ತೋಟದಲ್ಲಿ ತಮ್ಮನ ಕೊ*ಯೊಂದಿಗೆ ಬಿಗ್ ಟ್ವಿಸ್ಟ್.
ಶಿವಮೊಗ್ಗ: ಅತ್ತಿಗೆ ಜೊತೆಗಿನ ಅನೈತಿಕ ಸಂಬಂಧಕ್ಕೆ ವ್ಯಕ್ತಿಯೋರ್ವ ಅಣ್ಣನಿಂದಲೇ ಕೊಲೆಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಜೇಡಿಗೆರೆ ಗ್ರಾಮದಲ್ಲಿ ನಡೆದಿದೆ. ರಾಮಚಂದ್ರ (28) ಕೊಲೆಯಾದ ವ್ಯಕ್ತಿಯಾಗಿದ್ದು, ಆತನ ಸಹೋದರ ಮಾಲತೇಶನೇ ಆರೋಪಿಯಾಗಿದ್ದಾನೆ. ಮಿಸ್ಸಿಂಗ್ ಕೇಸ್ ಬೆನ್ನತ್ತಿ ತನಿಖೆ ನಡೆಸಿದ ಪೊಲೀಸರು ತಮ್ಮನನ್ನು ಕೊಂದು ಅಮಾಯಕನಂತೆ ನಟಿಸುತ್ತಿದ್ದ ಅಣ್ಣನ ಕಳ್ಳಾಟವನ್ನು ಕುಟುಂಬದ ಎದುರು ಬಹಿರಂಗಪಡಿಸಿದ್ದಾರೆ.
ಒಂದೂವರೆ ತಿಂಗಳ ಹಿಂದೆ ನಾಪತ್ತೆಯಾಗಿದ್ದ ರಾಮಚಂದ್ರ ಬಗ್ಗೆ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಪೊಲೀಸರು ತನಿಖೆಗೆ ಮುಂದಾದಾಗ ಕೇಸ್ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪತ್ನಿ ಜೊತೆಗಿನ ಅನೈತಿಕ ಸಂಬಂಧ ಕಾರಣ ರಾಮಚಂದ್ರನನ್ನು ಕೊಂದ ಮಾಲತೇಶ್, ಆತನನ್ನು ತೋಟದಲ್ಲಿ ಹೂತು ಹಾಕಿರೋದು ಗೊತ್ತಾಗಿದೆ. ಮಾಹಿತಿಯ ಆಧಾರದಲ್ಲಿ ತೋಟದಲ್ಲಿ ಗುಂಡಿ ತೆಗೆದು ಪರಿಶೀಲನೆ ನಡೆಸಿದಾಗ ರಾಮಚಂದ್ರನ ಶವ ಪತ್ತೆಯಾಗಿದೆ.
ಪಕ್ಕಾ ಪ್ಲ್ಯಾನ್ ಮಾಡಿ ಮರ್ಡರ್
ಹೆಂಡತಿ ಜೊತೆಗೆ ತಮ್ಮ ರಾಮಚಂದ್ರನ ಅಕ್ರಮ ಸಂಬಂಧ ವಿಷಯಕ್ಕೆ ಅಣ್ಣ ಮಾಲತೇಶ್ ಸಿಟ್ಟಾಗಿದ್ದ. ಹೀಗಾಗಿ ಆತನ ಕೊಲೆಗೆ ಪ್ಲ್ಯಾನ್ ಮಾಡಿದ್ದ ಈತ, ಬೇಗ ಮದುವೆಯಾಗಲೆಂದು ಪೂಜೆ ನೆಪದಲ್ಲಿ ಜೇಡಿಗೆರೆ ಬಳಿ ತಾನು ಕೆಲಸ ಮಾಡುತ್ತಿದ್ದ ತೋಟಕ್ಕೆ ರಾಮಚಂದ್ರನನ್ನು ಕೆರೆದುಕೊಂಡು ಹೋಗಿದ್ದ. ಪೂಜೆ ನೆಪದಲ್ಲಿ ತಮ್ಮನಿಗೆ ಸರಿಯಾಗಿ ಮದ್ಯ ಕುಡಿಸಿ, ನಂತರ ಕಂಬಕ್ಕೆ ಕಟ್ಟಿ ಆತನ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದ. ಕೊಲೆಗೂ ಮೊದಲೇ ಶವ ಹೂತು ಹಾಕಲು ಗುಂಡಿ ತೋಡಿ ಇಟ್ಟಿದ್ದ. ಬಳಿಕ ಯಾರಿಗೂ ಗೊತ್ತಾಗದಂತೆ ಶವವನ್ನು ಗುಂಡಿಯಲ್ಲಿ ಹೂತು ಹಾಕಿದ್ದ. ರಾಮಚಂದ್ರ ನಾಪತ್ತೆ ಬಗ್ಗೆ ಕುಟುಂಬ ಆತಂಕದಲ್ಲಿದ್ದರೂ ತಾನು ಅಮಾಯಕ ಎಂಬ ರೀತಿ ಓಡಾಡಿಕೊಂಡಿದ್ದ. ಆದರೆ ಮೊಬೈಲ್ ಟವರ್ ಲೊಕೇಶನ್ ಆಧಾರದಲ್ಲಿ ಪೊಲೀಸರು ತನಿಖೆ ನಡೆಸಿದಾಗ ಕೊಲೆ ವಿಚಾರ ಗೊತ್ತಾಗಿದೆ.
For More Updates Join our WhatsApp Group :




