ಮನೆಯ ಕಾಂಪೌಂಡ್ ಒಳಗೆ ಕಸ ಸುರಿದು ಎಚ್ಚರಿಕೆ.
ಹಾಸನ : ಮಹಾನಗರ ಪಾಲಿಕೆಯ ಸಿಬ್ಬಂದಿ ಒಂದು ಲೋಡ್ ಕಸವನ್ನು ಮನೆಯ ಕಾಂಪೌಂಡ್ ಒಳಗೆ ಸುರಿಯುವ ಮೂಲಕ ನಗರದಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡುವವರಿಗೆ ಸರಿಯಾದ ಪಾಠ ಕಲಿಸಿದ್ದಾರೆ. ಹಾಸನ ನಗರದ ಉದಯಗಿರಿ ಬಡಾವಣೆ ರಸ್ತೆಯಲ್ಲಿ ಘಟನೆ ನಡೆದಿದೆ.
ಕರಿಯಪ್ಪ ಮತ್ತು ದ್ಯಾವಮ್ಮ ಎಂಬುವವರ ಮನೆ ಮುಂದೆ ಕಸ ಸುರಿಯಲಾಗಿದೆ. ರಸ್ತೆ ಬದಿ ಕಸ ಸುರಿಯುತ್ತಿದ್ದ ಬಗ್ಗೆ ಮನೆ ಮಾಲೀಕರ ವಿರುದ್ಧ ಆರೋಪಗಳು ಕೇಳಿಬಂದ ಹಿನ್ನೆಲೆ ಪಾಲಿಕೆ ಹಲವು ಬಾರಿ ಎಚ್ಚರಿಕೆ ನೀಡಿದೆ. ಇದಕ್ಕೆ ಕ್ಯಾರೆ ಎನ್ನದೆ ರಸ್ತೆ ಬದಿ ಕಸ ಎಸೆಯುತ್ತಿದ್ದರು. ಅವರಿಗೆ ಪಾಠ ಕಲಿಸಲೆಂದೇ ಇಂದು ಬೆಳಿಗ್ಗೆ ಒಂದು ಲೋಡ್ ಕಸವನ್ನು ಅವರ ಮನೆಯ ಆವರಣದಲ್ಲಿ ಸುರಿಯಲಾಗಿದೆ. ಹೀಗಾಗಿ ಪಾಲಿಕೆ ಸಿಬ್ಬಂದಿ ಹಾಗೂ ಮಹಿಳೆ ನಡುವೆ ವಾಗ್ವಾದ ಉಂಟಾಗಿದೆ.
For More Updates Join our WhatsApp Group :



