ಅದ್ಬುತ ಸ್ಮರಣ ಶಕ್ತಿಗೆ 2025 ರ ಸೂಪರ್ ಕಿಡ್ ಅವಾರ್ಡ್.
ತುಮಕೂರು: ಎರಡು ವರ್ಷದ ಅದೆಷ್ಟೋ ಮಕ್ಕಳು ಹೇಳಿದ ಮಾತುಗಳನ್ನು ತಿರುಗಿ ಹೇಳಲು ಕಷ್ಟ ಪಡುತ್ತಾರೆ. ಅಂಥಹದರಲ್ಲಿ ಆದ್ಯ ವಿ. ತಮ್ಮ ಒಂದು ವರ್ಷ ಹನ್ನೊಂದು ತಿಂಗಳಲ್ಲೇ ವಿಶಿಷ್ಟ ಸಾಧನೆ ಮಾಡಿ ನ್ಯಾಷನಲ್ ಬುಕ್ ಆಫ್ ದಿ ರೆಕಾರ್ಡ್ ದಾಖಲೆ ಬರೆದು ಇತರರಿಗೆ ಮಾದರಿಯಾಗಿದ್ದಾಳೆ.
ನಗರದ ವಿಜಯನಗರದ ರಾಧಿಕಾ ಟಿ.ಎನ್. ಮತ್ತು ವಿನಯ್ ಅವರ ಮಗಳು ಆದ್ಯ ವಿ. ತಮ್ಮ ಅದ್ಬುತ ಸ್ಮರಣ ಶಕ್ತಿ ಮತ್ತು ಕಲಿಕೆಯ ಉತ್ಸಾಹದಿಂದ ನ್ಯಾಷನಲ್ ಬುಕ್ ಆಫ್ ದಿ ರೆಕಾರ್ಡ್ ದಾಖಲೆ ಬರೆದಿದ್ದಾರೆ. ನ್ಯಾಷನಲ್ ಬುಕ್ ಆಫ್ ದಿ ರೆಕಾರ್ಡ್ ಕೊಡಮಾಡುವ ೨೦೨೫ನೇ ಸಾಲಿನ ಸೂಪರ್ ಕಿಡ್ ಅವಾರ್ಡ್ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಸ್ವಾತಂತ್ರ‍್ಯ ಹೋರಾಟಗಾರರು, ರಾಷ್ಟ್ರ ಲಾಂಛನಗಳು, ಸಾಕು ಪ್ರಾಣಿಗಳು, ಹೂ, ಹಣ್ಣು, ಜಲಚರಗಳು, ಸೌರವ್ಯೂಹಗಳು, ತರಕಾರಿ, ಕಾಡು ಪ್ರಾಣಿಗಳು, ಒಳಾಂಗಣ, ಹೊರಾಂಗಣ ಕ್ರೀಡೆ, ವಚನಕಾರರು, ಆಕಾರಗಳು, ಪಕ್ಷಿಗಳು, ರಾಷ್ಟ್ರ ಧ್ವಜಗಳು, ಭಾರತದ ಐತಿಹಾಸಿಕ ಸ್ಥಳಗಳು, ಹೂವಿನ ವಿಧಗಳು, ರಾಷ್ಟ್ರೀಯ ಹಬ್ಬಗಳು, ಕರ್ನಾಟಕದ ಜಾನಪದ ಕಲೆಗಳು, ವಿಶ್ವದ ಅಧ್ಬುಗಳು, ಸಂಗೀತ ವಾದ್ಯಗಳು, ರಸ್ತೆ ಸಾರಿಗೆ, ಕರೆನ್ಸಿ ಗುರುತಿಸುವಿಕೆ, ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ವಾರದ ದಿನಗಳು, ಕನ್ನಡ, ಹಿಂದಿ, ಇಂಗ್ಲೀಷ್ ನಲ್ಲಿ ಸಂಖ್ಯೆಗಳು, ಇಂಗ್ಲೀಷ್ ಮತ್ತು ಹಿಂದೂ ಕ್ಯಾಲೆಂಡರ್ ತಿಂಗಳುಗಳು, ದೇಹದ ಭಾಗಗಳನ್ನು ಗುರುತಿಸುವುದು, ಸೌರವ್ಯೂಹದ ಗ್ರಹಗಳು, ಕಾಮನಬಿಲ್ಲಿನ ಬಣ್ಣಗಳು, ಖಂಡಗಳು, ಸಾಗರಗಳು, ಶ್ಕೋಕಗಳು, ಭಕ್ತಿಗೀತೆಗಳು, ಚಲನಚಿತ್ರಗೀತೆಗಳಂತಹ ಅನೇಕ ವಿಷಯಗಳನ್ನು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಅವರ ಈ ಪ್ರತಿಭೆಗೆ ನ್ಯಾಷನಲ್ ಮಟ್ಟದ ಟಾಪ್ ೧೦೦ ಸೂಪರ್ ಕಿಡ್ಸ್ ಗಳಲ್ಲಿ ಆದ್ಯ ವಿ. ಸೂಪರ್ ಕಿಡ್ ಅವಾರ್ಡ್ ಪಡೆದುಕೊಂಡಿದ್ದಾರೆ.
ಸದ್ಯ ಆದ್ಯ ವಿ. ಅವರು ಜಿಲ್ಲಾ ಪಂಚಾಯತ್ ಅಡಿ ನಡೆಯುತ್ತಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಯಡಿಯ ಶ್ರೀ ಶಾರದಾಂಬ ಸ್ತ್ರಿ ಶಕ್ತಿ ಬ್ಲಾಕ್ ಸೊಸೈಟಿಯ ವಾತ್ಸಲ್ಯ ಶಿಶುಪಾಲನಾ ಕೇಂದ್ರದಲ್ಲಿ ಕಲಿಯುತ್ತಿದೆ. ಮಗಳ ಸಾಧನೆಗೆ ಶಿಕ್ಷಕರು, ಪೋಷಕರು, ಕುಟುಂಬಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಾವು ನಮ್ಮ ಮಗಳು ಇಷ್ಟು ಚಿಕ್ಕವಯಸ್ಸಿನಲ್ಲಿಯೇ ಇಷ್ಟು ದೊಡ್ಡ ಸಾಧನೆ ಮಾಡುತ್ತಾರೆ ಎಂದು ಅಂದುಕೊAಡಿರಲಿಲ್ಲ. ಮಗಳ ಸಾಧನೆ ನಮಗೆ ಖುಷಿ ತಂದಿದೆ. ಮಗಳ ಅದ್ಬುತ ಸ್ಮರಣ ಶಕ್ತಿಯನ್ನು ಕಂಡು ನಮಗೆ ಆನಂದವಾಗಿದೆ. ಎಂದು ಪೋಷಕರಾದ ರಾಧಿಕಾ, ಟಿ.ಎನ್., ವಿನಯ್- ಆದ್ಯ ವಿ. ಮೆಚ್ಚುಗೆ ವ್ಯಕ್ತ ಪಡಿಸಿದರು.
For More Updates Join our WhatsApp Group :




