ಬೆಂಗಳೂರು–ಮುಂಬೈ ಮಾರ್ಗದ ಬಸ್ ಟಿಕೆಟ್ 1200 ರೂ.ನಿಂದ 10,000 ರೂ.ಗೆ ಏರಿಕೆ,
ಬೆಂಗಳೂರು : ಇಂಡಿಗೋ ವಿಮಾನ ಹಾರಾಟ ರದ್ದಾಗಿರುವ ಪರಿಣಾಮವಾಗಿ ಖಾಸಗಿ ಬಸ್ ಟಿಕೆದ್ ದರ ಭಾರೀ ಏರಿಕೆಯಾಗಿದೆ. ಖಾಸಗಿ ಬಸ್ಗಳು ಜನರಿಂದ ಅತ್ಯಂತ ದುಬಾರಿ ಮೊತ್ತ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಪ್ರಯಾಣಿಕರ ತುರ್ತು ಬೇಡಿಕೆಯ ಅನಿವಾರ್ಯತೆನ್ನು ಗಮನಿಸಿದ ಖಾಸಗಿ ಬಸ್ ಮಾಲೀಕರು ಟಿಕೆಟ್ ದರವನ್ನು ದುಪ್ಪಟ್ಟು–ಮೂರುಪಟ್ಟು ಹೆಚ್ಚಿಸಿ ವಸೂಲಿ ಮಾಡುತ್ತಿರುವುದು ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.
ಬೆಂಗಳೂರು – ಮುಂಬೈ ಬಸ್ ಟಿಕೆಟ್ ದರ ಎಷ್ಟು?
ಬೆಂಗಳೂರಿನಿಂದ ಮುಂಬೈ ಮಾರ್ಗದಲ್ಲಿ ಸಾಮಾನ್ಯವಾಗಿ ಎಸಿ ಸ್ಲೀಪರ್ ಬಸ್ಗಳ ಟಿಕೆಟ್ ದರ 1200 ರೂ.ನಿಂದ 1400 ರೂ. ವರೆಗೆ ಇತ್ತು. ಆದರೆ ಇಂಡಿಗೋ ಫ್ಲೈಟ್ ಕ್ಯಾನ್ಸಲ್ ಆಗಿದ್ದರಿಂದ ಅದೇ ಮಾರ್ಗದ ಬಸ್ಗಳಲ್ಲಿ ಈಗ ಆರಂಭದ ದರವೇ 3200 ರೂ, 3800 ರೂ, 4999 ರೂ, 6500 ರೂ. ಆಗಿದೆ. ಕೆಲ ಬಸ್ಗಳಲ್ಲಿ ಗರಿಷ್ಠ ದರ ₹10,000 ತಲುಪಿದೆ.
ಹಬ್ಬದ ದಿನಗಳಲ್ಲಿಯೂ ಸಹ ಹೆಚ್ಚು ಎಂದರೆ 4000 ರೂ. ಮಾತ್ರ ಟಿಕೆಟ್ ಮಾತ್ರ ದರ ವಸೂಲಿ ಮಾಡುತ್ತಿದ್ದ ಖಾಸಗಿ ಬಸ್ ಮಾಲೀಕರು, ಈಗ ವಿಮಾನ ಬಿಕ್ಕಟ್ಟಿನ ಸನ್ನಿವೇಶವನ್ನು ಬಳಸಿಕೊಂಡು ಮನಬಂದಂತೆ ದರ ಹೆಚ್ಚಿಸಿರುವುದು ಕಂಡುಬಂದಿದೆ. ಖಾಸಗಿ ಬಸ್ಗಳು ‘ಹಗಲು ದರೋಡೆ ಮಾಡುತ್ತಿವೆ’ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದು, ಈ ಅನಿಯಂತ್ರಿತ ಬಸ್ ಟಿಕೆಟ್ ದರ ವಿಧಿಸುವುದರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ ಎನ್ನುವ ಆಗ್ರಹ ಹೆಚ್ಚಾಗಿದೆ.
ಇಂಡಿಗೋ ವಿಮಾನ ಬಿಕ್ಕಟ್ಟು ಐದನೇ ದಿನವಾದ ಶನಿವಾರ ಸಹ ಮುಂದುವರಿದಿದ್ದು, ಬೆಂಗಳೂರಷ್ಟೇ ಅಲ್ಲದೆ ಮುಂಬೈ, ಚೆನ್ನೈನಲ್ಲೂ ವಿಮಾನಗಳ ಸಂಚಾರ ರದ್ದಾಗಿದೆ. ಇದರಿಂದಾಗಿ ಪ್ರಯಾಣಿಕರು ಪರದಾಡುವಂತಾಗಿದೆ. ಮುಂಬೈನಲ್ಲಿ 109 ಇಂಡಿಗೋ ವಿಮಾನಗಳ ಸಂಚಾರ ರದ್ದಾಗಿವೆ. ದೆಹಲಿಯಲ್ಲಿ 86, ಹೈದರಾಬಾದ್ನಲ್ಲಿ 69, ಬೆಂಗಳೂರಿನಲ್ಲಿ 50, ಪುಣೆಯಲ್ಲಿ 42 ಹಾಗೂ ಅಮಹದಾಬಾದ್ನಲ್ಲಿ 19 ವಿಮಾನಗಳ ಹಾಟಾರ ಸ್ಥಗಿತವಾಗಿದೆ.
For More Updates Join our WhatsApp Group :
