ಜನವರಿ–ಮಾರ್ಚ್ ಕ್ವಾರ್ಟರ್‌ಗೆ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಇಲ್ಲ.
ನವದೆಹಲಿ : ಸಾಮಾನ್ಯ ಜನರು ಅತಿಹೆಚ್ಚಾಗಿ ಬಳಸುವ ಅಂಚೆ ಕಚೇರಿಯ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಪರಿಷ್ಕರಣೆ ಮಾಡಲಾಗಿದೆ. ಈ ಹಣಕಾಸು ವರ್ಷದ ಕೊನೆಯ ಕ್ವಾರ್ಟರ್ ಆಗಿರುವ 2026ರ ಜನವರಿಯಿಂದ ಮಾರ್ಚ್ವರೆಗಿನ ಅವಧಿಗೆ ಪರಿಷ್ಕೃತ ಬಡ್ಡಿದರ ಪ್ರಕಟಿಸಲಾಗಿದೆ. ಹಣಕಾಸು ಸಚಿವಾಲಯದ ಅಡಿಗೆ ಬರುವ ಆರ್ಥಿಕ ವ್ಯವಹಾರಗಳ ಇಲಾಖೆ ಹೊರಡಿಸಿದ ಪ್ರಕಟಣೆ ಪ್ರಕಾರ, ಈ ಕ್ವಾರ್ಟರ್ನಲ್ಲಿ ಯಾವುದೇ ಸ್ಮಾಲ್ ಸೇವಿಂಗ್ಸ್ ಸ್ಕೀಮ್ಗಳಿಗೆ ಬಡ್ಡಿದರದಲ್ಲಿ ಬದಲಾವಣೆ ಮಾಡಲಾಗಿಲ್ಲ. ಹಿಂದೆ ಇದ್ದ ದರಗಳೇ ಮುಂದುವರಿಯಲಿವೆ.
ಆರ್ಬಿಐನ ರಿಪೋ ದರಗಳು ಇಳಿಕೆಯಾದ ಬಳಿಕ ಅನೇಕ ಬ್ಯಾಂಕುಗಳು ತಮ್ಮ ಫಿಕ್ಸೆಡ್ ಡೆಪಾಸಿಟ್ ಪ್ಲಾನ್ಗಳಿಗೆ ಬಡ್ಡಿದರ ತಗ್ಗಿಸಿವೆ. ಆದರೆ, ಅಂಚೆ ಕಚೇರಿಯ ವಿವಿಧ ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರ ತಗ್ಗಿಲ್ಲ ಎಂಬುದು ಗಮನಾರ್ಹ.
2026ರ ಜನವರಿಯಿಂದ ಮಾರ್ಚ್ನ ಕ್ವಾರ್ಟರ್ನಲ್ಲಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ
- ಸುಕನ್ಯ ಸಮೃದ್ಧಿ ಸ್ಕೀಮ್: ಬಡ್ಡಿದರ ಶೇ. 8.2
- ಪಬ್ಲಿಕ್ ಪ್ರಾವಿಡೆಂಟ್ ಫಂಡ್: ಬಡ್ಡಿದರ ಶೇ. 7.1
- ಕಿಸಾನ್ ವಿಕಾಸ್ ಪತ್ರ: ಬಡ್ಡಿದರ ಶೇ. 7.5
- ರಾಷ್ಟ್ರೀಯ ಉಳಿತಾಯ ಪತ್ರ (ಎನ್ಎಸ್ಸಿ): ಶೇ. 7.7 ಬಡ್ಡಿ
- ಮಾಸಿಕ ಆದಾಯ ಯೋಜನೆ (ಎಂಐಎಸ್): ಶೇ. 7.4 ಬಡ್ಡಿ
- ಪೋಸ್ಟ್ ಆಫೀಸ್ ಆವರ್ತನ ಠೇವಣಿ (ಆರ್ಡಿ): ಬಡ್ಡಿದರ ಶೇ. 6.7
- ಟೈಮ್ ಡೆಪಾಸಿಟ್: ಬಡ್ಡಿದರ ಶೇ. 6.9ರಿಂದ ಶೇ. 7.5
- ಪೋಸ್ಟ್ ಆಫೀಸ್ ಸೇವಿಂಗ್ಸ್ ಅಕೌಂಟ್: ಬಡ್ಡಿದರ ಶೇ. 4
- ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್ಸಿಎಸ್ಎಸ್): ಶೇ. 8.2 ಬಡ್ಡಿ
- ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್: ಶೇ. 7.5 ಬಡ್ಡಿ
ಸರ್ಕಾರವು ಪ್ರತೀ ಕ್ವಾರ್ಟರ್ಗೂ ಬಡ್ಡಿದರ ಪರಿಷ್ಕರಿಸುತ್ತದೆ. 2023-24ರ ಕೊನೆಯ ಕ್ವಾರ್ಟರ್ನಲ್ಲಿ ಬಡ್ಡಿದರದಲ್ಲಿ ಬದಲಾವಣೆ ಮಾಡಲಾಗಿತ್ತು. ಅದಾದ ಬಳಿಕ ಎರಡು ವರ್ಷದಿಂದ ಬದಲಾವಣೆ ಆಗಿಲ್ಲ.
ಬಡ್ಡಿದರ ಪರಿಷ್ಕರಣೆಗೆಂದೇ ಒಂದು ಸಮಿತಿ
ಪೋಸ್ಟ್ ಆಫೀಸ್ ಸ್ಕೀಮ್ ಅಥವಾ ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರ ಎಷ್ಟು ನಿಗದಿ ಮಾಡಬೇಕೆಂದು ನಿರ್ಧರಿಸಲು ಸರ್ಕಾರ ಒಂದು ಸಮಿತಿಯನ್ನೇ ರಚಿಸಿದೆ. ಶ್ಯಾಮಲಾ ಗೋಪಿನಾಥ್ ನೇತೃತ್ವದ ಸಮಿತಿ ಸಲಹೆ ನೀಡಿರುವ ವಿಧಾನದ ಆಧಾರದ ಮೇಲೆ ಬಡ್ಡಿದರ ಪರಿಷ್ಕರಣೆ ಮಾಡಲಾಗುತ್ತದೆ.
For More Updates Join our WhatsApp Group :



