ಸಿದ್ದಗಂಗಾ ಮಠದಲ್ಲಿ ಹಬ್ಬದ ಸಂಭ್ರಮ.
ತುಮಕೂರು : ತುಮಕೂರಿನ ಕ್ಯಾತ್ಸಂದ್ರ ಸಮೀಪದ ಸಿದ್ದಗಂಗಾಮಠದಲ್ಲಿ, ಶಿವೈಕ್ಯ ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳ 7ನೇವರ್ಷದಪುಣ್ಯಸಂಸ್ಮರಣೋತ್ಸವ ಹಿನ್ನೆಲೆಯಲ್ಲಿ ರುದ್ರಾಕ್ಷಿ ರಥೋತ್ಸವ ಅದ್ದೂರಿಯಾಗಿ ನಡೆಯಿತು.
ಬೆಳ್ಳಿ ಪುತ್ತಳಿಯ ಭವ್ಯ ಮೆರವಣಿಗೆ,ಮಠದ ಆವರಣದಲ್ಲಿ ಸಂಭ್ರಮದ ಮೆರವಣಿಗೆ, ಸಿದ್ದಗಂಗಾ ಮಠದಲ್ಲಿ ಶ್ರೀಶಿವಕುಮಾರಸ್ವಾಮೀಜಿಯವರಬೆಳ್ಳಿಪುತ್ತಳಿಯನ್ನು ಭಕ್ತಿಭಾವದಿಂದ ಮೆರವಣಿಗೆ ಮಾಡಲಾಯಿತು. ರುದ್ರಾಕ್ಷಿ ಮಂಟಪದಿಂದ ಆರಂಭವಾದ ಈ ಮೆರವಣಿಗೆ ಮಠದ ಆವರಣದಲ್ಲಿ ಸಂಚರಿಸಿತು.ಮಠಾಧ್ಯಕ್ಷ ಸಿದ್ದಲಿಂಗಶ್ರೀಗಳು, ಶ್ರೀಗಳ ಬೆಳ್ಳಿ ಪುತ್ತಳಿಗೆ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಭಕ್ತರ ಭಾರಿ ಸಂಖ್ಯೆಯಲ್ಲಿ ಹಾಜರಿದ್ದರು.
ಕಲಾತಂಡಗಳ ಮನಮೋಹಕ ಪ್ರದರ್ಶನಮೆರವಣಿಗೆಯಲ್ಲಿ ಸಾಂಸ್ಕೃತಿಕ ವೈಭವ ಶ್ರೀಗಳ ಬೆಳ್ಳಿ ಪುತ್ತಳಿ ಮೆರವಣಿಗೆಯಲ್ಲಿ ವಿವಿಧ ಸಾಂಸ್ಕೃತಿಕ ಕಲಾತಂಡಗಳು,ಡೊಳ್ಳುಕುಣಿತ, ಜನಪದ ನೃತ್ಯ,ಸಾಂಪ್ರದಾಯಿಕ ವಾದ್ಯಮೇಳಗಳು ಭಾಗವಹಿಸಿ ಮೆರವಣಿಗೆಗೆ ವಿಶೇಷ ಮೆರುಗು ನೀಡಿದವು.
ಮೆರವಣಿಗೆಯಲ್ಲಿ ನೂರಾರು ಯುವತಿಯರು ಪೂರ್ಣ ಕುಂಭ ಹೊತ್ತು ಭಾಗವಹಿಸಿದ್ದು, ಭಕ್ತಿಭಾವದ ದೃಶ್ಯ ಎಲ್ಲರ ಮನಸೂರೆಗೊಂಡಿತು.
ಸಿದ್ದಗಂಗಾ ಮಠದಲ್ಲಿ ಹಬ್ಬದ ವಾತಾವರಣ ಭಕ್ತರ ಹರಿದುಬರುವಿಕೆ ಪೂರ್ಣ ದಿನದ ಪುಣ್ಯ ಸಂಸ್ಮರಣೋತ್ಸವ ಹಿನ್ನೆಲೆ, ಸಿದ್ದಗಂಗಾ ಮಠದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ.
For More Updates Join our WhatsApp Group :



