RV ರಸ್ತೆ–ಬೊಮ್ಮಸಂದ್ರ ಮಾರ್ಗದಲ್ಲಿ ಹೆಡ್‌ವೇ 10 ನಿಮಿಷಕ್ಕೆ ಇಳಿಕೆ.
ಬೆಂಗಳೂರು : ನಮ್ಮ ಮೆಟ್ರೋದ ಯೆಲ್ಲೋ ಲೈನ್ನಲ್ಲಿ 7ನೇ ರೈಲು ಸಂಚಾರ ಇಂದಿನಿಂದ ಆರಂಭಗೊಂಡಿದೆ. ಆ ಮೂಲಕ ಆರ್‌ವಿ ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ಇದುವರೆಗೆ 13-15 ನಿಮಿಷಗಳ ಅಂತರದಲ್ಲಿ ಸಂಚರಿಸುತ್ತಿದ್ದ ರೈಲುಗಳ ಸಮಯ ಈಗ 10 ನಿಮಿಷಕ್ಕೆ ಇಳಿದಿದ್ದು, ದೈನಂದಿನ ಪ್ರಯಾಣಿಕರಿಗೆ ಖುಷಿ ತಂದಿದೆ. ಈ ಮಾರ್ಗದಲ್ಲಿ ಇದುವರೆಗೆ ಆರು ಮೆಟ್ರೋ ರೈಲುಗಳು ಮಾತ್ರ ಸಂಚಾರ ನಡೆಸುತ್ತಿದ್ದವು.
7ನೇ ರೈಲಿನ ಸೇರ್ಪಡೆಯಿಂದಾಗಿ, ರೈಲಿಗೆ ಪ್ರಯಾಣಿಕರು ಕಾಯಬೇಕಾದ ಸಮಯ ಇಳಿಕೆಯಾಗಿದೆ. ನಮ್ಮ ಮೆಟ್ರೋ ಒಟ್ಟು 16 ರೈಲುಗಳಿಗೆ ಆರ್ಡರ್ ನೀಡಿದ್ದು, ಈಗಾಗಲೇ ಎಂಟು ರೈಲುಗಳು ಬಿಎಂಆರ್‌ಸಿಎಲ್ ತಲುಪಿವೆ. ಎಂಟನೇ ರೈಲಿನ ಪರೀಕ್ಷೆ ನಡೆಯುತ್ತಿದ್ದು, ಶೀಘ್ರದಲ್ಲೇ ಅದು ಕೂಡ ಸೇವೆಗೆ ಲಭ್ಯವಾಗುವ ನಿರೀಕ್ಷೆಯಿದೆ.
For More Updates Join our WhatsApp Group :




