಜೈಲಿಗೆ ಹೋದರು. ಈ ವೇಳೆ ಅವರಿಗೆ ಜಾಮೀನು ಸಿಕ್ಕಿತು. ಈ ವರ್ಷ ಆಗಸ್ಟ್ 14ರಂದು ಜಾಮೀನು ರದ್ದಾಗಿ ಅವರು ಮತ್ತೆ ಜೈಲಿಗೆ ಹೋಗಬೇಕಾಯಿತು. ಸದ್ಯ ಅವರು ಜೈಲಿನಲ್ಲೇ ಇದ್ದಾರೆ. ಜೈಲಿಗೆ ತೆರಳುವುದಕ್ಕೂ ಮೊದಲು ಸಿನಿಮಾ ಕೆಲಸ ಪೂರ್ಣಗೊಳಿಸಿದ್ದಾರೆ. ಅವರು ಜೈಲು ಸೇರಿ ನಾಲ್ಕು ತಿಂಗಳು ಕಳೆಯುತ್ತಾ ಬಂದಿದೆ. ಈಗ ಅವರ ಚಿತ್ರ ತೆರೆಗೆ ಬರುತ್ತಿದೆ.
‘ಸೂರ್ಯಂಗೆ ತುಂಬ ಹೊತ್ತು ಗ್ರಹಣ ಹಿಡ್ಯಲ್ಲ, ನಾನು ಬರ್ತಾ ಇದೀನಿ ಚಿನ್ನ’ ಎಂದು ದರ್ಶನ್ ಹೇಳುತ್ತಾರೆ. ದರ್ಶನ್ ಸದ್ಯ ಜೈಲಿನಲ್ಲಿದ್ದು, ಅಪರಾಧ ಮುಕ್ತನಾಗಿ ಹೊರ ಬರೋ ಪ್ರಯತ್ನದಲ್ಲಿ ಇದ್ದಾರೆ. ಬೇಗ ಹೊರಗೆ ಬರ್ತೀನಿ ಅನ್ನೋದನ್ನು ಸೂಚಿಸಲು ಸಿನಿಮಾದಲ್ಲಿ ಈ ಡೈಲಾಗ್ ಇಡಲಾಗಿದೆಯೇ ಎಂಬ ಪ್ರಶ್ನೆ ಕಾಡಿದೆ.
For More Updates Join our WhatsApp Group :
