ಬಾಲಿವುಡ್ ಸ್ಟಾರ್ ನಿರ್ದೇಶಕ ದಕ್ಷಿಣ ಚಿತ್ರರಂಗದಲ್ಲೂ ನಟನಾ ಕೌಶಲ್ಯ ಪ್ರದರ್ಶಿ.
ಅನುರಾಗ್ ಕಶ್ಯಪ್ ಬಾಲಿವುಡ್ನ ಸ್ಟಾರ್ ನಿರ್ದೇಶಕ. ಅವರ ಸಿನಿಮಾಗಳು ಭಾರಿ ಬಜೆಟ್, ದೊಡ್ಡ ಸ್ಟಾರ್ ನಟರನ್ನು ಹೊಂದಿರುವುದಿಲ್ಲವಾದರೂ ತಮ್ಮ ವಿಭಿನ್ನ ಶೈಲಿಯಿಂದಾಗಿ ಪ್ರತ್ಯೇಕ ಅಭಿಮಾನಿ ವರ್ಗವನ್ನೇ ಅನುರಾಗ್ ಕಶ್ಯಪ್ ಸಂಪಾದಿಸಿದ್ದಾರೆ. ‘ಗ್ಯಾಂಗ್ಸ್ ಆಫ್ ವಸೇಪುರ್’, ‘ನೋ ಸ್ಮೋಕಿಂಗ್’, ‘ದೇವ್ ಡಿ’ ಇನ್ನೂ ಹಲವು ಕಲ್ಟ್ ಸಿನಿಮಾಗಳನ್ನು ಅನುರಾಗ್ ಕಶ್ಯಪ್ ನೀಡಿದ್ದು, ನಟನೆಯಲ್ಲೂ ಸಹ ತಮ್ಮನ್ನು ತಾವು ಸಾಬೀತುಪಡಿಸಿಕೊಂಡಿದ್ದಾರೆ. ಬಾಲಿವುಡ್ ಮಾತ್ರವಲ್ಲದೆ ದಕ್ಷಿಣ ಚಿತ್ರರಂಗದೊಂದಿಗೂ ಅವಿನಾಭಾವ ಸಂಬಂಧ ಹೊಂದಿರುವ ಅನುರಾಗ್ ಅವರಿಗೆ ದಕ್ಷಿಣದಲ್ಲೂ ಸಾಕಷ್ಟು ಡಿಮ್ಯಾಂಡ್ ಇದೆ. ಆದರೆ ಅನುರಾಗ್ ಅವರು ದಳಪತಿ ವಿಜಯ್ ಸಿನಿಮಾ ಒಂದರಲ್ಲಿ ಕೇವಲ 30 ಸೆಕೆಂಡ್ಗಳ ದೃಶ್ಯವೊಂದರಲ್ಲಿ ನಟಿಸಿದ್ದರು. ಅದೇಕೆ ಎಂಬ ಪ್ರಶ್ನೆಗೆ ಅವರು ನೀಡಿರುವ ಉತ್ತರ ರಜನೀ ಅಭಿಮಾನಿಗಳ ಮನಸ್ಸು ಗೆದ್ದಿದೆ.
ಅನುರಾಗ್ ಕಶ್ಯಪ್ ದೊಡ್ಡ ನಿರ್ದೇಶಕ, ಒಳ್ಳೆಯ ನಟ ಸಹ. ಅವರ ಸ್ಥಾನದಲ್ಲಿರುವವರು ಯಾರೂ 10-20 ಸೆಕೆಂಡುಗಳ ಅತಿಥಿ ಪಾತ್ರಗಳನ್ನೆಲ್ಲ ಒಪ್ಪಿಕೊಳ್ಳುವುದಿಲ್ಲ. ಆದರೆ ಅನುರಾಗ್ ಕಶ್ಯಪ್, ದಳಪತಿ ವಿಜಯ್ ನಟನೆಯ ‘ಲಿಯೋ’ ಸಿನಿಮಾನಲ್ಲಿ ಕೇವಲ 30 ಸೆಕೆಂಡುಗಳ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಅವರು ಹೀಗೆ ಮಾಡಿದ್ದಕ್ಕೆ ಕಾರಣವೂ ಇದೆ. ಅದುವೇ ರಜನೀಕಾಂತ್.
ಅನುರಾಗ್ ಕಶ್ಯಪ್ ಹೇಳಿಕೊಂಡಿರುವಂತೆ ಅವರು ಬಹಳ ಹಿಂದಿನಿಂದಲೂ ರಜನೀಕಾಂತ್ ಅವರ ಅಭಿಮಾನಿ ಅಂತೆ. ರಜನೀಕಾಂತ್ ಅವರು ಹಿಂದಿಯ ‘ಗಿರಫ್ತಾರ್’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದರು. ಆ ಸಿನಿಮಾನಲ್ಲಿ ರಜನೀಕಾಂತ್ ಸಾಯುತ್ತಾರೆ ಆದರೆ ಸಾಯುವ ಮೊದಲು ಒಂದು ಸಿಗರೇಟು ಸೇರಿ ಬಳಿಕ ಸಾವನ್ನು ಎದುರುಗೊಳ್ಳುತ್ತಾರೆ. ಅನುರಾಗ್ ಕಶ್ಯಪ್ ಅವರಿಗೆ ಆ ಸೀನ್ ಬಹಳ ಇಷ್ಟವಾಗಿತ್ತಂತೆ. ಹಾಗಾಗಿ ತಾವೂ ಸಹ ಅಂಥಹುದ್ದೇ ಸೀನ್ನಲ್ಲಿ ನಟಿಸಬೇಕು ಎಂದು ‘ಲಿಯೋ’ ಸಿನಿಮಾದ ಆ ಸಣ್ಣ ಅತಿಥಿ ಪಾತ್ರದಲ್ಲಿ ನಟಿಸಿದರಂತೆ.
For More Updates Join our WhatsApp Group :




