ಮುಖಕ್ಕೆ ಹಸಿ ಹಾಲು: ನಿಜಕ್ಕೂ ಪ್ರಯೋಜನವಿದೆಯೇ?

ಮುಖಕ್ಕೆ ಹಸಿ ಹಾಲು: ನಿಜಕ್ಕೂ ಪ್ರಯೋಜನವಿದೆಯೇ?

ದುಬಾರಿ ಕ್ರೀಮ್ ಬಿಟ್ಟು ನೈಸರ್ಗಿಕ ಸ್ಕಿನ್ ಕೇರ್ ಟ್ರಿಕ್.

ಅನೇಕರು ತ್ವಚೆಯ ಆರೈಕೆಗಾಗಿ ದುಬಾರಿ ಉತ್ಪನ್ನಗಳನ್ನು ಬಳಸುತ್ತಾರೆ, ಬ್ಯೂಟಿ ಪಾರ್ಲರ್‌ಗಳ ಮೊರೆ ಹೋಗ್ತಾರೆ. ಇದರ ಬದಲು ಚರ್ಮದ ಆರೈಕೆಗಾಗಿ ಹಸಿ ಹಾಲನ್ನು ಸಹ ಬಳಸಬಹುದಂತೆ. ಹೌದು ಹಸಿ ಹಾಲಿನಲ್ಲಿ ಚರ್ಮದ ಆರೈಕೆಗೆ ಬೇಕಾದಂತಹ ಸಾಕಷ್ಟು ಪೋಷಕಾಂಶಗಳಿದ್ದು, ಇದನ್ನು ಚರ್ಮಕ್ಕೆ ಹಚ್ಚುವ ಮೂಲಕ ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಂತೆ.

ಹಾಲು ಆರೋಗ್ಯಕ್ಕೆ ಮಾತ್ರವಲ್ಲದೆ ಚರ್ಮಕ್ಕೂ ವರದಾನವೆಂದು ಪರಿಗಣಿಸಲಾಗಿದೆ. ಹಸಿ ಹಾಲಿನಲ್ಲಿ ಚರ್ಮಕ್ಕೆ ಬೇಕಾದಂತಹ ಸಾಕಷ್ಟು ಪೋಷಕಾಂಶಗಳಿದ್ದು, ಇದು ಅನೇಕ ಸಮಸ್ಯೆಗಳಿಂದ ತ್ವಚೆಯನ್ನು ರಕ್ಷಣೆ ಮಾಡುತ್ತದೆ.  ಹೌದು ಹಾಲಿನಲ್ಲಿ ಲ್ಯಾಕ್ಟಿಕ್ ಆಮ್ಲ, ವಿಟಮಿನ್ ಎ, ಪ್ರೋಟೀನ್, ಉತ್ಕರ್ಷಣ ನಿರೋಧಕಗಳಿದ್ದು, ಚರ್ಮವನ್ನು ಪೋಷಿಸಲು ಮತ್ತು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಹಾಗಿದ್ರೆ ಹಸಿ ಹಾಲನ್ನು ಮುಖಕ್ಕೆ ಹಚ್ಚುವುದರಿಂದ ಏನೆಲ್ಲಾ ಪ್ರಯೋಜನಗಳು ಲಭಿಸುತ್ತವೆ, ಯಾವೆಲ್ಲಾ ಚರ್ಮದ ಸಮಸ್ಯೆಯನ್ನು ಹೋಗಲಾಡಿಸಬಹುದು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ಹಸಿ ಹಾಲುನ್ನು ಮುಖಕ್ಕೆ ಹಚ್ಚುವುದರ ಪ್ರಯೋಜನಗಳೇನು?

ತ್ವಚೆಯ ಹೊಳಪು ಹೆಚ್ಚುತ್ತದೆ: ನಿಮ್ಮ ಮುಖಕ್ಕೆ ಹಸಿ ಹಾಲನ್ನು ಹಚ್ಚುವುದರಿಂದ ನಿಮ್ಮ ಚರ್ಮವು ಆಳವಾಗಿ ಶುದ್ಧವಾಗುತ್ತದೆ ಮತ್ತು ಇದು ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ. ಹಸಿ ಹಾಲಿನಲ್ಲಿರುವ ಪೋಷಕಾಂಶಗಳು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿಯಾಗಿದೆ. ಅಲ್ಲದೆ ಇದು ಸುಕ್ಕುಗಳನ್ನು ಕಡಿಮೆ ಮಾಡಲು ಸಹ ಸಹಕಾರಿ.

ಶುಷ್ಕತೆಯನ್ನು ಹೋಗಲಾಡಿಸುತ್ತದೆ: ಚಳಿಗಾಲದಲ್ಲಿ ಅನೇಕ ಜನರ ಚರ್ಮ ಶುಷ್ಕವಾಗುತ್ತದೆ. ದುಬಾರಿ ಕ್ರೀಮ್‌ಗಳು, ಲೋಷನ್‌ಗಳು ಅಥವಾ ಮಾಯಿಶ್ಚರೈಸರ್‌ಗಳನ್ನು ಹಚ್ಚಿದರೂ ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಸಾಧ್ಯವಾಗುತ್ತಿಲ್ಲ ಎನ್ನುವವರು  ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಹಸಿ ಹಾಲನ್ನು ಮುಖಕ್ಕೆ ಹಚ್ಚಿ. ಇದು  ನಿಮ್ಮ ಚರ್ಮವು ಮೃದುಗೊಳಿಸುತ್ತದೆ ಮತ್ತು ಶುಷ್ಕತೆಯನ್ನು ಹೋಗಲಾಡಿಸುತ್ತದೆ.

