ಸೊಳ್ಳೆಗಳ ಕಾಟದಿಂದ ಶಾಶ್ವತ ಪರಿಹಾರ: ನೆಲ ಒರೆಸುವ ನೀರಿಗೆ ಈ 2 ವಸ್ತು ಸೇರಿಸಿ.

ಸೊಳ್ಳೆಗಳ ಕಾಟದಿಂದ ಶಾಶ್ವತ ಪರಿಹಾರ: ನೆಲ ಒರೆಸುವ ನೀರಿಗೆ ಈ 2 ವಸ್ತು ಸೇರಿಸಿ.

ರಾಸಾಯನಿಕ ಸ್ಪ್ರೇ ಬೇಡ, ಈ ಮನೆಮದ್ದು ಸಾಕು!

ಚಳಿಗಾಲವೇ ಇರಲಿ ಅಥವಾ ಮಳೆಗಾಲವೇ ಇರಲಿ ಪ್ರತಿ ಋತುವಿನಲ್ಲೂ ಸೊಳ್ಳೆಗಳ ಕಾಟ ಇದ್ದೇ ಇರುತ್ತದೆ. ಇವುಗಳ ಕಾಟದಿಂದ ಮುಕ್ತಿ ಪಡೆಯಲು ಬಹುತೇಕರು ಸೊಳ್ಳೆ ಕಾಯಿಲೆ, ರಾಸಾಯನಿಕ ಯುಕ್ತ ಸ್ಪ್ರೇಗಳನ್ನೆಲ್ಲಾ ಬಳಕೆ ಮಾಡುತ್ತಾರೆ. ಆದ್ರೆ ಇದ್ಯಾವುದರ ಬಳಕೆ ಮಾಡದೆ ನೆಲ ಒರೆಸುವ ನೀರಿಗೆ ಈ ಎರಡು ವಸ್ತುಗಳನ್ನು ಬೆರೆಸಿ ಮನೆಯನ್ನು ಸಂಪೂರ್ಣವಾಗಿ ಕ್ಲೀನ್‌ ಮಾಡುವ ಮೂಲಕ ಸೊಳ್ಳೆಗಳು ಮನೆಯೊಳಗೆ ಪ್ರವೇಶಿಸದಂತೆ ನೋಡಿಕೊಳ್ಳಬಹುದು. 

ಸೊಳ್ಳೆ ಕೀಟಗಳ ಕಾಟ ಪ್ರತಿ ಮನೆಯಲ್ಲೂ ಇದ್ದಿದ್ದೆ. ಇವುಗಳ ಕಚ್ಚಿ ಕಿರಿಕಿರಿಯನ್ನು ಉಂಟು ಮಾಡುವುದರ ಜೊತೆಗೆ ರಾತ್ರಿ ನಿದ್ರೆಗೂ ಭಂಗ ತರುತ್ತವೆ. ಹಾಗಾಗಿ ಇವುಗಳ ಕಾಟದಿಂದ ಮುಕ್ತಿ ಪಡೆಯಲು ರಾಸಾಯನಿಕಯುಕ್ತ ಸ್ಪ್ರೇ, ಸೊಳ್ಳೆ ಕಾಯಿಲ್‌ಗಳನ್ನು ಹೆಚ್ಚಿನವರು ಬಳಕೆ ಮಾಡುತ್ತಾರೆ. ಇವುಗಳ ಬಳಕೆಯಿಂದ ಶಾಶ್ವತವಾಗಿ ಸೊಳ್ಳೆಗಳ ಕಾಟದಿಂದ ಮುಕ್ತಿ ಪಡೆಯಲು ಸಾಧ್ಯವಿಲ್ಲ ಜೊತೆಗೆ ನಮ್ಮ ಆರೋಗ್ಯದ ದೃಷ್ಟಿಯಿಂದ ಇವುಗಳ ಬಳಕೆ ಅಷ್ಟು ಸೂಕ್ತವಲ್ಲ.  ಹೀಗಿರುವಾಗ ಸೊಳ್ಳೆ, ಕೀಟಗಳ ಹಾವಳಿಯಿಂದ ಶಾಶ್ವತ ಪರಿಹಾರವನ್ನು ಪಡೆಯಲು ಆಲಂ ಕಲ್ಲು (ಪಟಿಕ) ಮತ್ತು ನಿಂಬೆರಸವನ್ನು ನೆಲ ಒರೆಸುವ ನೀರಿಗೆ ಸೇರಿಸಿ. ಈ ಎರಡು ವಸ್ತುಗಳನ್ನು ನೆಲ ಒರೆಸುವ ನೀರಿಗೆ ಸೇರಿಸಿ ಮನೆಯನ್ನು ಕ್ಲೀನ್‌ ಮಾಡುವುದರಿಂದ ಸೊಳ್ಳೆ, ಕೀಟಗಳು ಎಂದಿಗೂ ಮನೆಯನ್ನು ಪ್ರವೇಶಿಸುವುದಿಲ್ಲ.

ಸೊಳ್ಳೆಗಳ ಕಾಟದಿಂದ ಮುಕ್ತಿ ಪಡೆಯಲು ಸುಲಭ ಮನೆಮದ್ದು:

ನಿಂಬೆ ರಸ ಮತ್ತು ಪಟಿಕ ಎರಡೂ ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರನಾಶಕ ಗುಣಗಳನ್ನು ಹೊಂದಿದ್ದು, ಇವು  ಬ್ಯಾಕ್ಟೀರಿಯಾ, ಸೂಕ್ಷ್ಮಜೀವಿಗಳು, ಸೊಳ್ಳೆಗಳು ಮತ್ತು ನೊಣಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ನಿಂಬೆಯ ರಿಫ್ರೆಶ್ ಆಮ್ಲೀಯ ಗುಣಗಳು ಸೊಳ್ಳೆಗಳು ಮತ್ತು ನೋಣಗಳನ್ನು ಮನೆಯಿಂದ ದೂರವಿಡುವಲ್ಲಿ ಪರಿಣಾಮಕಾರಿಯಾಗಿದೆ.  ಆದರೆ ಪಟಿಕದ ಕೀಟನಾಶಕ ಗುಣಗಳು ಅವುಗಳನ್ನು ಮನೆಯಿಂದ ಹೊರಗಿಡಲು ಸಹಾಯ ಮಾಡುತ್ತದೆ. ಈ ಎರಡೂ ವಸ್ತುಗಳನ್ನು ನೆಲ ಒರೆಸುವ ನೀರಿಗೆ ಸೇರಿಸಿ ಮನೆ ಕ್ಲೀನ್‌ ಮಾಡುವುದರಿಂದ ಸೊಳ್ಳೆ, ಕೀಟಗಳ ಕಾಟದಿಂದ ಮುಕ್ತಿ ಪಡೆಯಬಹುದು.

ಸೊಳ್ಳೆ ನಿವಾರಕ ದ್ರಾವಣವನ್ನು ತಯಾರಿಸುವುದು ಹೇಗೆ?

  • ಒಂದು ಬಕೆಟ್ ಉಗುರು ಬೆಚ್ಚಗಿನ ನೀರನ್ನು ತೆಗೆದುಕೊಳ್ಳಿ.
  • ಅದಕ್ಕೆ 2 ನಿಂಬೆಹಣ್ಣಿನ ರಸವನ್ನು ಹಿಂಡಿ ಮತ್ತು ಅರ್ಧ ಟೀ ಚಮಚ ಪಟಿಕ ಪುಡಿಯನ್ನು ಸೇರಿಸಿ.
  • ಈಗ ಅದನ್ನು ಚೆನ್ನಾಗಿ ಮಿಶ್ರಣ ಮಾಡಿ.
  • ಈ ನೀರಿನಿಂದ ವಾರಕ್ಕೆ 2-3 ಬಾರಿ ಮನೆಯನ್ನು ಒರೆಸಿ.
  • ಬಯಸಿದರೆ, ನೀವು ಈ ದ್ರಾವಣವನ್ನು ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ ಮನೆಯ ಮೂಲೆಗಳಲ್ಲಿ, ಕಿಟಕಿಗಳು, ಬಾಗಿಲುಗಳ ಬಳಿ ಮತ್ತು ಸೊಳ್ಳೆ, ಕೀಟಗಳು ಹೆಚ್ಚು ಓಡಾಡುವ ಸ್ಥಳಗಳಲ್ಲಿ ಸಿಂಪಡಿಸಬಹುದು.

ಈ ಮನೆಮದ್ದು ಸೊಳ್ಳೆಗಳ ಕಾಟದಿಂದ ಮುಕ್ತಿ ನೀಡುವುದು ಮಾತ್ರವಲ್ಲ, ನೊಣಗಳು ಮತ್ತು ಸಣ್ಣ ಕೀಟಗಳನ್ನು ಸಹ ಕಡಿಮೆ ಮಾಡುತ್ತದೆ. ಮನೆಗೆ ತಾಜಾ ಮತ್ತು ಸ್ವಚ್ಛವಾದ ಸುವಾಸನೆಯನ್ನು ನೀಡುತ್ತದೆ. ಸೊಳ್ಳೆ ನಿವಾರಕ ಸ್ಪ್ರೇಗಳನ್ನು ಪದೇ ಪದೇ ಬಳಸಿ, ಯಾವುದೇ ರಿಸಲ್ಟ್‌ ಸಿಕ್ಕಿಲ್ಲ ಎಂದಾದ್ರೆ, ಸೊಳ್ಳೆಗಳನ್ನು ಓಡಿಸಲು ಒಮ್ಮೆ ಈ ಮನೆಮದ್ದನ್ನು ಟ್ರೈ ಮಾಡಿ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *