ಆರೋಗ್ಯ ತಜ್ಞರು ಎಚ್ಚರಿಸುವ ಕಾರಣಗಳೇನು?
ಉಪ್ಪಿನಕಾಯಿ ಕೇವಲ ಉಪ್ಪು ಮತ್ತು ಮೆಣಸಿನಕಾಯಿ ಮಾತ್ರವಲ್ಲ. ಅದರ ತಯಾರಿಕೆ ಮತ್ತು ಸಂರಕ್ಷಣೆಯ ಪ್ರಕ್ರಿಯೆಯಲ್ಲಿ ಹಲವು ರಾಸಾಯನಿಕ ಬದಲಾವಣೆಗಳು ನಡೆಯುತ್ತವೆ. ಇವುಗಳಲ್ಲಿ ಕೆಲವು ಸಹಜ ಹಾಗೂ ಅಗತ್ಯವಾಗಿದ್ದರೆ, ಕೆಲವು ಅತಿಯಾದಾಗ ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಉಪ್ಪಿನಕಾಯಿಯ ಮುಖ್ಯ ಅಂಶವೇ ಸೋಡಿಯಂ ಕ್ಲೋರೈಡ್ (ಉಪ್ಪು). ಇದು ಸೂಕ್ಷ್ಮಾಣುಗಳ ಬೆಳವಣಿಗೆಯನ್ನು ತಡೆಯುವ ಮೂಲಕ ಆಹಾರವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ ಉಪ್ಪಿನ ಅತಿಸೇವನೆಯಿಂದ ರಕ್ತದೊತ್ತಡ, ಹೃದಯ ಹಾಗೂ ಕಿಡ್ನಿ ಸಮಸ್ಯೆಗಳ ಅಪಾಯ ಹೆಚ್ಚಾಗುತ್ತದೆ. ಅದೇ ರೀತಿ ವಿನೆಗರ್ ಅಥವಾ ಹುಳಿ ದ್ರಾವಣದಲ್ಲಿರುವ ಎಸಿಟಿಕ್ ಆಮ್ಲ ಮತ್ತು ನಿಂಬೆಹಣ್ಣಿನ ಸಿಟ್ರಿಕ್ ಆಮ್ಲ ಸಂರಕ್ಷಣೆಗೆ ಸಹಾಯಕವಾದರೂ, ಹೆಚ್ಚು ಆಮ್ಲೀಯತೆ ಜಠರದ ಕೆರಳಿಕೆ ಮತ್ತು ಆಸಿಡ್ ಸಮಸ್ಯೆಗಳಿಗೆ ಕಾರಣವಾಗಬಹುದು.
ಮೆಣಸಿನಕಾಯಿಯ ಖಾರಕ್ಕೆ ಕಾರಣವಾಗುವ ಕ್ಯಾಪ್ಸೈಸಿನ್ ಅಲ್ಪ ಪ್ರಮಾಣದಲ್ಲಿ ಉಪಯುಕ್ತವಾದರೂ, ಹೆಚ್ಚಾದರೆ ಗ್ಯಾಸ್ಟ್ರೈಟಿಸ್ ಹಾಗೂ ಹೊಟ್ಟೆಯ ಒಳಪದರಕ್ಕೆ ಹಾನಿ ಉಂಟುಮಾಡಬಹುದು. ಉಪ್ಪಿನಕಾಯಿಯಲ್ಲಿ ಬಳಸುವ ಎಣ್ಣೆಯಲ್ಲಿರುವ ಕೊಬ್ಬುಗಳು (ಟ್ರೈಗ್ಲಿಸರೈಡ್‌ಗಳು) ಅತಿಯಾದಾಗ ಕೊಲೆಸ್ಟ್ರಾಲ್ ಮತ್ತು ಹೃದಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಹಲವು ಉಪ್ಪಿನಕಾಯಿಗಳು ಹುದುಗುವಿಕೆ (ಫರ್ಮೆಂಟೇಶನ್) ಪ್ರಕ್ರಿಯೆ ಮೂಲಕ ತಯಾರಾಗುತ್ತವೆ. ಈ ವೇಳೆ ಲ್ಯಾಕ್ಟಿಕ್ ಆಮ್ಲ ರೂಪುಗೊಳ್ಳುತ್ತದೆ, ಇದು ಸಂರಕ್ಷಣೆಗೆ ಸಹಕಾರಿ. ಆದರೆ ಸರಿಯಾದ ಸ್ವಚ್ಛತೆ ಮತ್ತು ಸಂಗ್ರಹಣೆ ಇಲ್ಲದಿದ್ದರೆ, ಅಪಾಯಕಾರಿ ವಿಷಕಾರಿ ಸಂಯುಕ್ತಗಳು ಕೂಡ ರೂಪುಗೊಳ್ಳುವ ಸಾಧ್ಯತೆ ಇದೆ.
ಇತ್ತೀಚಿನ ವಾಣಿಜ್ಯ ಉಪ್ಪಿನಕಾಯಿಗಳಲ್ಲಿ ಸೋಡಿಯಂ ಬೆಂಜೋಯೇಟ್, ಪೊಟ್ಯಾಸಿಯಂ ಸೋರ್ಬೇಟ್ ಮುಂತಾದ ಕೃತಕ ಸಂರಕ್ಷಕಗಳು, ಬಣ್ಣಗಳು ಹಾಗೂ ರುಚಿವರ್ಧಕಗಳು ಸೇರಿರುವುದು ಸಾಮಾನ್ಯ. ಇವುಗಳ ದೀರ್ಘಕಾಲೀನ ಸೇವನೆ ಮಕ್ಕಳಲ್ಲಿ ಅಲರ್ಜಿ, ಅತಿಚಟುವಟಿಕೆ ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಅತಿದೊಡ್ಡ ಅಪಾಯವು ತಪ್ಪಾದ ಸಂಗ್ರಹಣೆಯಿಂದ ಉಂಟಾಗುವ ಅಫ್ಲಾಟಾಕ್ಸಿನ್, ಬೊಟುಲಿನಮ್ ಟಾಕ್ಸಿನ್ ಮುಂತಾದ ವಿಷಗಳಿಂದ. ಇವು ಯಕೃತ್ತಿಗೆ ಹಾನಿ ಉಂಟುಮಾಡುವ ಹಾಗೂ ಜೀವಾಪಾಯಕ್ಕೆ ಕಾರಣವಾಗುವಷ್ಟು ಗಂಭೀರವಾಗಿವೆ. ಹೀಗಾಗಿ, ಉಪ್ಪಿನಕಾಯಿಯನ್ನು ಸಂಪೂರ್ಣವಾಗಿ ತ್ಯಜಿಸಬೇಕೆಂದಲ್ಲಮಿತಿ ಅತ್ಯಂತ ಮುಖ್ಯ.
For More Updates Join our WhatsApp Group :




