‘Avatar 3’ ನಂತರ ಮತ್ತೊಂದು ಹಾಲಿವುಡ್ ಸಿನಿಮಾ ಭಾರತದಲ್ಲಿ ಮುಗ್ಗರಿಕೆ

'Avatar 3' ನಂತರ ಮತ್ತೊಂದು ಹಾಲಿವುಡ್ ಸಿನಿಮಾ ಭಾರತದಲ್ಲಿ ಮುಗ್ಗರಿಕೆ

‘ಅವತಾರ್ 3’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷಿತ ಪ್ರದರ್ಶನಕ್ಕೆ ದೂರ

ಭಾರತದ ಬಾಕ್ಸ್ ಆಫೀಸ್ ವಿದೇಶಿ ಸಿನಿಮಾಗಳ ಪಾಲಿಗೆ ಚಿನ್ನದ ಗಣಿಯಾಗಿವೆ. ಹಾಲಿವುಡ್ ಸಿನಿಮಾಗಳಂತೂ ಭಾರತದಲ್ಲಿ ಮುಗಿಬಿದ್ದು ಸಿನಿಮಾ ಬಿಡುಗಡೆ ಮಾಡುತ್ತಿವೆ. ವಿಶೇಷ ಪ್ರಚಾರವನ್ನು ಸಹ ಮಾಡುತ್ತಿವೆ. ಸಿನಿಮಾ ನಿರ್ಮಾಣ ಹಂತದಲ್ಲಿಯೇ ಭಾರತದ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ಅದಕ್ಕೆ ತಕ್ಕಂತೆ ಇಲ್ಲಿನ ಜನರು ಸಹ ಹಾಲಿವುಡ್ ಸಿನಿಮಾಗಳಿಗೆ ಭರಪೂರ ಪ್ರೀತಿಯನ್ನು ಇಲ್ಲಿಯ ಜನ ನೀಡಿದ್ದಾರೆ. ಆದರೆ ಇತ್ತೀಚೆಗೆ ಬಿಡುಗಡೆ ಆದ ಎರಡು ಹಾಲಿವುಡ್ ಸಿನಿಮಾಗಳ ಒಂದರ ನಂತರ ಇನ್ನೊಂದು ಮಕಾಡೆ ಮಲಿಗವೆ.

ಕಳೆದ ವಾರವಷ್ಟೆ ಬಿಡುಗಡೆ ಆದ ‘ಅವತಾರ್: ಫೈರ್ ಆಂಡ್ ಆಶ್’ ಸಿನಿಮಾ ಭಾರಿ ನಿರೀಕ್ಷೆಗಳನ್ನು ಮೂಡಿಸಿತ್ತು. ಸಿನಿಮಾ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗಿತ್ತು. ಆದರೆ ಸಿನಿಮಾ ನಿರೀಕ್ಷಿತ ಮಟ್ಟದ ಪ್ರದರ್ಶನವನ್ನು ಬಾಕ್ಸ್ ಆಫೀಸ್​​ನಲ್ಲಿ ಕಾಣಲಿಲ್ಲ. ಸಿನಿಮಾ ಈ ವರೆಗೆ ಭಾರತದಲ್ಲಿ 100 ಕೋಟಿಗೂ ಹೆಚ್ಚು ಮೊತ್ತ ಗಳಿಸಿದೆ. ಆದರೆ ಕಳೆದ ‘ಅವತಾರ್’ ಸಿನಿಮಾಗಳಿಗೆ ಹೋಲಿಸಿದರೆ ಇದು ಭಾರಿ ದೊಡ್ಡ ಗಳಿಕೆ ಅಲ್ಲ.

ಇದೀಗ ‘ಅವತಾರ್ 3’ ಸಿನಿಮಾದ ಬಳಿಕ ಮತ್ತೊಂದು ಹಾಲಿವುಡ್ ಸಿನಿಮಾ ಭಾರತದ ಬಾಕ್ಸ್ ಆಫೀಸ್​​ನಲ್ಲಿ ಮುಗ್ಗರಿಸಿದೆ. ‘ಅನಕೊಂಡ’ ಸಿನಿಮಾ ಸರಣಿ ವಿಶ್ವದ ಜನಪ್ರಿಯ ಸಿನಿಮಾ ಸರಣಿಗಳಲ್ಲಿ ಒಂದಾಗಿದೆ. ಇದೇ ಸಿನಿಮಾ ಸರಣಿಯ ಆರನೇ ಸಿನಿಮಾ ಎರಡು ದಿನದ ಹಿಂದೆಯಷ್ಟೆ ಭಾರತದಲ್ಲಿ ಬಿಡುಗಡೆ ಆಗಿದೆ. ಮೊದಲ ದಿನ 1.50 ಕೋಟಿ ರೂಪಾಯಿ ಹಣವನ್ನು ಸಿನಿಮಾ ಗಳಿಸಿತ್ತು. ಆದರೆ ಎರಡೇ ದಿನದಲ್ಲೇ ಸಿನಿಮಾ ಮುಗ್ಗರಿಸಿದೆ. ಎರಡನೇ ದಿನ ಒಂದು ಕೋಟಿ ರೂಪಾಯಿ ಹಣವನ್ನೂ ಸಹ ಈ ಸಿನಿಮಾ ಭಾರತದ ಬಾಕ್ಸ್ ಆಫೀಸ್​​ನಲ್ಲಿ ಗಳಿಕೆ ಮಾಡಿಲ್ಲ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *