ಶಾಲೆ ಬಳಿ ಹೃದಯಾಘಾತದಿಂದ ಕುಸಿದು ಸಾ*.
ಅಸ್ಸಾಂ: ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹೃದಯಾಘಾತ ದ ಅಪಾಯ ಹೆಚ್ಚಾಗಿದೆ. ತಂದೆಯೊಬ್ಬರು ಯುಕೆಜಿಯಲ್ಲಿ ಓದುತ್ತಿದ್ದ ಮಗನ ಮಾರ್ಕ್ಸ್ಕಾರ್ಡ್ ತರಲು ಶಾಲೆಗೆ ಹೋದವರು ಹೃದಯಾಘಾತದಿಂದ ಪ್ರಾಣಬಿಟ್ಟಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ. ದೀಪಂಕರ್ ಬೋರ್ಡೊಲೊಯ್(35) ಮೃತ ವ್ಯಕ್ತಿ. ಮಗನ ಫಲಿತಾಂಶ ಬರುತ್ತೆ ಮಾರ್ಕ್ಸ್ಕಾರ್ಡ್ ತರಲು ಹೋಗಬೇಕೆಂದು, ಒಂದು ದಿನ ಕೆಲಸಕ್ಕೆ ರಜೆ ಹಾಕಿ ಅಸ್ಸಾಂನ ಜೋರ್ಹತ್ನ ಸ್ಯಾಮ್ಫೋರ್ಡ್ ಶಾಲೆಗೆ ಹೋಗಿದ್ದರು.
ಮಾರ್ಕ್ಸ್ಕಾರ್ಡ್ ಪಡೆದು ಶಾಲೆಯಿಂದ ಹೊರಗೆ ಬರುವಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಜನವರಿ 15 ರಂದು ಈ ಘಟನೆ ನಡೆದಿದೆ. ಘಟನೆಯ ಸಿಸಿಟಿವಿ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೂಡಲೇ ಶಾಲೆಯ ಸಿಬ್ಬಂದಿ ಹಾಗೂ ಪೋಷಕರು ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಅವರು ಮೃತಪಟ್ಟಿರುವುದಾಗಿ ಘೋಷಿಸಲಾಗಿದೆ.
ಘಟನೆಯ ನಂತರ, ಶಾಲಾ ಆವರಣದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದ್ದು, ಮಗುವಿನ ಪೋಷಕರು ಹಠಾತ್ ನಿಧನದಿಂದ ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳು ತೀವ್ರ ಆಘಾತಕ್ಕೊಳಗಾಗಿದ್ದಾರೆ.
ಬೋರ್ಡೊಲೊಯ್ ಅವರು ಅಸ್ಸಾಂ ಸರ್ಕಾರದ ಟಿಯೋಕ್ ವಿಭಾಗದ ನೀರಾವರಿ ಇಲಾಖೆಯಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅವರ ಪತ್ನಿ ಗೃಹಿಣಿ. ಕುಟುಂಬದ ಪ್ರಕಾರ, ಬೋರ್ಡೊಲೊಯ್ಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ.
ಯುವಕರಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿವೆ. ಕಳೆದ ವಾರ, ಜನವರಿ 11 ರಂದು, ಗಾಯಕ ಮತ್ತು ನಟ ಪ್ರಶಾಂತ್ ತಮಾಂಗ್ , 43, ಹೃದಯಾಘಾತದಿಂದ ನವದೆಹಲಿಯ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಈ ತಿಂಗಳ ಆರಂಭದಲ್ಲಿ, ವೇದಾಂತ ಅಧ್ಯಕ್ಷ ಅನಿಲ್ ಅಗರ್ವಾಲ್ ಅವರ ಪುತ್ರ ಅಗ್ನಿವೇಶ್ ಅಗರ್ವಾಲ್ (49 ) ನ್ಯೂಯಾರ್ಕ್ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು.
For More Updates Join our WhatsApp Group :




