ಪ್ರಶ್ನೋತ್ತರ ಕಲಾಪದಲ್ಲಿ ಗರಂಚರ್ಚೆ
ಬೆಳಗಾವಿ: ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶದ ಎರಡನೇ ದಿನವಾದ ಇಂದು(ಡಿಸೆಂಬರ್ 09) ಪ್ರಶ್ನೋತ್ತರ ಕಲಾಪ ವೇಳೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆ ಬಗ್ಗೆ ಪ್ರಸ್ತಾಪಿಸಿದರು. ಭೂ ಪರಿಹಾರಕ್ಕೆ ಕಾಲಮಿತಿ ಯಾವಾಗ ನಿಗದಿ ಮಾಡುತ್ತೀರಿ. ಆದೇಶ ಆಗಿರುವ ಹಿಂದಿನ ವ್ಯಾಜ್ಯಗಳಿಗೆ ಯಾವಾಗ ಪರಿಹಾರ ಕೊಡುತ್ತೀರಿ ಎಂದು ಪ್ರಶ್ನಿಸಿದ್ದರು.
ಇದಕ್ಕೆ ನೀರಾವರಿ ಸಚಿವ, ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ, ಪರಿಹಾರ ಹತ್ತು ಲಕ್ಷಕ್ಕೆ ಹತ್ತು ಕೋಟಿ ನಿಗದಿ ಮಾಡಿದ್ದಾರೆ. ಇದನ್ನು ನಾನು ಒಪ್ಪಲ್ಲ, ಕಾನೂನಿನ ಮಿತಿಯಲ್ಲಿಯೇ ಪರಿಹಾರ ಕೊಡುತ್ತೇವೆ ಎಂದು ಉತ್ತರಿಸಿದರು. ಇದರಿಂದ ಆಕ್ರೋಶಗೊಂಡ ಯತ್ನಾಳ್, ಇದು ರೈತರು ಮತ್ತು ನ್ಯಾಯಾಂಗಕ್ಕೆ ಮಾಡಿದ ಅಪಮಾನ ಎಂದು ಸಭಾತ್ಯಾಗ ಮಾಡಿದರು.
For More Updates Join our WhatsApp Group :