ಸುಕ್ಕು ನಿವಾರಣೆ: ಹಾಲು ವಯಸ್ಸಾಗುವಿಕೆ ವಿರೋಧಿ ಗುಣಗಳು ಮತ್ತು ವಿಟಮಿನ್ ಎ ಅಂಶವನ್ನು ಹೊಂದಿದ್ದು, ಇದನ್ನು ನಿಯಮಿತವಾಗಿ ಚರ್ಮಕ್ಕೆ ಹಚ್ಚುವುದರಿಂದ ಅಕಾಲಿಕ ವಯಸ್ಸಾಗುವಿಕೆ, ಸುಕ್ಕುಗಳನ್ನು ಕಡಿಮೆ ಮಾಡುತ್ತದೆ. ಮತ್ತು ಚರ್ಮದ ಕಿರಿಕಿರಿಯನ್ನು ಶಮನಗೊಳಿಸುವಲ್ಲಿಯೂ ಇದು ಪರಿಣಾಮಕಾರಿಯಾಗಿದೆ.

ಕಲೆಗಳನ್ನು ನಿವಾರಿಸುತ್ತದೆ:  ಹಸಿ ಹಾಲು ಟ್ಯಾನಿಂಗ್ ತೊಡೆದುಹಾಕಲು ಸಹ ಸಹಾಯ ಮಾಡುತ್ತದೆ. ನಿಮ್ಮ ಮುಖದ ಮೇಲೆ ಆಗಾಗ್ಗೆ ಕಲೆಗಳು ಅಥವಾ ಮೊಡವೆಗಳು ಬರುತ್ತಿದೆ ಎಂದದಾದರೆ ಮುಖಕ್ಕೆ ಹಸಿ ಹಾಲನ್ನು ಹಚ್ಚಿ.  ಅದಕ್ಕಾಗಿ  ಹತ್ತಿ ಉಂಡೆಯನ್ನು ಹಸಿ ಹಾಲಿನಲ್ಲಿ ಅದ್ದಿ ಮುಖಕ್ಕೆ ಹಚ್ಚಿ 10 ರಿಂದ 20 ನಿಮಿಷಗಳ ನಂತರ ನಿಮ್ಮ ಮುಖವನ್ನು ತೊಳೆಯಿರಿ.

ಚರ್ಮವನ್ನು ಹೈಡ್ರೇಟ್ ಮಾಡುತ್ತದೆಹಸಿ ಹಾಲು ಚರ್ಮವನ್ನು ಹೈಡ್ರೇಟ್ ಮಾಡುತ್ತದೆ ಮತ್ತು ಚರ್ಮವು ಡ್ರೈ ಆಗುವುದನ್ನು ತಡೆಯುತ್ತದೆ.

ಚರ್ಮವನ್ನು ಆಳವಾಗಿ ಸ್ವಚ್ಛಗೊಳಿಸುತ್ತದೆಹಸಿ ಹಾಲು ಚರ್ಮದ ರಂಧ್ರಗಳನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ ಮತ್ತು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಚರ್ಮವನ್ನು ಮೃದುಗೊಳಿಸುತ್ತದೆ.

ಹಸಿ ಹಾಲನ್ನು ಯಾವಾಗ ಮುಖಕ್ಕೆ ಹಚ್ಚಬೇಕು?

ಹಸಿ ಹಾಲು ಚರ್ಮವನ್ನು ಆಳವಾಗಿ ಶುದ್ಧೀಕರಿಸಲು ಮತ್ತು ಮೃದುವಾಗಿಡಲು ಸಹಾಯ ಮಾಡುತ್ತದೆ, ಚರ್ಮದ ಶುಷ್ಕತೆಯನ್ನು ನಿವಾರಿಸುತ್ತದೆ. ನೀವು ಕೂಡ ಈ ಪ್ರಯೋಜನವನ್ನು ಪಡೆಯಲು ರಾತ್ರಿ ಮಲಗುವ ಮುನ್ನ ಮುಖಕ್ಕೆ ಹಸಿ ಹಾಲನ್ನು ಹಚ್ಚಿಕೊಳ್ಳಿ ಮತ್ತು ಬೆಳಗ್ಗೆ ಸ್ವಚ್ಛ ನೀರಿನಿಂದ ಮುಖ ತೊಳೆಯಿರಿ. ಖಂಡಿತವಾಗಿಯೂ ಇದರಿಂದ ನಿಮ್ಮ ಚರ್ಮದಲ್ಲಿ ಈ ಸಕಾರಾತ್ಮಕ ಬದಲಾವಣೆಗಳು ಉಂಟಾಗುತ್ತದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *