ಆಂಜನೇಯ ದೇಗುಲದಲ್ಲಿ ನಿಗೂಢ ಗೆಜ್ಜೆ ಶಬ್ದ.

ಆಂಜನೇಯ ದೇಗುಲದಲ್ಲಿ ನಿಗೂಢ ಗೆಜ್ಜೆ ಶಬ್ದ.

3 ದಿನಗಳಿಂದ ನಿರಂತರ ಕೇಳಿಸುತ್ತಿದೆ ನಿಗೂಢ ಗೆಜ್ಜೆ ಶಬ್ದ!

ಗದಗ : ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿಯ ಆಂಜನೇಯ ದೇಗುಲದಲ್ಲಿ ನಿಗೂಢ ಗೆಜ್ಜೆ ಶಬ್ದ ಮೂರು ದಿನಗಳಿಂದ ನಿರಂತರವಾಗಿ ಕೇಳಿಬರುತ್ತಿದ್ದು, ಈ ಅನಿರೀಕ್ಷಿತ ಘಟನೆಯಿಂದ ಗ್ರಾಮಸ್ಥರಲ್ಲಿ ಭೀತಿ ಆವರಿಸಿದೆ. ಮೂಲಗಳ ಪ್ರಕಾರ, ಗ್ರಾಮದಲ್ಲಿ ನಿರ್ಮಿಸಲಾಗುತ್ತಿರುವ ಹೊಸ ದೇವಾಲಯಕ್ಕೆಂದು ತಂದ ದುರ್ಗಮ್ಮ ಮತ್ತು ಮಾಯಮ್ಮ ದೇವಿ ಮೂರ್ತಿಗಳನ್ನು ಆಂಜನೇಯ ದೇಗುಲದಲ್ಲಿ ತಾತ್ಕಾಲಿಕವಾಗಿ ಇರಿಸಿದ ನಂತರ ಗೆಜ್ಜೆನಾದ ಕೇಳಿಸಲು ಪ್ರಾರಂಭಿಸಿದೆ. ಗುರುವಾರ ರಾತ್ರಿ 8 ಗಂಟೆಯಿಂದ ಆರಂಭವಾದ ಈ ಶಬ್ದ ಇದುವರೆಗೆ ನಿಂತಿಲ್ಲ ಎಂದು ಸ್ಥಳೀಯ ನಿವಾಸಿ ಮಹೇಶ್ ತಿಳಿಸಿದ್ದಾರೆ.

ಗೆಜ್ಜೆ ಶಬ್ದ ಕೇಳಿದ ಕೂಡಲೇ ನೂರಾರು ಗ್ರಾಮಸ್ಥರು ದೇವಸ್ಥಾನಕ್ಕೆ ಓಡೋಡಿ ಬಂದಿದ್ದು, ರಾತ್ರಿಯಿಡೀ ಅಲ್ಲೇ ಜಾಗರಣೆ ಮಾಡಿದ್ದಾರೆ. ಈ ಶಬ್ದ ದೇವಸ್ಥಾನದ ಗರ್ಭಗುಡಿಯಿಂದ ಕೇಳಿಬರುತ್ತಿದೆ ಎನ್ನಲಾಗಿದೆ. ಭಯದಿಂದ ಯಾವುದೇ ಗ್ರಾಮಸ್ಥರು ಒಳಗಡೆ ಹೋಗಲು ಮುಂದಾಗಿಲ್ಲ. ಗ್ರಾಮಸ್ಥರು ಈ ಘಟನೆಯ ಬಗ್ಗೆ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ತಿಳಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ಬಂದು ಪರಿಶೀಲಿಸಬೇಕೆಂದು ಒತ್ತಾಯಿಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *