ತುಮಕೂರಿನಲ್ಲಿ ಕರ್ನಾಟಕ ಕ್ರೀಡಾಕೂಟ 2025-26 ರ ರೋಚಕ ಫೈನಲ್
ತುಮಕೂರು: ಹಾಸನ ಮತ್ತು ದಕ್ಷಿಣ ಕನ್ನಡ ತಂಡಗಳು ತುಮಕೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ಕ್ರೀಡಾಕೂಟ 2025-26 ರ ನೆಟ್ ಬಾಲ್ ಸ್ಪರ್ಧೆಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿವೆ.
ನೆಟ್ ಬಾಲ್, ಸೈಕ್ಲಿಂಗ್ ಮತ್ತು ಕಬಡ್ಡಿ ಕ್ರೀಡೆಗಳಲ್ಲಿ ಪದಕ ನಡೆದವು. ತುಮಕೂರು ವಿಶ್ವವಿದ್ಯಾಲಯದಲ್ಲಿ ಭಾನುವಾರ ನಡೆದ ಪುರುಷರ ಫೈನಲ್ ನಲ್ಲಿ ತುಮಕೂರು ತಂಡದ ವಿರುದ್ಧ ಹಾಸನ ತಂಡ 36-35 ಅಂಕಗಳ ಅಂತರದಿಂದ ರೋಚಕವಾಗಿ ಜಯ ಸಾಧಿಸಿತು. 3ನೇ ಕ್ವಾರ್ಟರ್ ಅಂತ್ಯಕ್ಕೆ ಎರಡು ತಂಡಗಳು ತಲಾ 27 ಅಂಕಗಳಿಸಿ ಸಮಬಲ ಸಾಧಿಸಿದ್ದವು. ಇದರಿಂದ ಕೊನೆಯ ಕ್ವಾರ್ಟರ್ ನಲ್ಲಿ ಪಂದ್ಯ ರೋಚಕತೆಗೆ ತಿರುಗಿತು. ಕೊನೆ ಕ್ಷಣದಲ್ಲಿ ಆತಿಥೇಯ ತುಮಕೂರು ತಂಡವನ್ನು ಒಂದು ಅಂಕದಿಂದ ಸೋಲಿಸಿದ ಹಾಸನ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ಮೈಸೂರು ಮತ್ತು ದಕ್ಷಿಣ ಕನ್ನಡ ತಂಡಗಳು ಜಂಟಿ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡವು.
ಮಹಿಳೆಯರ ಫೈನಲ್ ಪಂದ್ಯದಲ್ಲಿ ಬೆಂಗಳೂರು ನಗರ ತಂಡವನ್ನ 28-17 ಅಂಕಗಳಿಂದ ಸೋಲಿಸಿದ ದಕ್ಷಿಣ ಕನ್ನಡ ಜಿಲ್ಲಾ ತಂಡ ಪ್ರಶಸ್ತಿಗೆ ಭಾಜನವಾಯಿತು. ಬೆಂಗಳೂರು ನಗರ ತಂಡ ಹೆಚ್ಚು ಪ್ರತಿರೋಧ ನೀಡದೆಯೇ ಸೋಲಿಗೆ ಶರಣಾಯಿತು. ಹಾಸನ ಮತ್ತು ಬೆಂಗಳೂರು ದಕ್ಷಿಣ ಮಹಿಳಾ ತಂಡಗಳು 3ನೇ ಸ್ಥಾನ ಪಡೆದವು.
For More Updates Join our WhatsApp Group :




