ಕರ್ನಾಟಕ ಕ್ರೀಡಾಕೂಟ 2025-26
ತುಮಕೂರು : ದಕ್ಷಿಣ ಕನ್ನಡ ಜಿಲ್ಲೆಯು ತುಮಕೂರು ನಗರದಲ್ಲಿ ನಡೆಯುತ್ತಿರುವ ಕರ್ನಾಟಕ ಕ್ರೀಡಾಕೂಟ 2025-26ರ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಏತನ್ಮಧ್ಯೆ, ಬೆಂಗಳೂರು ನಗರದ ಕ್ರೀಡಾಪಟುಗಳು ಟೇಬಲ್ ಟೆನಿಸ್‌ನಲ್ಲಿಪದಕಗಳ ಬೇಟೆಯಾಡಿದರು.
ಕ್ರೀಡಾಕೂಟದ 4ನೇ ದಿನವಾದ ಸೋಮವಾರ ವೇಟ್ ಲಿಫ್ಟಿಂಗ್, ಜುಡೋ, ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಪದಕಗಳ ಸುರಿಮಳೆಯಾದರೆ, ಬಾಸ್ಕೆಟ್‌ಬಾಲ್, ಬಾಕ್ಸಿಂಗ್ ಸೇರಿದಂತೆ ಹಲವು ಸ್ಪರ್ಧೆಗಳ ಆರಂಭಿಕ ಪಂದ್ಯಗಳು ಜರುಗಿದವು.
ಡಾ. ಜಿ. ಪರಮೇಶ್ವರ್ ಒಳಾಂಗಣ ಕ್ರೀಡಾಂಗಣದಲ್ಲಿನಡೆದ ಪುರುಷರ 60 ಕೆ.ಜಿ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡದ ಪ್ರಶಾಂತ್ ಸಿಂಹ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ದಕ್ಷಿಣ ಕನ್ನಡದ ಕವನ್ ಕೆ. ಮತ್ತು ದಾವಣಗೆರೆಯ ಕರಣ್ ಎಂ. ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದುಕೊಂಡರು.
ಮಹಿಳೆಯರ 48 ಕೆ.ಜಿ ವಿಭಾಗದಲ್ಲಿ ದಕ್ಷಿಣ ಕನ್ನಡದ ಶ್ರಾವ್ಯ ಎಂ. ದಕ್ಷಿಣ ಕನ್ನಡದ ಹರ್ಷಿತ ಪಿ.ಪಿ. ಮತ್ತು ಬೆಂಗಳೂರು ನಗರದ ಕೀರ್ತಿಕಾ ಕಾಸಿ ಕ್ರಮವಾಗಿ ಮೊದಲ ಮೂರು ಸ್ಥಾನ ಗಳಿಸಿದರು. ಪುರುಷರ 65 ಕೆ.ಜಿ: ತಿಪ್ಪಣ್ಣ ಲಕ್ಕಣ್ಣನವರ್ (ದಕ್ಷಿಣ ಕನ್ನಡ), ಯೋಗೇಶ್ ನಾಯಕ್ ಕೆ. (ಬೆಂಗಳೂರು ನಗರ), ಮನೋಜ್ ಬಿ.ಆರ್. (ದಕ್ಷಿಣ ಕನ್ನಡ) ಕ್ರಮವಾಗಿ ಚಿನ್ನ, ಬೆಳ್ಳಿ ಮತ್ತು ಕಂಚು ಗೆದ್ದುಕೊಂಡರು.ಪುರುಷರ 71 ಕೆ.ಜಿ: ಮಂಜುನಾಥ್ ಮರಾಠಿ (ಉಡುಪಿ), ಚಿರಂಜೀವಿ (ದಕ್ಷಿಣ ಕನ್ನಡ), ಪ್ರತೀಕ್ (ದಕ್ಷಿಣ ಕನ್ನಡ) ಮೊದಲ ಮೂರು ಸ್ಥಾನ ಹಂಚಿಕೊಂಡರೆ, ಮಹಿಳೆಯರ 53 ಕೆ.ಜಿ: ಲಕ್ಷ್ಮಿ ಬಿ (ಚಿತ್ರದುರ್ಗ), ಇವಾನ್ ಜೆಲಿನ್ ಆರ್. (ಬೆಂಗಳೂರು ನಗರ), ಪೂಜಿತಾ ಎಂ. ಆರ್. (ತುಮಕೂರು) ಅನುಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ತಮ್ಮದಾಗಿಸಿಕೊಂಡರು.
ಮಹಿಳೆಯರ 58 ಕೆ.ಜಿ: ಸ್ವಪ್ನ ವೈ.ಜಿ. (ದಕ್ಷಿಣ ಕನ್ನಡ), ಮೋನಿಶಾ ಪಿ. (ಬೆಂಗಳೂರು ನಗರ), ದೇವಿಕಾ ಎಸ್.ಜಿ. (ಶಿವಮೊಗ್ಗ) ಕ್ರಮವಾಗಿ ಚಿನ್ನ, ಬೆಳ್ಳಿ, ಕಂಚಿನ ಪದಕ ಗೆದ್ದುಕೊಂಡರೆ, ಮಹಿಳೆಯರ 63 ಕೆ.ಜಿ: ದಕ್ಷಿಣ ಕನ್ನಡದ ಅನಿಶಾ, ಹಂಸವೇಣಿ ಎ. ಮತ್ತು ಶ್ರಾವಣಿ ಅಶೋಕ್ ಕ್ರಮವಾಗಿ ಪೋಡಿಯಂ ಸ್ಥಾನ ಪಡೆದರು.
For More Updates Join our WhatsApp Group :




