ವಂದೇ ಭಾರತ್ ಸ್ಲೀಪರ್‌ಗೆ ಭಾರೀ ಬೇಡಿಕೆ.

ವಂದೇ ಭಾರತ್ ಸ್ಲೀಪರ್‌ಗೆ ಭಾರೀ ಬೇಡಿಕೆ.

16ರಿಂದ 24 ಬೋಗಿಗಳಿಗೆ ವಿಸ್ತರಣೆ; ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯ.

ನವದೆಹಲಿ : ಭಾರತ ದೇಶದ ಮೊದಲ ಸೆಮಿ ಹೈ ಸ್ಪೀಡ್ ಸ್ಲೀಪರ್ ರೈಲಾದ ವಂದೇ ಭಾರತ್ ಸ್ಲೀಪರ್  ಗುವಾಹಟಿ ಮತ್ತು ಹೌರಾ ನಡುವೆ ಈಗಾಗಲೇ ಸಂಚರಿಸುತ್ತಿದೆ. ಪ್ರಯಾಣಿಕರು ಇದನ್ನು ತುಂಬಾ ಇಷ್ಟಪಡುತ್ತಿದ್ದಾರೆ. ಇದರ ಜನಪ್ರಿಯತೆ ಹೆಚ್ಚುತ್ತಿರುವ ಕಾರಣದಿಂದಾಗಿ ಭಾರತೀಯ ರೈಲ್ವೆ ಈ ರೈಲಿನಲ್ಲಿ ಹೊಸ ಪ್ರಯೋಗಗಳನ್ನು ನಡೆಸಲು ಮುಂದಾಗಿದೆ. ಹೆಚ್ಚಿನ ಜನರಿಗೆ ಈ ಸ್ಲೀಪರ್ ರೈಲಿನಲ್ಲಿ ಸಂಚರಿಸಲು ಸಹಾಯವಾಗಲಿ ಎಂಬ ಉದ್ದೇಶದಿಂದ ಈ ರೈಲಿನಲ್ಲಿ ಕೋಚ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ನಿರ್ಧರಿಸಿದೆ.

ಸದ್ಯಕ್ಕೆ ವಂದೇ ಭಾರತ್ ಸ್ಲೀಪರ್ ರೈಲುಗಳು 16 ಬೋಗಿಗಳೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಇದು 823 ಬರ್ತ್‌ಗಳನ್ನು ಹೊಂದಿವೆ. ಆದರೆ, ಮುಂದಿನ ದಿನಗಳಲ್ಲಿ ಇನ್ನೂ 8 ಬೋಗಿಗಳನ್ನು ಸೇರಿಸಲಾಗುತ್ತದೆ. ಒಟ್ಟು 24 ಬೋಗಿಗಳ ಸಾಮರ್ಥ್ಯವನ್ನು ಹೊಂದಿರುವ ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ಸಿದ್ಧಪಡಿಸಲಾಗುತ್ತಿದೆ. ಇದರಲ್ಲಿ 1,224 ಬರ್ತ್‌ಗಳಿರಲಿದೆ. ವಂದೇ ಭಾರತ್ ಸ್ಲೀಪರ್ ಅನ್ನು ಪ್ರಾರಂಭಿಸಿದ 10 ದಿನಗಳಲ್ಲಿ ಹೆಚ್ಚಿನ ಪ್ರಯಾಣಿಕರು ಆರಾಮದಾಯಕ ಪ್ರಯಾಣವನ್ನು ಆನಂದಿಸಲು ಅನುವು ಮಾಡಿಕೊಡಲು ರೈಲ್ವೆ ತನ್ನ ಸಾಮರ್ಥ್ಯವನ್ನು ಹೆಚ್ಚಿಸಲು ನಿರ್ಧರಿಸಿದೆ. ವಂದೇ ಭಾರತ್ ಸ್ಲೀಪರ್ ರೈಲುಗಳಲ್ಲಿ ಕೋಚ್‌ಗಳ ಸಂಖ್ಯೆಯನ್ನು ರೈಲ್ವೆ ಇಲಾಖೆ ವಿಸ್ತರಿಸುತ್ತಿದೆ. ಮೊದಲ ಬಾರಿಗೆ, ವಂದೇ ಭಾರತ್ ರೈಲುಗಳಿಗೆ 24 ಕೋಚ್‌ಗಳನ್ನು ಸೇರಿಸಲು ನಿರ್ಧರಿಸಲಾಗಿದೆ.

ಪ್ರಸ್ತುತ 16 ಬೋಗಿಗಳ ವಂದೇ ಭಾರತ್ ರೈಲಿನಲ್ಲಿ ಎಲ್ಲಾ ತರಗತಿಗಳಲ್ಲಿ 823 ಬರ್ತ್‌ಗಳಿವೆ. ಆದರೆ, 24 ಬೋಗಿಗಳ ವಂದೇ ಭಾರತ್ ರೈಲಿನಲ್ಲಿ 1,224 ಬರ್ತ್‌ಗಳಿರಲಿವೆ. ಇದು ಬರ್ತ್‌ಗಳ ಸಂಖ್ಯೆಯನ್ನು ಮೂರನೇ ಒಂದು ಭಾಗದಷ್ಟು ಹೆಚ್ಚಿಸುತ್ತದೆ. ರೈಲ್ವೆ ಇಲಾಖೆಯ ಪ್ರಕಾರ, 24 ಬೋಗಿಗಳ ರೈಲನ್ನು ಮೇಕ್ ಇನ್ ಇಂಡಿಯಾ ಉಪಕ್ರಮದಡಿಯಲ್ಲಿ ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್)ಯಲ್ಲಿ ತಯಾರಿಸಲಾಗುವುದು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *