ಎಕ್ಸಿಮ್ ಬ್ಯಾಂಕ್ 2026: 40 ಮ್ಯಾನೇಜ್ಮೆಂಟ್ ಟ್ರೈನಿಗಳು ಬೇಕು.

ಎಕ್ಸಿಮ್ ಬ್ಯಾಂಕ್ 2026: 40 ಮ್ಯಾನೇಜ್ಮೆಂಟ್ ಟ್ರೈನಿಗಳು ಬೇಕು.

ತಿಂಗಳಿಗೆ ₹65,000 ಸ್ಟೈಫಂಡ್ – ಭದ್ರ ಬ್ಯಾಂಕಿಂಗ್ ವೃತ್ತಿಜೀವನಕ್ಕೆ ಚಾನ್ಸ್.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ನಿರ್ಮಿಸಲು ಬಯಸುವ ಯುವಜನರಿಗೆ ಒಳ್ಳೆಯ ಸುದ್ದಿ ಇದೆ. ಎಕ್ಸ್ಪೋರ್ಟ್–ಇಂಪೋರ್ಟ್ ಬ್ಯಾಂಕ್ ಆಫ್ ಇಂಡಿಯಾ (EXIM Bank) 2026ನೇ ಸಾಲಿನ ನೇಮಕಾತಿಗಾಗಿ ಮ್ಯಾನೇಜ್ಮೆಂಟ್ ಟ್ರೈನಿ (MT) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಪ್ರಕ್ರಿಯೆಯಡಿ ಒಟ್ಟು 40 ಹುದ್ದೆಗಳು ಭರ್ತಿಯಾಗಲಿವೆ. ಆನ್‌ಲೈನ್ ಅರ್ಜಿ ಪ್ರಕ್ರಿಯೆ ಜನವರಿ 17 ರಿಂದ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಫೆಬ್ರವರಿ 1ರ ವರೆಗೆ ಅವಕಾಶವಿದೆ.

ಆಸಕ್ತ ಅಭ್ಯರ್ಥಿಗಳು ಎಕ್ಸಿಮ್ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ eximbankindia.in ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಕೊನೆಯ ಕ್ಷಣದವರೆಗೆ ಕಾಯದೆ ಅರ್ಜಿ ಸಲ್ಲಿಸುವಂತೆ ಬ್ಯಾಂಕ್ ಸಲಹೆ ನೀಡಿದೆ, ಇದರಿಂದ ತಾಂತ್ರಿಕ ಸಮಸ್ಯೆಗಳನ್ನು ತಪ್ಪಿಸಬಹುದು.

ಅರ್ಜಿ ಶುಲ್ಕದ ವಿಚಾರದಲ್ಲಿ, ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 600 ರೂ., ಎಸ್‌ಸಿ, ಎಸ್‌ಟಿ, ಅಂಗವಿಕಲರು, ಇಡಬ್ಲ್ಯೂಎಸ್ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಕೇವಲ 100ರೂ. ಶುಲ್ಕ ನಿಗದಿಪಡಿಸಲಾಗಿದೆ. ಶುಲ್ಕವನ್ನು ಆನ್‌ಲೈನ್ ಮೂಲಕವೇ ಪಾವತಿಸಬೇಕು.

ಶೈಕ್ಷಣಿಕ ಅರ್ಹತೆಯಾಗಿ, ಅಭ್ಯರ್ಥಿಗಳು ಕನಿಷ್ಠ ಶೇ.60 ಅಂಕಗಳೊಂದಿಗೆ ಯಾವುದೇ ಸ್ಟ್ರೀಮ್‌ನಲ್ಲಿ ಮೂರು ವರ್ಷಗಳ ಪೂರ್ಣಕಾಲಿಕ ಪದವಿ ಹೊಂದಿರಬೇಕು. ಜೊತೆಗೆ ಹಣಕಾಸು, ಅಂತರರಾಷ್ಟ್ರೀಯ ವ್ಯವಹಾರ ಅಥವಾ ವಿದೇಶಿ ವ್ಯಾಪಾರದಲ್ಲಿ ವಿಶೇಷತೆಯೊಂದಿಗೆ MBA / PGDBA / PGDBM / MMS ಅಥವಾ CA ಮುಂತಾದ ಎರಡು ವರ್ಷಗಳ ಪೂರ್ಣಕಾಲಿಕ ಕೋರ್ಸ್ ಪೂರ್ಣಗೊಳಿಸಿರುವವರು ಅರ್ಹರಾಗಿರುತ್ತಾರೆ. ಜನವರಿ 2026ರಲ್ಲಿ ಅಂತಿಮ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳೂ ಅರ್ಜಿ ಸಲ್ಲಿಸಬಹುದು.

ವಯೋಮಿತಿಯಂತೆ, ಅಭ್ಯರ್ಥಿಗಳು ಡಿಸೆಂಬರ್ 31, 2025ರ ವೇಳೆಗೆ ಕನಿಷ್ಠ 21 ವರ್ಷ ಮತ್ತು ಗರಿಷ್ಠ 28 ವರ್ಷ ವಯಸ್ಸಿನವರಾಗಿರಬೇಕು. ಮೀಸಲು ವರ್ಗದ ಅಭ್ಯರ್ಥಿಗಳಿಗೆ ಸರ್ಕಾರಿ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ. ಆಯ್ಕೆ ಪ್ರಕ್ರಿಯೆ ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲು ಲಿಖಿತ ಪರೀಕ್ಷೆ, ನಂತರ ಸಂದರ್ಶನ ನಡೆಯಲಿದೆ. ಲಿಖಿತ ಪರೀಕ್ಷೆಯನ್ನು ಫೆಬ್ರವರಿ 2026ರಲ್ಲಿ ನಡೆಸುವ ಸಾಧ್ಯತೆ ಇದೆ. ಪರೀಕ್ಷೆಯ ಮಾದರಿ ಮತ್ತು ಪಠ್ಯಕ್ರಮವನ್ನು ಬ್ಯಾಂಕ್ ಶೀಘ್ರದಲ್ಲೇ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *