ತಾಜಾ ತಲೆಕೆಳಗಿಡಲು ಬೇಕಾದ ಸರಿಯಾದ ಸಂಗ್ರಹಣಾ ಮಾರ್ಗಗಳು.
ಸಾಮಾನ್ಯವಾಗಿ ಹೆಚ್ಚಿನವರು ಇಡೀ ವಾರಕ್ಕೆ ಬೇಕಾಗಿರುವ ಹಣ್ಣು-ತರಕಾರಿಗಳನ್ನು ಒಂದೇ ಬಾರಿಗೆ ತಂದು ಫ್ರಿಡ್ಜ್‌ನಲ್ಲಿ ಸಂಗ್ರಹಿಸಿಡುತ್ತೇವೆ. ಚಳಿಗಾಲದ ದಿನಗಳಲ್ಲಿಯೂ ವಾತಾವರಣ ಎಷ್ಟೇ ತಂಪಾಗಿದ್ದರೂ, ಹಣ್ಣು-ತರಕಾರಿಗಳು ತಾಜಾವಾಗಿಡಲು ಅವುಗಳನ್ನು ಫ್ರಿಡ್ಜ್‌ನಲ್ಲಿ ಸಂಗ್ರಹಿಸುತ್ತೇವೆ. ಆದರೆ ಚಳಿಗಾಲದಲ್ಲಿ ಈ ಕೆಲವು ತರಕಾರಿಗಳನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಬಾರದು, ಅವುಗಳ ಗುಣಲಕ್ಷಣಗಳು ಬದಲಾಗಿ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ಅನೇಕ ಆರೋಗ್ಯ ತಜ್ಞರು ನಂಬುತ್ತಾರೆ. ಹಾಗಿದ್ದರೆ ಯಾವ ತರಕಾರಿಗಳನ್ನು ಫ್ರಿಡ್ಜ್‌ನಲ್ಲಿ ಸ್ಟೋರ್ ಮಾಡುವುದು ಸೂಕ್ತವಲ್ಲ ಎಂಬುದನ್ನು ನೋಡೋಣ ಬನ್ನಿ.
ಚಳಿಗಾಲದಲ್ಲಿ ಈ ತರಕಾರಿಗಳನ್ನು ಫ್ರಿಡ್ಜ್‌ನಲ್ಲಿ ಸಂಗ್ರಹಿಸಬೇಡಿ:
ಬೆಳ್ಳುಳ್ಳಿ, ಈರುಳ್ಳಿ: ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಶೇಖರಿಸಿಡಲು ಉತ್ತಮ ಮಾರ್ಗವೆಂದರೆ ಅದನ್ನು ಅಡುಗೆಮನೆಯಲ್ಲಿ ಸಣ್ಣ ಬುಟ್ಟಿಯಲ್ಲಿ ಇಡುವುದು. ಕೋಣೆಯ ಉಷ್ಣಾಂಶದಲ್ಲಿಯೂ ಇದು ದೀರ್ಘಕಾಲ ತಾಜಾವಾಗಿರುತ್ತದೆ. ನೀವು ಅದನ್ನು ಸಿಪ್ಪೆ ಸುಲಿದು ಅಥವಾ ಪೇಸ್ಟ್ ಮಾಡಿ ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿದರೆ, ಅದರ ಪೌಷ್ಟಿಕಾಂಶದ ಮೌಲ್ಯ ಕಡಿಮೆಯಾಗುತ್ತದೆ.
