ಶತಮಾನಗಳಿಂದ ಸಾಗುತ್ತಿರುವ ಹುಲಿಯೂರುದುರ್ಗ ದೇವಾಲಯದ ಅನನ್ಯ ಸಂಪ್ರದಾಯ.
ತುಮಕೂರು: ಜಿಲ್ಲೆಯ ಹುಲಿಯೂರುದುರ್ಗ ಭೈರವೇಶ್ವರ ದೇವಸ್ಥಾನದಲ್ಲಿ ಶತಮಾನಗಳಿಂದ ನಡೆದುಕೊಂಡು ಬರುತ್ತಿರುವ ವಿಶಿಷ್ಟ ಆಚರಣೆ ಇಂದು ಕೂಡ ಮುಂದುವರಿದಿದೆ. ಇಲ್ಲಿ ಭಕ್ತರು ಓಡೆ ಭೈರವೇಶ್ವರ ದೇವರಿಗೆ ಮದ್ಯ ಹಾಗೂ ಮಾಂಸವನ್ನು ನೈವೇದ್ಯವಾಗಿ ಅರ್ಪಿಸುವ ಸಂಪ್ರದಾಯವಿದೆ. ಹರಕೆ ತೀರಿಸಲು ತರಲಾಗುವ ಈ ನೈವೇದ್ಯವನ್ನು ಪೂಜೆಯ ನಂತರ ಭಕ್ತರಿಗೆ ಪ್ರಸಾದವಾಗಿ ವಿತರಿಸಲಾಗುತ್ತದೆ. ದೇವಸ್ಥಾನದಲ್ಲಿ ಗಂಡು-ಹೆಣ್ಣು ಭೇದವಿಲ್ಲದೆ ಎಲ್ಲರೂ ಮದ್ಯ ಮತ್ತು ಮಾಂಸವನ್ನು ಪ್ರಸಾದವಾಗಿ ಸೇವನೆ ಮಾಡುತ್ತಾರೆ.
For More Updates Join our WhatsApp Group :




