ಪದೇ ಪದೇ ತಪ್ಪು ಮಾಡಿದರೆ ಲೈಸೆನ್ಸ್ ರದ್ದು!
ಬೆಂಗಳೂರು : ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಪುನರಾವರ್ತಿತ ಸಂಚಾರ ನಿಯಮ ಉಲ್ಲಂಘನೆಗಳನ್ನು ತಡೆಯಲು ಸಾರಿಗೆ ಇಲಾಖೆಯ ಹೊಸ ಕಟ್ಟುನಿಟ್ಟಿನ ಕ್ರಮವನ್ನು ಜಾರಿಗೆ ತಂದಿದೆ. ಹೊಸ ಮಾರ್ಗಸೂಚಿಯ ಪ್ರಕಾರ, ವಾಹನ ಸವಾರರು ಒಂದು ವರ್ಷದ ಅವಧಿಯಲ್ಲಿ ಐದು ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಚಾಲನಾ ಪರವಾನಿಗೆ ರದ್ದಾಗಲಿದೆ. ಮೋಟಾರು ವಾಹನ ಕಾಯ್ದೆಗೆ ಕೇಂದ್ರ ತಂದ ತಿದ್ದುಪಡಿಯ ಅನ್ವಯ ಹೊಸ ನಿಯಮ ಈ ವರ್ಷದ ಜನವರಿ 1ರಿಂದ ಜಾರಿಗೆ ಬಂದಿದೆ. ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ (ಆರ್‌ಟಿಒ) ಪರವಾನಿಗೆಯನ್ನು ರದ್ದುಗೊಳಿಸುವ ಅಧಿಕಾರವನ್ನು ನೀಡಲಾಗಿದೆ. ಅತಿಯಾದ ವೇಗ, ಕುಡಿದು ಚಾಲನೆ, ಮೊಬೈಲ್ ಬಳಕೆ, ಸಿಗ್ನಲ್ ಜಂಪ್, ಹೆಲ್ಮೆಟ್ ಅಥವಾ ಸೀಟ್‌ಬೆಲ್ಟ್ ಧರಿಸದಿರುವುದು ಸೇರಿದಂತೆ ಒಟ್ಟು 24 ಅಪರಾಧಗಳಿಗೆ ಈ ನಿಯಮ ಅನ್ವಯವಾಗಲಿದೆ.
For More Updates Join our WhatsApp Group :