ಟೊಮೆಟೊ: ಪ್ರತಿಯೊಂದು ಅಡುಗೆಗಳಲ್ಲೂ ನಾವು ಟೊಮೆಟೊವನ್ನು ಬಳಕೆ ಮಾಡುತ್ತೇವೆ. ಹೆಚ್ಚಿನವರು ಈ ಟೊಮೆಟೊವನ್ನು ಸಹ ಫ್ರಿಡ್ಜ್‌ನಲ್ಲಿ ಸ್ಟೋರ್ ಮಾಡ್ತಾರೆ. ಆದರೆ, ತಜ್ಞರು ಹೇಳುವಂತೆ ಅವುಗಳನ್ನು ಫ್ರಿಡ್ಜ್‌ನಲ್ಲಿ ಇಡಬಾರದು. ಏಕೆಂದರೆ ಇವುಗಳನ್ನು ಫ್ರಿಡ್ಜ್‌ನಲ್ಲಿ ಇಡುವುದರಿಂದ ಅವುಗಳ ರುಚಿ ಮತ್ತು ವಿನ್ಯಾಸ ಎರಡೂ ಹಾಳಾಗುತ್ತದೆ. ಇದರ ಜೊತೆಗೆ, ಟೊಮೆಟೊದಲ್ಲಿರುವ ಉತ್ಕರ್ಷಣ ನಿರೋಧಕಗಳು ಸಹ ನಾಶವಾಗುತ್ತವೆ. ಚಳಿಗಾಲದಲ್ಲಿ ಹೊರಗೆ ಇಟ್ಟರೂ ಟೊಮೆಟೊ ಒಂದು ವಾರದವರೆಗೆ ಕೆಡುವುದಿಲ್ಲ.
ಆಲೂಗಡ್ಡೆ: ಅನೇಕ ಜನರು ಆಲೂಗಡ್ಡೆಯನ್ನು ಸಹ ಫ್ರಿಡ್ಜ್‌ನಲ್ಲಿ ಸಂಗ್ರಹಿಸುತ್ತಾರೆ.ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವುದು ತಜ್ಞರ ಅಭಿಪ್ರಾಯ. ಆಲೂಗಡ್ಡೆಯನ್ನು ಫ್ರಿಡ್ಜ್‌ನಲ್ಲಿ ಇಡುವುದರಿಂದ ಅವು ಮೊಳಕೆಯೊಡೆಯುವುದಲ್ಲದೆ, ಅವುಗಳಲ್ಲಿರುವ ಪಿಷ್ಟವು ಸಕ್ಕರೆಯಾಗಿ ಬದಲಾಗುತ್ತದೆ. ಇದು ಮಧುಮೇಹಿಗಳಿಗೆ ಮಾತ್ರವಲ್ಲದೆ ಎಲ್ಲರ ಆರೋಗ್ಯ ಮೇಲೂ ಪರಿಣಾಮವನ್ನು ಬೀರುತ್ತದೆ.
ಶುಂಠಿ: ಚಳಿಗಾಲದಲ್ಲಿ ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಬಾರದ ಮತ್ತೊಂದು ತರಕಾರಿ ಶುಂಠಿ. ನೀವು ಅದನ್ನು ರೆಫ್ರಿಜರೇಟರ್‌ನಲ್ಲಿ ಇಟ್ಟರೆ, ಅದರಲ್ಲಿ ಶಿಲೀಂಧ್ರಗಳು ಬೆಳೆದು ಅವು ಹಾಳಾಗಬಹುದು. ಈ ರೀತಿಯ ಶುಂಠಿಯನ್ನು ಸೇವಿಸುವುದರಿಂದ ಮೂತ್ರಪಿಂಡ ಮತ್ತು ಯಕೃತ್ತಿನ ಮೇಲೆ ಹಾನಿಕಾರಕ ಪರಿಣಾಮ ಬೀರಬಹುದು.
ಸೊಪ್ಪು: ಸೊಪ್ಪು ತರಕಾರಿಗಳನ್ನು ಕೇವಲ 12 ಗಂಟೆಗಳ ಕಾಲ ಮಾತ್ರ ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಬಹುದೆಂದು ತಜ್ಞರು ಶಿಫಾರಸು ಮಾಡುತ್ತಾರೆ. ಇದಕ್ಕಿಂತ ಹೆಚ್ಚು ಸಮಯ ಸಂಗ್ರಹಿಸುವುದರಿಂದ ಅವುಗಳ ನೈಸರ್ಗಿಕ ಸುವಾಸನೆ, ವಿನ್ಯಾಸ ಮತ್ತು ಪೌಷ್ಟಿಕಾಂಶದ ಮೌಲ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.ಇದಲ್ಲದೆ ಹೂಕೋಸು, ಕ್ಯಾರೆಟ್‌ಗಳನ್ನು ಸಹ ಫ್ರಿಡ್ಜ್‌ನಲ್ಲಿ ಸಂಗ್ರಹಿಸಬಾರದು.
For More Updates Join our WhatsApp Group :




