ಥಿಯೇಟರ್‌ನಲ್ಲಿ ಫ್ಲಾಪ್; ಒಟಿಟಿಯಲ್ಲಿ? ನೆಟ್ಫ್ಲಿಕ್ಗೆ ಬರ್ತಿದೆ ‘ಅಖಂಡ 2’
ಥಿಯೇಟರ್‌ನಲ್ಲಿ ಸಿನಿಮಾ ಹಿಟ್ ಆಗಿ, ಅದೇ ಚಿತ್ರವನ್ನು ಒಟಿಟಿಯಲ್ಲಿ ನೋಡಿ ಇಷ್ಟ ಪಡದೇ ಇದ್ದ ಉದಾಹರಣೆ ಸಾಕಷ್ಟಿದೆ. ಅದೇ ರೀತಿ ಥಿಯೇಟರ್‌ನಲ್ಲಿ ನಿರ್ಮಾಪಕರಿಗೆ ನಷ್ಟ ಮಾಡಿದ ಕೆಲ ಚಿತ್ರಗಳು ಒಟಿಟಿಯಲ್ಲಿ ಜನರಿಂದ ಮೆಚ್ಚುಗೆ ಪಡೆದಿದ್ದೂ ಇದೆ. ಈಗ ತೆಲುಗಿನ ‘ಅಖಂಡ 2’ ಒಟಿಟಿಗೆ ಕಾಲಿಡುತ್ತಿದೆ. ಇದರ ಭವಿಷ್ಯವನ್ನು ಒಟಿಟಿ ವೀಕ್ಷಕರು ನಿರ್ಧರಿಸಲಿದ್ದಾರೆ.
‘ಅಖಂಡ’ ಸಿನಿಮಾ 2021ರಲ್ಲಿ ರಿಲೀಸ್ ಆಗಿ ಹಿಟ್ ಆಯಿತು. ಈ ಚಿತ್ರದಲ್ಲಿ ಬಾಲಯ್ಯ ನಟಿಸಿದ್ದರು. ಅದೇ ರೀತಿ 2025ರಲ್ಲಿ ‘ಅಖಂಡ 2’ ಚಿತ್ರವನ್ನು ತರಲಾಯಿತು. ಈ ಸಿನಮಾಗೆ ಬೋಯಪಾಟಿ ಶ್ರೀನು ನಿರ್ದೇಶನ ಇದೆ. ಈ ಚಿತ್ರವನ್ನು ಜನರು ಅಷ್ಟಾಗಿ ಇಷ್ಟಪಟ್ಟಿಲ್ಲ. ಈ ಸಿನಿಮಾದಲ್ಲಿ ಬಾಲಯ್ಯ ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಹಿಂದೂ ಧರ್ಮದ ಬಗ್ಗೆ ಹೇಳಲಾಗಿದೆ. ಈ ಚಿತ್ರ ನಿರ್ಮಾಪಕರಿಗೆ ನಷ್ಟವನ್ನುಂಟು ಮಾಡಿದೆ ಎನ್ನಲಾಗಿದೆ.
ಈಗ ಸಿನಿಮಾ ಒಟಿಟಿಯಲ್ಲಿ ಬರಲು ರೆಡಿ ಆಗಿದೆ. ನೆಟ್ಫ್ಲಿಕ್ಸ್ನಲ್ಲಿ ಜನವರಿ 9ರಂದು ಸಿನಿಮಾ ಪ್ರಸಾರ ಆರಂಭಿಸಲಿದೆ. ಈ ಚಿತ್ರ ನೋಡಲು ಕೆಲವರು ಕಾದಿದ್ದಾರೆ. ಥಿಯೇಟರ್‌ನಲ್ಲಿ ಚಿತ್ರವನ್ನು ಮಿಸ್ ಮಾಡಿಕೊಂಡವರು ಒಟಿಟಿಯಲ್ಲಿ ವೀಕ್ಷಣೆ ಮಾಡಬಹುದು. ಇಲ್ಲಿ ಜನರು ಚಿತ್ರವನ್ನು ಕೈ ಹಿಡಿಯುತ್ತಾರಾ ಎಂಬ ಕುತೂಹಲ ಮೂಡಿದೆ. ಕನ್ನಡದಲ್ಲೂ ಸಿನಿಮಾ ವೀಕ್ಷಣೆಗೆ ಲಭ್ಯವಿದೆ.
ಬಾಲಯ್ಯ ಸಿನಿಮಾಗಳಲ್ಲಿ ಆ್ಯಕ್ಷನ್ ಭರ್ಜರಿಯಾಗೇ ಇರುತ್ತವೆ. ಅದರಲ್ಲೂ ಅವರ ಸಿನಿಮಾಗಳಲ್ಲಿ ಲಾಜಿಕ್ಗಳನ್ನು ಮೂಟೆ ಕಟ್ಟಿ ಅಟ್ಟದ ಮೇಲೆ ಇಡಲಾಗುತ್ತದೆ. ‘ಅಖಂಡ 2’ ಚಿತ್ರದಲ್ಲೂ ಇದೇ ತಂತ್ರ ಮಾಡಲಾಗಿತ್ತು. ಈ ಕಾರಣದಿಂದಲೇ ಕೆಲವರಿಗೆ ಸಿನಿಮಾ ಇಷ್ಟ ಆಗಿಲ್ಲ. ಗ್ರಾಫಿಕ್ಸ್ ಕೂಡ ಕೆಲವು ಕಡೆಗಳಲ್ಲಿ ಕೈ ಕೊಟ್ಟಿತ್ತು.
For More Updates Join our WhatsApp Group :




