ರಾಜಮೌಳಿ ಬುದ್ಧಿವಂತಿಕೆ ಎಲ್ಲರ ಗಮನ ಸೆಳೆಯುತ್ತಿದೆ.
ಸಿನಿಮಾ ಮೇಕಿಂಗ್ ವಿಷಯದಲ್ಲಿ ರಾಜಮೌಳಿ ಎಷ್ಟು ಗಮನ ಹರಿಸುತ್ತಾರೋ ಅದೇ ರೀತಿ ಸಿನಿಮಾ ಪ್ರಚಾರಕ್ಕೂ ಅವರು ಅಷ್ಟೇ ಪ್ರಾಮುಖ್ಯತೆ ನೀಡುತ್ತಾರೆ. ಈ ಕಾರಣದಿಂದಲೇ ರಾಜಮೌಳಿ ಅವರ ಸಿನಿಮಾ ಅಷ್ಟು ದೊಡ್ಡ ಮಟ್ಟದಲ್ಲಿ ತಲುಪುತ್ತದೆ. ಈಗ ಅವರು ‘ವಾರಣಾಸಿ’ ಸಿನಿಮಾ ಪ್ರಚಾರಕ್ಕೆ ದೊಡ್ಡ ಮಟ್ಟದ ಯೋಜನೆ ರೂಪಿಸಿದ್ದಾರೆ. ಸಿನಿಮಾ ಟೈಟಲ್ ಹಾಕದೆ ರಿಲೀಸ್ ದಿನಾಂಕ ಘೋಷಿಸಿದ್ದಾರೆ.
ರಾಜಮೌಳಿ ‘ವಾರಣಾಸಿ’ ಸಿನಿಮಾ ಘೋಷಣೆ ಮಾಡಿದ್ದಾರೆ. ಮಹೇಶ್ ಬಾಬು ಚಿತ್ರಕ್ಕೆ ಹೀರೋ. ಈ ಸಿನಿಮಾ ಮುಂದಿನ ವರ್ಷ ರಿಲೀಸ್ ಆಗಲಿದೆ. ಆದರೆ, ಸಿನಿಮಾ ತಂಡ ರಿಲೀಸ್ ದಿನಾಂಕ ಘೋಷಣೆ ಮಾಡಿರಲಿಲ್ಲ. ಈಗ ವಾರಾಣಸಿಯಲ್ಲಿ ದೊಡ್ಡದಾದ ಬಿಲ್ ಬೋರ್ಡ್ಗಳು ರಾರಾಜಿಸಿದ್ದು‘ಏಪ್ರಿಲ್ 7, 2027’ ಎಂದು ಬರೆಯಲಾಗಿದೆ.
ಎಲ್ಲಿಯೂ ರಾಜಮೌಳಿ ಅವರು ತಮ್ಮ ಸಿನಿಮಾ ಹೆಸರನ್ನು ಹಾಕಿಲ್ಲ. ಕೊನೆ ಪಕ್ಷ ಇದು ಯಾವ ಸಿನಿಮಾ ಎಂದು ಊಹಿಸುವ ಪೋಸ್ಟರ್ಗಳನ್ನು ಕೂಡ ಬಳಕೆ ಮಾಡಿಲ್ಲ. ಆದಾಗ್ಯೂ ಇದು ರಾಜಮೌಳಿ ಅವರದ್ದೇ ಸಿನಿಮಾ ಎಂದು ಅನೇಕರು ಊಹಿಸಿದ್ದಾರೆ. ವಾರಾಣಸಿಯಲ್ಲೇ ಅವರು ಈ ರೀತಿ ಸಿನಿಮಾ ರಿಲೀಸ್ ದಿನಾಂಕ ತಿಳಿಸಿರೋದು ವಿಶೇಷ ಎನಿಸಿಕೊಂಡಿದೆ. ಏಪ್ರಿಲ್ 7 ಯುಗಾದಿ. ಹಬ್ಬದ ಸಮಯದಲ್ಲೇ ಸಿನಿಮಾ ತೆರೆಗೆ ಬರುತ್ತಿದೆ.
ರಾಜಮೌಳಿ ಫ್ಲೆಕ್ಸ್ಗಳನ್ನು ಹಾಕಿದ್ದು ವಾರಾಣಸಿಯಲ್ಲೇ ಆದರು, ‘ವಾರಣಾಸಿ’ ಸಿನಿಮಾದ ರಿಲೀಸ್ ದಿನಾಂಕದ ವಿಷಯ ಇಡೀ ದೇಶಾದ್ಯಂತ ಚರ್ಚೆ ಆಗಿದೆ. ಆ ಸಂದರ್ಭದಲ್ಲಿ ಶಾಲೆಗಳು ಕೂಡ ಪೂರ್ಣಗೊಂಡಿರುತ್ತವೆ. ಹೀಗಾಗಿ, ಕುಟುಂಬ ಸಮೇತ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚಿರುತ್ತದೆ.
For More Updates Join our WhatsApp Group :




