ಬ್ಯಾಸ್ಕೆಟ್‌ ಬಾಲ್‌: ಫೈನಲ್ ಗೆ ಬ್ಯಾಂಕ್ ಆಫ್ ಬರೋಡ, ಯಂಗ್ ಒರಿಯನ್ಸ್.

ಬ್ಯಾಸ್ಕೆಟ್‌ ಬಾಲ್‌: ಫೈನಲ್ ಗೆ ಬ್ಯಾಂಕ್ ಆಫ್ ಬರೋಡ, ಯಂಗ್ ಒರಿಯನ್ಸ್.

ಕರ್ನಾಟಕ ಕ್ರೀಡಾಕೂಟದಲ್ಲಿ ರೋಚಕ ಸೆಮಿಫೈನಲ್ ಪಂದ್ಯಗಳು.

ತುಮಕೂರು: ತುಮಕೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ಕ್ರೀಡಾಕೂಟದ ಪುರುಷರ ಬ್ಯಾಸ್ಕೆಟ್‌ಬಾಲ್‌ ನಲ್ಲಿ ಯಂಗ್ಒರಿಯನ್ಸ್ ಮತ್ತು ಬ್ಯಾಂಕ್ ಆಫ್ ಬರೊಡ ತಂಡಗಳು ‌ಪೈನಲ್ ಪ್ರವೇಶಿಸಿವೆ.

ಶ್ರೀ ಸಿದ್ಧಾರ್ಥ ಮೆಡಿಕಲ್ ಕಾಲೇಜು ಮೈದಾನದಲ್ಲಿ ನಡೆದ ಪುರುಷರ ಮೊದಲ ಸೆಮಿಫೈನಲ್ ನಲ್ಲಿ ಯಂಗ್ ಒರಿಯನ್ಸ್ ತಂಡ 95-82 ಅಂಕಗಳಿಂದ ಜಿಎಸ್ ಟಿ ಕಸ್ಟಮ್ಸ್ ವಿರುದ್ದ ಜಯ ಸಾಧಿಸಿತು.2ನೇ ಸೆಮಿಫೈನಲ್ ನಲ್ಲಿ ಬ್ಯಾಂಕ್ ಆಫ್ ಬರೋಡ ತಂಡ 59-41 ಅಂಕಗಳಿಂದ ಡಿವೈಇಎಸ್ ಬೆಂಗಳೂರು ತಂಡವನ್ನ ಮಣಿಸಿತು.

ಮಹಿಳೆಯರ ಮೊದಲ ಸೆಮಿಫೈನಲ್ ನಲ್ಲಿ ಮೈಸೂರು ಡಿವೈಇಎಸ್ ತಂಡ 44-26 ಅಂಕಗಳಿಂದ ಜಯನಗರ ಸ್ಪೋರ್ಟ್ಸ್ ಕ್ಲಬ್ ವಿರುದ್ದ ಜಯ ದಾಖಲಿತು. ಎರಡನೇ ‌ಸೆಮಿಫೈನಲ್ಲಿ ವಿದ್ಯಾ ನಗರ ಡಿವೈಇಎಸ್ ತಂಡ 42-35 ರಿಂದ ಮಂಡ್ಯವನ್ನ ಸೋಲಿಸಿ ಫೈನಲ್ ‌ಗೆ ಲಗ್ಗೆ ಇಟ್ಟಿತು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *