RDX ಇಟ್ಟು ಸ್ಫೋಟಿಸುವುದಾಗಿ ಇ-ಮೇಲ್ ಸಂದೇಶ
ಬೆಂಗಳೂರು : ಇತ್ತೀಚೆಗಷ್ಟೇ ಕೋಲಾರ ಸೇರಿದಂತೆ ಮೈಸೂರು, ಬಾಗಲಕೋಟೆ, ಧಾರವಾಡ ಮತ್ತು ಗದಗ ಕೋರ್ಟ್ಗಳನ್ನ ಸ್ಫೋಟಿಸೋದಾಗಿ ಹುಸಿ ಬಾಂಬ್ ಬೆದರಿಕೆ ಬಂದಿತ್ತು. ಅಷ್ಟೇ ಅಲ್ಲದೆ ಲಾಲ್‌ಬಾಗ್ ರಸ್ತೆಯಲ್ಲಿರುವ ಪಾಸ್‌ಪೋರ್ಟ್ ಕಚೇರಿ ಸ್ಫೋಟಿಸೋದಾಗಿ ಕೂಡ ಬೆದರಿಕೆ ಹಾಕಲಾಗಿತ್ತು. ಇದೀಗ ಹೆಬ್ಬಾಳದ ಕೇಂದ್ರೀಯ ವಿದ್ಯಾಲಯಕ್ಕೆ ಬಾಂಬ್ ಬೆದರಿಕೆ ಬಂದಿದೆ. 3 ಆರ್ಡಿಎಕ್ಸ್ ಇಟ್ಟಿದ್ದಾಗಿ ವಿದ್ಯಾಲಯದ ಇ-ಮೇಲ್ ಐಡಿಗೆ ಕಿಡಿಗೇಡಿಗಳು ಸಂದೇಶ ರವಾನಿಸಿದ್ದಾರೆ.
ಪ್ರಾಂಶುಪಾಲರಿಂದ ಸದಾಶಿವನಗರ ಠಾಣೆಗೆ ದೂರು
ವಿದ್ಯಾಲಯಕ್ಕೆ ಬಾಂಬ್ ಬೆದರಿಕೆ ಇ-ಮೇಲ್ ಬರುತ್ತಿದ್ದಂತೆ ಕಾಲೇಜಿನ ಪ್ರಾಂಶುಪಾಲ ಪಿ.ಎಂ.ಪ್ರಕಾಶ್ ಅವರು ಬೆಂಗಳೂರಿನ ಸದಾಶಿವನಗರ ಠಾಣೆಗೆ ದೂರು ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಯಾವುದೇ ಆರ್ಡಿಎಕ್ಸ್ ಬಾಂಬ್ ಪತ್ತೆಯಾಗಿಲ್ಲ. ಹೀಗಾಗಿ ಇದೊಂದು ಹುಸಿ ಬಾಂಬ್ ಬೆದರಿಕೆ ಅನ್ನೋದು ಮೇಲ್ನೋಟಕ್ಕೆ ಪತ್ತೆ ಆಗಿದೆ. ಸದ್ಯ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ 5 ಕೋರ್ಟ್ ಸ್ಫೋಟಿಸೋದಾಗಿ ಬೆದರಿಕೆ ಇಮೇಲ್
ಇತ್ತೀಚೆಗೆ ರಾಜ್ಯದ 5 ಕೋರ್ಟ್‌ಗಳಿಗೆ ಬಾಂಬ್ ಸ್ಫೋಟದ ಬೆದರಿಕೆ ಸಂದೇಶ ಬಂದಿತ್ತು. ಮೈಸೂರಿನ ಹಳೇ ಕೋರ್ಟ್‌ನ ಮಧ್ಯಾಹ್ನ 1.55ಕ್ಕೆ ಸ್ಫೋಟಿಸೋದಾಗಿ ಇ-ಮೇಲ್ ಬಂದಿತ್ತು. ತಕ್ಷಣವೇ ಎಚ್ಚೆತ್ತ ನ್ಯಾಯಾಧೀಶರು, ವಕೀಲರು ಕೋರ್ಟ್ ಆವರಣದಿಂದ ಹೊರ ಬಂದಿದ್ದರು.
ಇಷ್ಟೇ ಅಲ್ಲ ಧಾರವಾಡ ಹೈಕೋರ್ಟ್, ಬಾಗಲಕೋಟ, ಗದಗ ಹಾಗೂ ಹಾಸನ ಜಿಲ್ಲಾ ನ್ಯಾಯಾಲಯ ಕೂಡ ಸ್ಫೋಟಿಸುವ ಬಗ್ಗೆ ಬೆದರಿಕೆ ಇಮೇಲ್ ಬಂದಿದ್ದವು. ಪೊಲೀಸರು ತಪಾಸಣೆ ಮಾಡಿದರೂ ಒಂದೇ ಒಂದು ಸ್ಫೋಟದ ವಸ್ತುಗಳು ಸಿಕ್ಕಿಲ್ಲ.
ಇನ್ನು ಬೆಂಗಳೂರಿನ ಕೋರಮಂಗಲದ ಪಾಸ್‌ಪೋರ್ಟ್ ಕಚೇರಿ ಸ್ಫೋಟಿಸೋದಾಗಿ ಕೂಡ ಇತ್ತೀಚೆಗೆ ಇಮೇಲ್‌ನಲ್ಲಿ ಬೆದರಿಕೆ ಸಂದೇಶ ಬಂದಿತ್ತು. ಡಾಗ್ ಸ್ಕ್ವಾಡ್, ಬಾಂಬ್ ಸ್ಕ್ವಾಡ್ ತಂಡಗಳ ಜತೆ ಕಚೇರಿಯಲ್ಲಾ ಪರಿಶೀಲಿಸಲಾಗಿತ್ತು. ಆದರೆ ಯಾವುದೇ ಶಂಕಾಸ್ಪದ ಹಾಗೂ ಸ್ಪೋಟಕ ವಸ್ತುಗಳು ಪತ್ತೆಯಾಗಿರಲಿಲ್ಲ. ಹಾಗಾಗಿ, ಇವು ಹುಸಿ ಬೆದರಿಕೆ ಇಮೇಲ್ ಅಂತಾ ಪೊಲೀಸರು ತೀರ್ಮಾನಿಸಿದ್ದರು.
For More Updates Join our WhatsApp Group :



