ತಂಗಿ ಜೊತೆ ಲವ್ವಿಡವ್ವಿ; ಗೆಳೆಯನನ್ನೇ ಕೊಂದ ಸ್ನೇಹಿತರು.
ದೇವನಹಳ್ಳಿ: ಅವರೆಲ್ಲಾ ಆಪ್ತಮಿತ್ರರು ನಿತ್ಯ ಜೊತೆಯಲ್ಲೇ ಓಡಾಟ, ಮೋಜು, ಮಸ್ತಿ ಮಾಡುತ್ತಿದ್ದರು. ಇಷ್ಟು ಚೆನ್ನಾಗಿದ್ದ ಆ ಸ್ನೇಹಿತರ ಮಧ್ಯೆ ಹುಡುಗಿಯ ವಿಚಾರವಾಗಿ ಕೆಲ ದಿನಗಳಿಂದ ಕಲಹ ಶುರುವಾಗಿತ್ತು. ಆ ಕಲಹವೇ ಇದೀಗ ಜೊತೆಯಲ್ಲಿದ್ದ ಸ್ನೇಹಿತನ ಬಲಿ ಪಡೆದಿದೆ. ನಡು ರಸ್ತೆಯಲ್ಲೇ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಸದ್ಯ ಆರೋಪಿಗಳು ಪೊಲೀಸರ ಅತಿಥಿಗಳಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸಂದೀಪ್, ಮಂಜು, ಉದಯ್, ಹೇಮಂತ್ ಇವರೆಲ್ಲಾ ದೊಡ್ಡಬಳ್ಳಾಪುರದವರು. ಕಂಪನಿಯೊಂದರಲ್ಲಿ ಚಾಲಕ ಹಾಗೂ ಇತರೆ ಕೆಲಸ ಮಾಡಿಕೊಂಡಿದ್ದರು. ಮಚ್ಚಾ, ಮಗಾ, ಬಾಮೈದಾ ಅಂತ ಗ್ಯಾಂಗ್ ಕಟ್ಟಿಕೊಂಡು ಹವಾ ತೋರಿಸಲು ಹೋಗಿ ಜೊತೆಯಲ್ಲಿದ್ದವನಿಗೆ ಚಟ್ಟ ಕಟ್ಟಿ ಇದೀಗ ಸೆರೆಮನೆ ಸೇರಿದ್ದಾರೆ.
ಸ್ನೇಹಿತನ ತಂಗಿ ಜೊತೆ ಲವ್ವಿಡವ್ವಿ: ಕೊಲೆ
ಅಂದಹಾಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಪೊಲೀಸ್ ಠಾಣೆಯಿಂದ ಮುನ್ನೂರು ಮೀಟರ್ ದೂರದಲ್ಲೇ ಈ ಕಿರಾತಕರು ಡಿ.4ರಂದು ಪವನ್ ಎನ್ನುವ ತಮ್ಮ ಗೆಳೆಯನನ್ನೇ ನಡು ರಸ್ತೆಯಲ್ಲಿ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದರು. ಪಾಕ್ಸ್ಕಾನ್ ಕಂಪನಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಪವನ್, ಇತ್ತೀಚೆಗೆ ಕೆಲಸ ಬಿಟ್ಟು ಆಟೋ ಓಡಿಸಿಕೊಂಡಿದ್ದ.
ಡಿ. 4ರಂದು ರಾತ್ರಿ 9 ಗಂಟೆ ಸುಮಾರಿಗೆ ಆಟೋದಲ್ಲಿ ಒಬ್ಬನೇ ಹೋಗುತ್ತಿದ್ದ ವೇಳೆ ಕಾರಿನಲ್ಲಿ ಬಂದಿದ್ದ, ಐದು ಜನರು ಪವನ್ನನ್ನ ಅಡ್ಡಗಟ್ಟಿ ಸಾರ್ವಜನಿಕರ ಮುಂದೆಯೇ ಲಾಗು, ಮಚ್ಚುಗಳಿಂದ ಅಟ್ಯಾಕ್ ಮಾಡಿ ಹತ್ಯೆಗೈದಿದ್ದರು.
ಇತ್ತ ಮನೆಗೆ ಆಧಾರವಾಗಿದ್ದ ಒಬ್ಬನೇ ಮಗನನ್ನ ಕಳೆದುಕೊಂಡ ತಾಯಿ ಹಾಗೂ ಕುಟುಂಬಸ್ಥರು ಮಗನ ಸಾವಿಗೆ ನ್ಯಾಯ ಕೊಡಿಸುವಂತೆ ನಡು ರಸ್ತೆಯಲ್ಲಿ ರೋಧಿಸಿದ್ದರು. ಅಲ್ಲದೆ ಲವ್ ವಿಚಾರಕ್ಕೆ ನನ್ನ ಮಗನನ್ನ ಕಿರಾತಕರು ಬರ್ಬರವಾಗಿ ರಸ್ತೆ ಮಧ್ಯೆಯೇ ಹತ್ಯೆ ಮಾಡಿದ್ದು, ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದರು.
ಸ್ನೇಹಿತನ ತಂಗಿ ಜೊತೆಗೆ ಸಂಬಂಧ: ಓರ್ವ ಅಪ್ರಾಪ್ತ ಸೇರಿ ಐವರ ಬಂಧನ
ನಡು ರಸ್ತೆಯಲ್ಲಿ ನಡೆದಿದ್ದ ಈ ಕೊಲೆಯನ್ನ ಗಂಭೀರವಾಗಿ ಪರಿಗಣಿಸಿದ್ದ ದೊಡ್ಡಬಳ್ಳಾಪುರ ನಗರ ಠಾಣೆ ಪೊಲೀಸರು ಇದೀಗ ಹತ್ಯೆಗೈದಿದ್ದ ಓರ್ವ ಅಪ್ರಾಪ್ತ ಸೇರಿದಂತೆ ಐವರನ್ನು ಬಂಧಿಸಿದ್ದಾರೆ. ಪವನ್ನ ಸ್ನೇಹಿತನ ತಂಗಿ ಜೊತೆಗೆ ಸಂದೀಪ್ ಸಂಬಂಧ ಹೊಂದಿದ್ದು, ಅದೊಂದು ದಿನ ಆಕೆಯ ಜೊತೆ ಮನೆಯಲ್ಲಿ ಸಿಕ್ಕಿಬಿದ್ದಿದ್ದ. ಈ ಕಾರಣಕ್ಕೆ ಪವನ್, ಸಂದೀಪನಿಗೆ ಥಳಿಸಿದ್ದ. ಅಷ್ಟೇ ಅಲ್ಲದೆ ಹೀಗೆ ಮುಂದುವರೆದರೆ ಕಥೆ ಮುಗಿಸುವುದಾಗಿ ವಾರ್ನಿಂಗ್ ಕೂಡ ನೀಡಿದ್ದನಂತೆ.
For More Updates Join our WhatsApp Group :




