ಚಿಕ್ಕಮಗಳೂರು: ಪ್ರವಾಸಿಗರಲ್ಲಿ ಭಯ, ದೃಶ್ಯ ಸ್ಥಳೀಯ ಮೊಬೈಲ್‌ನಲ್ಲಿ ಸೆರೆ
ಚಿಕ್ಕಮಗಳೂರು : ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಹುಲಿ ಓಡಾಟ ಕಂಡುಬಂದಿದ್ದು ಪ್ರವಾಸಿಗರಲ್ಲಿ ಆತಂಕ ಮೂಡಿಸಿದೆ. ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಸಮೀಪದ ಅತ್ತಿಗುಂಡಿ ಬಳಿ ಹುಲಿ ಓಡಾಟ ನಡೆದಿರುವ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ದಾಖಲಾಗಿದೆ. ಮುಳ್ಳಯ್ಯನ ಗಿರಿ, ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಹಾಗೂ ಮಾಣಿಕ್ಯಧಾರಾ ಸೇರಿ ಸಾವಿರಾರು ಪ್ರವಾಸಿಗರು ನಿತ್ಯ ಭೇಟಿ ನೀಡುವ ಪ್ರದೇಶದಲ್ಲಿ ಹುಲಿ ಕಾಣಿಸಿಕೊಂಡಿರುವುದು ಆತಂಕ ಹೆಚ್ಚಿಸಿದೆ.
For More Updates Join our WhatsApp Group :




