ಜೈಲಿನೊಳಗೆ ರೀಲ್ಸ್ ಶಾಕ್.
ಭೋಪಾಲ್ : ಛತ್ತೀಸ್‌ಗಢದ ಅತ್ಯಂತ ಸುರಕ್ಷಿತ ಕಾರಾಗೃಹಗಳಲ್ಲಿ ರಾಯ್‌ಪುರ ಕೇಂದ್ರ ಕಾರಾಗೃಹವು ಕೂಡ ಒಂದು. ಆದರೆ ಯುವತಿಯೊಬ್ಬಳು ಜೈಲಿನಲ್ಲಿ ಕೈದಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದು, ಜೈಲಿನ ಸುರಕ್ಷತೆ ಬಗ್ಗೆ ಕಳವಳ ಹುಟ್ಟುಹಾಕಿದೆ. ಯುವತಿಯೊಬ್ಬಳು ತನ್ನ ಪ್ರಿಯಕರನ ಹುಟ್ಟುಹಬ್ಬದಂದು ಸಂದರ್ಶಕರ ಕೋಣೆಯೊಳಗೆ ಮುಕ್ತವಾಗಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಮೊಬೈಲ್ನಲ್ಲಿ ವಿಡಿಯೋವನ್ನು ಚಿತ್ರೀಕರಿಸಲಾಗಿದೆ. ಜೈಲಿನ ಭದ್ರತೆ ಮತ್ತು ಅಧಿಕೃತ ಮೇಲ್ವಿಚಾರಣೆಯ ಬಗ್ಗೆ ಗೊಂದಲದ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ವೈರಲ್ ಆಗಿರುವ ಈ ಕ್ಲಿಪ್‌ನಲ್ಲಿ, ಆ ಯುವತಿ ಭಾವನಾತ್ಮಕವಾಗಿ ಕ್ಯಾಮೆರಾದ ಮುಂದೆ ಮಾತನಾಡುತ್ತಾ, ಇಂದು ನನ್ನ ಗೆಳೆಯನ ಹುಟ್ಟುಹಬ್ಬ. ನಾನು ಅವನನ್ನು ಭೇಟಿಯಾಗಲು ಕೇಂದ್ರ ಜೈಲಿಗೆ ಬಂದಿದ್ದೇನೆ. ಅವನು ನನ್ನೊಂದಿಗೆ ಇಲ್ಲದಿರುವುದು ತುಂಬಾ ನೋವುಂಟುಮಾಡುತ್ತಿದೆ.
ಅವನ ಹುಟ್ಟುಹಬ್ಬದಂದು ನಾನು ಅವನೊಂದಿಗೆ ಇಲ್ಲ. ಆದರೆ ನಾನು ಅವನನ್ನು ಭೇಟಿಯಾಗಲು ಬಂದಿದ್ದೇನೆ, ಅವನ ಪ್ರತಿಕ್ರಿಯೆ ಹೇಗಿರುತ್ತೆ ನೋಡೋಣ ಎಂದು ಹೇಳುತ್ತಿರುವುದು ಕಂಡುಬರುತ್ತದೆ. ಸಂದರ್ಶಕರ ಕೋಣೆಯೊಳಗೆ ತನ್ನ ಗೆಳೆಯನೊಂದಿಗೆ ಮಾತನಾಡುತ್ತಿದ್ದಾಗ ಈ ವೀಡಿಯೊವನ್ನು ಚಿತ್ರೀಕರಿಸಲಾಗಿದೆ ಮತ್ತು ನಂತರ ಅದನ್ನು ಆಕೆಯ ಸಾಮಾಜಿಕ ಮಾಧ್ಯಮ ಖಾತೆಗೆ ಅಪ್‌ಲೋಡ್ ಮಾಡಲಾಗಿತ್ತು.
ವೀಡಿಯೊದಲ್ಲಿ ಕಾಣುತ್ತಿರುವ ಕೈದಿಯನ್ನು ತಾರಕೇಶ್ವರ ಎಂದು ಗುರುತಿಸಲಾಗಿದ್ದು, ಪ್ರಸ್ತುತ ರಾಯ್‌ಪುರ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ. ವೈರಲ್ ವೀಡಿಯೊದ ಬಗ್ಗೆ ಜೈಲು ಅಧಿಕಾರಿಗಳು ಇಲ್ಲಿಯವರೆಗೆ ಮೌನವನ್ನು ಕಾಯ್ದುಕೊಂಡಿದ್ದಾರೆ.
ಕೈದಿಗಳನ್ನು ಭೇಟಿಯಾಗಲು ಹೋಗುವಾಗ,ಆ ಪ್ರದೇಶಕ್ಕೆ ಮೊಬೈಲ್ ಫೋನ್‌ಗಳನ್ನು ಕೊಂಡೊಯ್ಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಆದರೂ ಆಕೆ ಫೋನ್‌ನೊಂದಿಗೆ ಜೈಲಿನೊಳಗೆ ಪ್ರವೇಶಿಸಿದ್ದಲ್ಲದೆ, ಜೈಲಿನೊಳಗೆ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ಅಪ್‌ಲೋಡ್ ಮಾಡಿದ್ದಾರೆ. ಪ್ರವೇಶದ ಮೊದಲು ಜೈಲಿನ ಹೊರಗೆ ಒಂದು ವೀಡಿಯೊವನ್ನು ಚಿತ್ರೀಕರಿಸಲಾಯಿತು, ನಂತರ ಒಳಗಿನಿಂದ ದೃಶ್ಯಗಳನ್ನು ತೋರಿಸಲಾಯಿತು.
ರಾಯ್‌ಪುರ ಕೇಂದ್ರ ಜೈಲಿನಲ್ಲಿ ಜಾರ್ಖಂಡ್‌ನ ಗ್ಯಾಂಗ್ಸ್ಟರ್ ಅಮನ್ ಸಾರ ಫೋಟೋಶೂಟ್ ಸಾರ್ವಜನಿಕರನ್ನು ಬೆಚ್ಚಿಬೀಳಿಸಿತ್ತು. ಆ ಚಿತ್ರಗಳು ಸಹ ವೈರಲ್ ಆಗಿದ್ದು, ಕೈದಿಗಳು ಮತ್ತು ಜೈಲು ಅಧಿಕಾರಿಗಳ ನಡುವಿನ ಒಪ್ಪಂದದ ಆರೋಪಗಳು ಕೇಳಿಬಂದಿದ್ದವು. ನಂತರ ಪೊಲೀಸ್ ಎನ್‌ಕೌಂಟರ್‌ನಲ್ಲಿ ಅಮನ್ ಸಾ ಕೊಲ್ಲಲ್ಪಟ್ಟಿದ್ದ.
For More Updates Join our WhatsApp Group :




