ಸೌದಿ ಅರೇಬಿಯಾದಲ್ಲಿ ಯುವತಿಯ ಸಮಯಪ್ರಜ್ಞೆಗೆ ಶ್ಲಾಘನೆ
ಸೌದಿ ಅರೇಬಿಯಾ : ಯುವತಿಯೊಬ್ಬಳು ಅಪಘಾತವಾಗುವುದನ್ನು ತಡೆದು ಇಡೀ ಕುಟುಂಬನ್ನೇ ರಕ್ಷಿಸಿರುವ ಘಟನೆ ಸೌದಿ ಅರೇಬಿಯಾದಲ್ಲಿ ನಡೆದಿದೆ. ಕಾರನ್ನು ಸರಿಯಾಗಿ ಪಾರ್ಕ್ ಮಾಡದೆ ವ್ಯಕ್ತಿಯೊಬ್ಬರು ಕಾರಿನಲ್ಲಿ ತಾಯಿ ಹಾಗೂ ಮಕ್ಕಳನ್ನು ಬಿಟ್ಟು ಹೋಗಿದ್ದರು. ಇದ್ದಕ್ಕಿದ್ದಂತೆ ಕಾರು ಹಿಮ್ಮುಖವಾಗಿ ಚಲಿಸಲು ಶುರುವಾಗಿತ್ತು, ಅಲ್ಲೇ ನಡೆದುಕೊಂಡು ಹೋಗುತ್ತಿದ್ದ ಯುವತಿಯೊಬ್ಬರು ಕೂಡಲೇ ಓಡಿ ಹೋಗಿ ಕಾರಿನಲ್ಲಿ ಕುಳಿತುಕೊಂಡು ಬ್ರೇಕ್ ಹಾಗೂ ಎಲ್ಲರ ಪ್ರಾಣ ಉಳಿಸಿದ್ದಾಳೆ. ಒಂದೆರಡು ಸೆಕೆಂಡ್ ತಡವಾಗಿದ್ದರೂ ಕಾರು ಮಧ್ಯದಾರಿಗೆ ಹೋಗಿರುತ್ತಿತ್ತು, ದೊಡ್ಡ ಅಪಘಾತದವೇ ಸಂಭವಿಸುವ ಸಾಧ್ಯತೆ ಇತ್ತು. ಆಕೆಯ ಸಮಯಪ್ರಜ್ಞೆ ಎಲ್ಲರ ಜೀವ ಉಳಿಸಿದೆ.
For More Updates Join our WhatsApp Group :




