ಬೈಕ್ ತಪ್ಪಿಸಲು ಹೋಗಿ 10 ಅಡಿ ಮೇಲಕ್ಕೆ ಹಾರಿ ಬುಗುರಿಯಂತೆ ತಿರುಗಿದ ಕಾರು.
ಬೀದರ್ : ಬೈಕ್ ಸವಾರನನ್ನ ಬಚಾವು ಮಾಡಲು ಹೋಗಿ ಕಾರು ಹತ್ತು ಅಡಿ ಮೇಲೇ ಹಾರಿ ಬುಗುರಿ ತಿರುಗಿದಂತೆ ತಿರುಗಿ ಮತ್ತೆ ರಸ್ತೆ ಮೇಲೆ ಬಿದ್ದಿದೆ. ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಕೌಡಿಯಾಳ ಬಳಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಬರುತ್ತಿದ್ದ ಕಾರಿಗೆ ಬೈಕ್ ಅಡ್ಡ ಬಂದಿದೆ. ಇದರಿಂದ ಚಾಲಕನ ನಿಯಂತ್ರಣ ತಪ್ಪಿ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಬಳಿಕ ಕಾರು ಹತ್ತು ಅಡಿ ಮೇಲಕ್ಕೆ ಹಾರಿ ಬಿದ್ದಿದ್ದು, ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
For More Updates Join our WhatsApp Group :




