ದಕ್ಷಿಣ ಬ್ರೆಜಿಲ್ನ ಗುವಾಯ್ಬಾದಲ್ಲಿ ಭಾರಿ ಚಂಡಮಾರುತದ ಅಬ್ಬರ.
ಬ್ರೆಜಿಲ್ : ದಕ್ಷಿಣ ಬ್ರೆಜಿಲ್ನ ಗುವಾಯ್ಬಾದಲ್ಲಿ ಭಾರಿ ಚಂಡಮಾರುತ ಅಪ್ಪಳಿಸಿದೆ. ಬಲವಾದ ಗಾಳಿ ಬೀಸಿದ್ದು, ಲಿಬರ್ಟಿ ಪ್ರತಿಮೆ ನೆಲಕ್ಕುರುಳಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಲಿಬರ್ಟಿ ಪ್ರತಿಮೆಯ ಪ್ರತಿಕೃತಿಯಾಗಿದ್ದು, ಮೊದಲ ಪ್ರತಿಮೆ ಅಮೆರಿಕದ ನ್ಯೂಜರ್ಸಿಯಲ್ಲಿದೆ. ವೇಗವಾಗಿ ಗಾಳಿ ಬೀಸುತ್ತಿದ್ದ ಪರಿಣಾಮ ಪ್ರತಿಮೆ ಓರೆಯಾಗಿ ಬಳಿಕ ಖಾಲಿ ಪಾರ್ಕಿಂಗ್ ಪ್ರದೇಶದಲ್ಲಿ ಬಿದ್ದಿದೆ.
ಈ ಪ್ರತಿಮೆಯನ್ನು 2020 ರಲ್ಲಿ ಸ್ಥಾಪಿಸಲಾಗಿತ್ತು. ಪ್ರತಿಮೆಯ 11 ಮೀಟರ್ ಎತ್ತರದ ಸ್ತಂಭ ಬಲಿಷ್ಠವಾಗಿಯೇ ಇತ್ತು. ಗಾಳಿಯ ವೇಗ ಗಂಟೆಗೆ 80 ರಿಂದ 90 ಕಿ.ಮೀ ವೇಗದಲ್ಲಿತ್ತು. ಅಲ್ಲಿದ್ದ ಅಂಗಡಿ ಸಿಬ್ಬಂದಿ ಕೂಡಲೇ ಜನರನ್ನು ಅಲ್ಲಿಂದ ಸ್ಥಳಾಂತರಿಸಿದರು. ಯಾರಿಗೂ ಗಾಯಗಳಾಗಿಲ್ಲ.
For More Updates Join our WhatsApp Group :




