ಸಂಕ್ರಾಂತಿ ಸಂಭ್ರಮದಲ್ಲಿ ಮೆಟ್ರೋ ಪ್ರಯಾಣಿಕರಿಗೆ ಶುಭ ಸುದ್ದಿ.

ಸಂಕ್ರಾಂತಿ ಸಂಭ್ರಮದಲ್ಲಿ ಮೆಟ್ರೋ ಪ್ರಯಾಣಿಕರಿಗೆ ಶುಭ ಸುದ್ದಿ.

ಇಂದಿನಿಂದ QR ಆಧಾರಿತ ದಿನ/ಮಲ್ಟಿ ಡೇ ಪಾಸ್ ಲಭ್ಯ.

ಬೆಂಗಳೂರು : ಸಂಕ್ರಾಂತಿ ಹಬ್ಬದ ದಿನವೇ ಪ್ರಯಾಣಿಕರಿಗೆ ನಮ್ಮ ಮೆಟ್ರೋ ಗುಡ್ ನ್ಯೂಸ್ ಕೊಟ್ಟಿದ್ದು, ಇಂದಿನಿಂದ ಮೆಟ್ರೋ ನಿಲ್ದಾಣದಲ್ಲಿ ಕ್ಯೂಆರ್​ ಆಧಾರಿತ ದಿನ,‌ ಮೂರು ದಿನ ಮತ್ತು 5 ದಿನಗಳ ಪಾಸ್ ಲಭ್ಯವಿರಲಿದೆ. 1, 3, 5 ದಿನಗಳ ಅನಿಯಮಿತ ಪ್ರಯಾಣದ ಪಾಸ್​​ನ BMRCL ಪರಿಚಯಿಸಿದ್ದು, ಡಿಜಿಟಲ್ ಟಿಕೆಟ್ ವ್ಯವಸ್ಥೆ ಉತ್ತೇಜಿಸಲು ಈ​ ಕ್ರಮ ಕೈಗೊಳ್ಳಲಾಗಿದೆ. ಇಷ್ಟುದಿನ ಕಾಂಟ್ಯಾಕ್ಟ್ ಲೆಸ್ ಸ್ಮಾರ್ಟ್​​ ಕಾರ್ಡ್​ ಮೂಲಕ ಮಾತ್ರ ಅನಿಯಮಿತ ಪಾಸ್ ಇತ್ತು. ಅದಕ್ಕಾಗಿ ಭದ್ರತಾ ಠೇವಣಿ 50 ರೂಪಾಯಿ ಪಾವತಿ ಮಾಡಬೇಕಿತ್ತು. ಆದರಿನ್ನು ಮೊಬೈಲ್‌ನಲ್ಲೇ QR ಕೋಡ್ ಬಳಸಿ ಪಾಸ್ ಪಡೆಯಬಹುದಾಗಿದ್ದು, ಯಾವುದೇ ಭದ್ರತಾ ಠೇವಣಿ ಇರುವುದಿಲ್ಲ. 1 ದಿನದ ಮೆಟ್ರೋ ಪ್ರಯಾಣ ಪಾಸ್​​ಗೆ 250 ರೂ., 3 ದಿನಗಳ ಮೆಟ್ರೋ ಪ್ರಯಾಣ ಪಾಸ್​​ಗೆ 550 ರೂ. ಮತ್ತು 5 ದಿನಗಳ ಮೆಟ್ರೋ ಪ್ರಯಾಣ ಪಾಸ್​ಗೆ 850 ರೂ. ನಿಗದಿ ಮಾಡಲಾಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *