ದೆಹಲಿಯ ಕ್ಯಾಥೆಡ್ರಲ್ ಚರ್ಚ್ ನಲ್ಲಿ ಕ್ರಿಸ್ಮಸ್ ಪ್ರಾರ್ಥನೆ.
ನವದೆಹಲಿ: ಕ್ರಿಸ್‌ಮಸ್ ಹಬ್ಬದ ಸಂದರ್ಭದಲ್ಲಿ ದೆಹಲಿಯ ‘ಕ್ಯಾಥೆಡ್ರಲ್ ಚರ್ಚ್ ಆಫ್ ದಿ ರಿಡೆಂಪ್ಶನ್’ನಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದರು. ಈ ಕಾರ್ಯಕ್ರಮದಲ್ಲಿ ಪ್ರಾರ್ಥನೆ, ಸ್ತುತಿಗೀತೆಗಳು ಮೊಳಗಿದವು. ದೆಹಲಿಯ ಬಿಷಪ್ ಡಾ. ಪಾಲ್ ಸ್ವರೂಪ್ ಪ್ರಧಾನ ಮಂತ್ರಿಯವರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಕ್ರಿಸ್‌ಮಸ್ ಹೊಸ ಭರವಸೆ ಹಾಗೂ ಎಲ್ಲರಲ್ಲಿ ದಯಾಪರತೆ ಮೂಡಿಸಲಿ. ದಯೆಗೆ ಹಂಚಿಕೆಯ ಬದ್ಧತೆಯನ್ನು ತರಲಿ. ‘ಕ್ಯಾಥೆಡ್ರಲ್ ಚರ್ಚ್ ಆಫ್ ದಿ ರಿಡೆಂಪ್ಶನ್’ನಲ್ಲಿ ಭಾಗವಹಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಎಕ್ಸ್ ಸಂದೇಶದಲ್ಲಿ ವಿಡಿಯೋ ಸಂದೇಶ ಹಂಚಿಕೊಂಡಿದ್ದಾರೆ.
For More Updates Join our WhatsApp Group :




