ತುಮಕೂರಿನಲ್ಲಿ ಕರ್ನಾಟಕ ಕ್ರೀಡಾಕೂಟ 2025-26 ರ ಜಯ
ತುಮಕೂರು: ಡಾ.ಜಿ. ಪರಮೇಶ್ವರ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪುರುಷರ 81 ಕೆಜಿ ಜುಡೋದಲ್ಲಿ ಮೊಹಮ್ಮದ್ ಯಾಕುಬ್ ಖಾನ್, ಸುದೀಪ್ ರಮೇಶ್ ರಾಥೋಡ್ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಗೆದ್ದರು. ಪವನ್ ವಿಕಾಸ್ ಮತ್ತು ಜಯ ಸೂರ್ಯ ಕಂಚು ಗೆದ್ದರು. ಪುರುಷರ 90 ಕೆಜಿ ವಿಭಾಗದಲ್ಲಿ ಬೆಂಗಳೂರು ನಗರದ ಮನೋಜ್ ನಾಯ್ದು, ಬೆಳಗಾವಿಯ ಬಿಎಸ್ ರೋಹನ್ ಮೊದಲೆರಡು ಸ್ಥಾನ ಪಡೆದರು. ವಿಜಯಪುರದ ಅಭಿಷೇಕ್ ವಿ ಕಾಲೆ ಮತ್ತು ಕೆ. ತೌಸಿಫ್ ಜಂಟಿ 3ನೇ ಸ್ಥಾನ ಪಡೆದರು.
ಪುರುಷರ 100 ಕೆಜೆ ವಿಭಾಗದಲ್ಲಿ ಬೆಂಗಳೂರು ನಗರದ ರವಿಚಂದ್ರ ಡೇರ್ ಎಸ್, ವಿಜಯಪುರದ ಸಂದೀಪ್ ಪಿ ಲಮಾಣಿ, ಬೆಳಗಾವಿಯ ಓಂಕಾರ್ ಮಿನಾಚೆ ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದರು.ಪುರುಷರ 100 ಪ್ಲಸ್ ಕೆಜಿ ವಿಭಾಗದಲ್ಲಿ ಮೈಸೂರಿನ ವಿಕಾಸ್ ಕುಮಾರ್ ಎನ್ ಮತ್ತು ಬೆಳಗಾವಿಯ ರಾಹುಲ್ ಲಂಕೆನ್ನವರ್ ಚಿನ್ನ-ಬೆಳ್ಳಿ ಗೆದ್ದರು.
For More Updates Join our WhatsApp Group :




