ಒತ್ತಡದಿಂದ ಮುಕ್ತಿ ಬೇಕಾ? ದಿನನಿತ್ಯದ ಆಹಾರದಲ್ಲೇ ಇದೆ ಪರಿಹಾರ.

ಒತ್ತಡದಿಂದ ಮುಕ್ತಿ ಬೇಕಾ? ದಿನನಿತ್ಯದ ಆಹಾರದಲ್ಲೇ ಇದೆ ಪರಿಹಾರ.

ಸುಲಭವಾಗಿ ಒತ್ತಡದಿಂದ ಮುಕ್ತಿ ಪಡೆಯಬಹುದು ಹೇಗೆ ಗೊತ್ತಾ..

ಇತ್ತೀಚಿನ ದಿನಗಳಲ್ಲಿ ಬಹುತೇಕ ಹೆಚ್ಚಿನವರು ಒತ್ತಡದ ಜೀವನವನ್ನು ನಡೆಸುತ್ತಿದ್ದಾರೆ. ಕೆಲಸ, ವೈಯಕ್ತಿಕ ಚಿಂತೆ, ಕುಟುಂಬದ ಜವಾಬ್ದಾರಿ ಮಾತ್ರವಲ್ಲ ಜೀವನಶೈಲಿ, ಆಹಾರ ಪದ್ಧತಿಗಳು ನಮ್ಮನ್ನು ಮತ್ತಷ್ಟು ಒತ್ತಡಕ್ಕೆ ಸಿಲುಕಿಸುತ್ತವೆ. ಈ ಒತ್ತಡದ ಕಾರಣದಿಂದ ಖುಷಿ ಖುಷಿಯಿಂದ ಜೀವನ ನಡೆಸಲು ಸಾಧ್ಯವಾಗುವುದಿಲ್ಲ. ಅಷ್ಟೇ ಅಲ್ಲದೆ ಈ ಅತಿಯಾದ ಒತ್ತಡ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೂ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಹೀಗಿರುವಾಗ ಒತ್ತಡದಿಂದ ಮುಕ್ತಿ ಪಡೆದು, ನೆಮ್ಮದಿಯ ಜೀವನ ನಡೆಸಲು ಇಂದಿನಿಂದಲೇ ಈ ಕೆಲವು ಆಹಾರಗಳನ್ನು ಸೇವನೆ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಆ ಆಹಾರಗಳು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಒತ್ತಡದಿಂದ ಮುಕ್ತಿ ಪಡೆಯಲು ನೀವು ಸೇವನೆ ಮಾಡಬೇಕಾದ ಆಹಾರಗಳಿವು:

ಡಾರ್ಕ್ ಚಾಕೊಲೇಟ್: ಡಾರ್ಕ್ ಚಾಕೊಲೇಟ್ ತಿನ್ನುವುದರಿಂದ ದೇಹದಲ್ಲಿ ಸಂತೋಷದ ಹಾರ್ಮೋನುಗಳು ಬಿಡುಗಡೆಯಾಗುತ್ತವೆ. ಇದು ಮನಸ್ಥಿತಿಯನ್ನು ಸುಧಾರಿಸುತ್ತದೆ. ಇದರಲ್ಲಿ ಒತ್ತಡದ ವಿರುದ್ಧ ಹೋರಾಡಲು ಸಹಾಯ ಮಾಡುವ ಉತ್ಕರ್ಷಣ ನಿರೋಧಕಗಳು ಸಹ ಇರುತ್ತವೆ. ಹೆಚ್ಚು ಡಾರ್ಕ್ ಚಾಕೊಲೇಟ್ ಸೇವಿಸುವುದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದೆ ಹಾಗಾಗಿ ಇದನ್ನು ಮಿತವಾಗಿ ಸೇವಿಸಿ.

ಬಾಳೆಹಣ್ಣು: ಬಾಳೆಹಣ್ಣುಗಳು ಸುಲಭವಾಗಿ ಜೀರ್ಣವಾಗುವ ಹಣ್ಣು. ಅಲ್ಲದೆ ಅವು ವಿಟಮಿನ್ ಬಿ6, ಪೊಟ್ಯಾಸಿಯಮ್ ಮತ್ತು ಟ್ರಿಪ್ಟೊಫಾನ್ ಅಂಶವನ್ನು ಒಳಗೊಂಡಿರುತ್ತವೆ, ಇದು ಮನಸ್ಸನ್ನು ಶಾಂತಗೊಳಿಸಲು, ಮನಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಒತ್ತಡದಿಂದ ಮುಕ್ತಿ ಪಡೆಯಲು ನೀವು ಬಾಳೆಹಣ್ಣನ್ನು ಸಹ ಸೇವನೆ ಮಾಡಬಹುದು.

ಬಾದಾಮಿ ಮತ್ತು ವಾಲ್ನಟ್ಸ್: ನಟ್ಸ್‌ಗಳು ಉತ್ತಮ ಪ್ರಮಾಣದ ಮೆಗ್ನೀಸಿಯಮ್ ಮತ್ತು ಆರೋಗ್ಯಕರ ಕೊಬ್ಬನ್ನು ಹೊಂದಿರುತ್ತವೆ. ಅವು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ವಾಲ್ನಟ್ಸ್ ಮಾನಸಿಕ ಆರೋಗ್ಯಕ್ಕೆ ವಿಶೇಷವಾಗಿ ಪ್ರಯೋಜನಕಾರಿ. ಹಾಗಾಗಿ ನೀವು ಪ್ರತಿನಿತ್ಯ ಬೆಳಗ್ಗೆ ಬಾದಾಮಿ, ವಾಲ್ನಟ್‌ ಸೇವನೆ ಮಾಡಿ.

ಬೆರ್ರಿ  ಹಣ್ಣು: ಬೆರ್ರಿ ಹಣ್ಣುಗಳು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಹಣ್ಣು. ಅವು ದೇಹವನ್ನು ಒತ್ತಡಗಳಿಂದ ರಕ್ಷಿಸುತ್ತವೆ, ಸಂತೋಷದ ಹಾರ್ಮೋನುಗಳನ್ನು ಸಹ ಬಿಡುಗಡೆ ಮಾಡುತ್ತವೆ. ಆದ್ದರಿಂದ ನಿಯಮಿತವಾಗಿ ಈ ಹಣ್ಣನ್ನು ಸೇವನೆ ಮಾಡಿ.

ಸಿಹಿ ಗೆಣಸು: ಸಿಹಿ ಗೆಣಸಿನಲ್ಲಿ ಗಮನಾರ್ಹ ಪ್ರಮಾಣದ ವಿಟಮಿನ್ ಸಿ ಮತ್ತು ಪೊಟ್ಯಾಸಿಯಮ್ ಇದ್ದು, ಇದು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಗ್ರೀನ್ಟೀ: ಗ್ರೀನ್‌ ಟೀ ಎಲ್-ಥಿಯಾನೈನ್ ಎಂಬ ವಿಶಿಷ್ಟ ಸಂಯುಕ್ತವನ್ನು ಹೊಂದಿರುತ್ತದೆ. ಇದು ಮನಸ್ಸನ್ನು ವಿಶ್ರಾಂತಿಗೊಳಿಸಲು ಮತ್ತು ಒತ್ತಡದ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ ಇದರಲ್ಲಿ ಕೆಫೀನ್ ಕೂಡ ಕಡಿಮೆ ಇದ್ದು, ಇದು ನಿಮಗೆ ಉತ್ತಮವಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *