ಜ.14ರಿಂದ ಲಾಲ್​​ಬಾಗ್​ನಲ್ಲಿ ಫ್ಲವರ್ ಶೋ.

ಜ.14ರಿಂದ ಲಾಲ್​​ಬಾಗ್​ನಲ್ಲಿ ಫ್ಲವರ್ ಶೋ.

ಗಣರಾಜ್ಯೋತ್ಸವ ಅಂಗವಾಗಿ 219ನೇ ಫಲಪುಷ್ಪ ಪ್ರದರ್ಶನ ಆರಂಭ

ಬೆಂಗಳೂರು ಸಸ್ಯಕಾಶಿ ಲಾಲ್​ಬಾಗ್​ನಲ್ಲಿ ಫ್ಲವರ್ ಶೋ  ಅನಾವರಣಗೊಳ್ಳಲಿದೆ. ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ತೋಟಗಾರಿಕಾ ಇಲಾಖೆ ಜನವರಿ 14ರಿಂದ 26ರವರೆಗೆ 219ನೇ ಫಲಪುಷ್ಪ ಪ್ರದರ್ಶನ ಆಯೋಜನೆ ಮಾಡಿದೆ. ಈ ಬಾರಿ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಜೀವನಕ್ಕೆ ಸಂಬಂಧಿಸಿದಂತೆ ಫ್ಲವರ್ ಶೋ ಆಯೋಜಿಸಲಾಗಿದ್ದು, ಜ.14ರ ಸಂಜೆ 4 ಗಂಟೆಗೆ ಸಿಎಂ, ಡಿಸಿಎಂ ಮತ್ತು ಸಂಸದ ತೇಜಸ್ವಿ ಸೂರ್ಯ ಕುಟುಂಬ ಸದಸ್ಯರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ.

ತೋಟಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಆರ್.ಗಿರೀಶ್ಹೇಳಿದ್ದಿಷ್ಟು

ಫ್ಲವರ್ ಶೋ ಆಯೋಜನೆ ಬಗ್ಗೆ ತೋಟಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಆರ್.ಗಿರೀಶ್​ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಜ.14ರಂದು ಉದ್ಘಾಟನೆ ಬಳಿಕ ಸಂಜೆ 5 ಗಂಟೆ ನಂತರ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶವಿದೆ. ಇದು 219ನೇ ಫಲಪುಷ್ಪ ಪ್ರದರ್ಶನ. ಮೊದಲನೇ ಪ್ರದರ್ಶನ 1912ರಲ್ಲಿ ನಡೆದಿತ್ತು ಎಂದರು.

ಫ್ಲವರ್ ಶೋನಲ್ಲಿ ಏನೆಲ್ಲಾ ಇರಲಿದೆ

ಪರಿಸರ, ಪ್ರಾಣಿ-ಪಕ್ಷಿಗಳ ಪ್ರೇಮಿ, ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಜೀವನ ಕುರಿತು ಈ ಭಾರಿಯ ಪ್ಲವರ್ ಶೋ ಇರಲಿದೆ. ಗಾಜಿನ ಮನೆಯಲ್ಲಿ ಬೃಹತ್ ಬೆಟ್ಟ, ನೀರಿನ ಹರಿ, ಪ್ರಾಣಿ ಪಕ್ಷಿಗಳಿಂದ ಕಂಗೊಳಿಸಲಿದೆ. ತೇಜಸ್ವಿ ಹಾಗೂ ಮಡದಿಯ ಪ್ರತಿಕೃತಿ, ಕರ್ವಾಲೋ ಕಾದಂಬರಿ ಕಾಲ್ಪನಿಕ ಚಿತ್ರಣ, ಬಿಳಿಗಿರ ರಂಗನ ಬೆಟ್ಟದ ಹಳ್ಳಿ ಸೊಗಡು, ಜಾನಪದ, ಡೊಳ್ಳು ಕುಣಿತ, ನಂದಿಗಿರಿಧಾಮ, ನಾರುಬೇರಿನ ಪ್ರದರ್ಶನ ಇರಲಿದೆ.

ತಮಿಳುನಾಡು, ಕೇರಳ, ಮಹಾರಾಷ್ಟ, ಡಾರ್ಜಿಲಿಂಗ್, ವಯನಾಡು ಕಡೆಯಿಂದ ಹೂಗಳು ಬರಲಿವೆ. 95ಕ್ಕೂ ಹೆಚ್ಚು ವೈವಿಧ್ಯಮಯ ಹಾಗೂ 32 ಲಕ್ಷಕ್ಕೂ ಹೆಚ್ಚು ಹೂಗಳಿಂದ ಅಲಂಕಾರ ಮಾಡಲಾಗುವುದು. ಈ ಬಾರಿ ಲಾಲ್​ಬಾಗ್​ನಲ್ಲಿ ಬೆಳೆದಿರುವ 27 ಲಕ್ಷ ಹೂ ಬಳಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಪ್ರವೇಶ ಶುಲ್ಕ ಎಷ್ಟು?

ಇನ್ನು ಲಾಲ್​​ಬಾಗ್​ ಫ್ಲವರ್ ಶೋಗೆ ಟಿಕೆಟ್​ ದರ ನಿಗದಿ ಮಾಡಲಾಗಿದೆ. ವಯಸ್ಕರಿಗೆ ಸಾಮಾನ್ಯ ದಿನಗಳಲ್ಲಿ 80 ರೂ ಹಾಗೂ ರಜೆ ದಿನಗಳಲ್ಲಿ 100 ರೂ ಟಿಕೆಟ್ ದರ ಇರಲಿದ್ದು, ಮಕ್ಕಳಿಗೆ 30 ರೂ, 6 ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶ ಇರಲಿದೆ. ಅಷ್ಟೇ ಅಲ್ಲದೆ ಫಲಫುಷ್ಪ ಪ್ರದರ್ಶನಕ್ಕೆ ಆಗಮಿಸುವವರಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕೂಡ ಮಾಡಲಾಗಿದೆ.

ಕಳೆದ ಬಾರಿ 3 ಕೋಟಿ 5 ಲಕ್ಷ ರೂ ಆದಾಯ ಬಂದಿತ್ತು. ಈ ಬಾರಿ 3 ಕೋಟಿ 2 ಲಕ್ಷ ರೂ ಖರ್ಚು ಮಾಡಿ ಫಲಪುಷ್ಪ ಪ್ರದರ್ಶನ ಮಾಡಲಾಗುತ್ತಿದ್ದು, 10 ಲಕ್ಷಕ್ಕೂ ಅಧಿಕ ಜನರು ಬರುವ ನಿರೀಕ್ಷೆ ಇದೆ ಎಂದು  ತೋಟಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಆರ್.ಗಿರೀಶ್ ಹೇಳಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *