ಕಯಾಕಿಂಗ್: ಬೆಂಗಳೂರು ನಗರ ತಂಡಕ್ಕೆ ಬಂಗಾರ
ತುಮಕೂರು: ಮಹಾತ್ಮ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಟೇಬಲ್ ಟೆನಿಸ್ನಲ್ಲಿ ಬೆಂಗಳೂರು ನಗರದ ಕ್ರೀಡಾಪಟುಗಳು ಪಾರಮ್ಯ ಸಾಧಿಸಿದರು. ಪುರುಷರ ಸಿಂಗಲ್ಸ್ನಲ್ಲಿ ಬೆಂಗಳೂರು ನಗರದ ಅಭಿನವ್ ಕೆ. ಮೂರ್ತಿ ಸ್ವರ್ಣ ಗೆದ್ದರೆ, ಬೆಂಗಳೂರಿನವರೇ ಆದ ರೋಹಿತ್ ಶಂಕರ್ ಬೆಳ್ಳಿಗೆ ಭಾಜನರಾದರು. ಬೆಂಗಳೂರು ನಗರದ ಯು.ಎನ್. ರಾಮ್ ಕುಮಾರ್ ಮತ್ತು ಕಲಬುರಗಿಯ ಮಂಜುನಾಥ್ ಎಸ್.ಆರ್. ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಮಹಿಳಾ ಸಿಂಗಲ್ಸ್ನಲ್ಲಿಬೆಂಗಳೂರು ನಗರದ ಸಹನಾ ಎಚ್. ಮೂರ್ತಿ ಸ್ವರ್ಣ ಗೆದ್ದರು, ಬೆಂಗಳೂರು ನಗರದ ಕಾರುಣ ಜಿ. ಬೆಳ್ಳಿ, ದಕ್ಷಿಣ ಕನ್ನಡದ ಪ್ರೇಕ್ಷ ಕರ್ಕೆರ ಮತ್ತು ಬೆಂಗಳೂರು ನಗರದ ತೃಪ್ತಿ ಪ್ರವೀಣ್ ಪುರೋಹಿತ್ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.
ಕಯಾಕಿಂಗ್: ಬೆಂಗಳೂರು ನಗರ ತಂಡಕ್ಕೆ ಬಂಗಾರ
ಅಮಾನಿ ಕೆರೆಯಲ್ಲಿನಡೆದ ಕಯಾಕಿಂಗ್ ಡ್ರಾಗನ್ ಬೋಟ್ ಮಿಕ್ಸ್ ತಂಡ ವಿಭಾಗದಲ್ಲಿ ಬೆಂಗಳೂರು ನಗರ ತಂಡ (2:25:23 ಸೆ.) ಸ್ವರ್ಣ ಪದಕ ಗೆದ್ದುಕೊಂಡಿತು. ಬೆಂಗಳೂರು ಗ್ರಾಮಾಂತರ (2:34:09 ಸೆ.) ಬೆಳ್ಳಿ ಮತ್ತು ಚಿತ್ರದುರ್ಗ (2:38:06 ಸೆ.) ತಂಡ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡವು.
For More Updates Join our WhatsApp Group :




