ಶೂಗಳಿಂದ ಬರುವ ಕೆಟ್ಟ ವಾಸನೆಗೆ ಗುಡ್‌ಬೈ.

ಶೂಗಳಿಂದ ಬರುವ ಕೆಟ್ಟ ವಾಸನೆಗೆ ಗುಡ್‌ಬೈ.

ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಸಾಕು!

ತುಂಬಾನೇ ಸ್ಟೈಲಿಶ್‌ ಲುಕ್‌ ನೀಡುತ್ತೆ ಎಂಬ ಕಾರಣದಿಂದಾಗಿ ಇತ್ತೀಚಿನ ದಿನಗಳಲ್ಲಿ ಬಹುತೇಕ ಹೆಚ್ಚಿನವರು ಶೂಗಳನ್ನು ಧರಿಸಲು ಇಷ್ಟಪಡುತ್ತಾರೆ. ಕೆಲವೊಮ್ಮೆ ಬೆವರಿನ ಕಾರಣದಿಂದಾಗಿ ಸಾಕ್ಸ್‌ ಮಾತ್ರವಲ್ಲ ಶೂಗಳಿಂದಲೂ ಸಹ ಕೆಟ್ಟ ವಾಸನೆ ಬರುತ್ತದೆ. ಈ ದುರ್ವಾಸನೆ ಖಂಡಿತವಾಗಿಯೂ ಮುಜುಗರವನ್ನು ಉಂಟುಮಾಡುತ್ತದೆ. ನೀವು ಕೂಡ ಇದೇ ರೀತಿಯ ಸಮಸ್ಯೆಯನ್ನು ಎದುರಿಸಿದ್ದೀರಾ, ಎಷ್ಟೇ ಕ್ಲೀನ್‌ ಆಗಿ ಇಟ್ಟರೂ ಸಹ ಶೂಗಳಿಂದ ಬರುವ ದುರ್ವಾಸನೆಯನ್ನು ಹೋಗಲಾಡಿಸಲು ಸಾಧ್ಯವಿಲ್ಲ ಎಂಬ ಚಿಂತೆಯಲ್ಲಿದ್ದೀರಾ? ಹಾಗಿದ್ರೆ ಈ ಸರಳ ಸಲಹೆಗಳನ್ನು ಪಾಲಿಸುವ ಮೂಲಕ ಶೂನಿಂದ ಬರುವ ಕೆಟ್ಟ ವಾಸನೆಯನ್ನು ತೊಡೆದುಹಾಕಿ. ಈ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಶೂನಿಂದ ಬರುವ ದುರ್ವಾಸನೆಯನ್ನು ಹೋಗಲಾಡಿಸುವುದೇಗೆ?

ಬಿಸಿಲಿನಲ್ಲಿ ಇರಿಸಿಶೂಗಳ ವಾಸನೆಯನ್ನು ತೆಗೆದುಹಾಕಲು ಸುಲಭವಾದ ಮಾರ್ಗವೆಂದರೆ ಅವುಗಳನ್ನು ಸ್ವಲ್ಪ ಸಮಯದವರೆಗೆ ಬಿಸಿಲಿನಲ್ಲಿ ಇಡುವುದು. ಶೂಗಳಲ್ಲಿನ ತೇವಾಂಶ ಮತ್ತು ಬೆವರು ಬ್ಯಾಕ್ಟೀರಿಯಾ ಬೆಳೆಯಲು ಕಾರಣವಾಗುತ್ತದೆ, ಇದು ಕೆಟ್ಟ ವಾಸನೆ ಉಂಟಾಗಲು ಬಹು ಮುಖ್ಯ ಕಾರಣವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಶೂಗಳನ್ನು ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಇಡಿ. ಇದು ತೇವಾಂಶವನ್ನು ತೆಗೆದುಹಾಕುತ್ತದೆ, ಶೂಗಳಲ್ಲಿ ಸಂಗ್ರಹವಾಗುವ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ ಜೊತೆಗೆ ಇದು ವಾಸನೆಯನ್ನು ಕಡಿಮೆ ಮಾಡುತ್ತದೆ.

ಅಡಿಗೆ ಸೋಡಾಅಡಿಗೆ ಸೋಡಾ ನೈಸರ್ಗಿಕ ವಾಸನೆ ನಿವಾರಕವಾಗಿದ್ದು, ಅದು ತೇವಾಂಶ ಮತ್ತು ವಾಸನೆಯನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಹಾಗಾಗಿ ನೀವು ರಾತ್ರಿ ಮಲಗುವ ಮುನ್ನ ನಿಮ್ಮ ಶೂಗಳ ಒಳಗೆ ಒಂದು ಟೀಚಮಚ ಅಡಿಗೆ ಸೋಡಾವನ್ನು ಸಿಂಪಡಿಸಿ ಮರುದಿನ ಬೆಳಿಗ್ಗೆ ಅವುಗಳನ್ನು ಸ್ವಚ್ಛಗೊಳಿಸಿ. ಈ ಪ್ರಕ್ರಿಯೆಯು ಶೂಗಳ ವಾಸನೆಯನ್ನು ಬಲು ಸುಲಭವಾಗಿ  ತೆಗೆದುಹಾಕಲು ಸಹಾಯ ಮಾಡುತ್ತದೆ.

ಟೀ ಬ್ಯಾಗ್ಗಳುಟೀ ಬ್ಯಾಗ್‌ಗಳಲ್ಲಿರುವ ಟ್ಯಾನಿನ್‌ಗಳು ಬ್ಯಾಕ್ಟೀರಿಯಾವನ್ನು ತೊಡೆದುಹಾಕಲು ಸಹಾಯ ಮಾಡುತ್ತವೆ. ಟ್ಯಾನಿನ್‌ಗಳು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುವ ನೈಸರ್ಗಿಕ ಸಂಯುಕ್ತವಾಗಿದೆ. ಹಾಗಾಗಿರುವಾಗ ನೀವು ಶೂಗಳ ಒಳಗೆ ಈ ಟೀ ಬ್ಯಾಗ್‌ಗಳನ್ನು ಇಡಿ. ಇದು ಯಾವುದೇ ಕೆಟ್ಟ ವಾಸನೆಯನ್ನು ಹೋಗಲಾಡಿಸುತ್ತದೆ.

ವಿನೆಗರ್ಬಿಳಿ ವಿನೆಗರ್ ಸಹಾಯದಿಂದ ನೀವು ಶೂಗಳ ವಾಸನೆಯನ್ನು ತೆಗೆದುಹಾಕಬಹುದು. ಇದಕ್ಕಾಗಿ, ಸ್ವಲ್ಪ ಬಿಳಿ ವಿನೆಗರ್ ಮತ್ತು ಸ್ವಲ್ಪ ನೀರನ್ನು ಸ್ಪ್ರೇ ಬಾಟಲಿಯಲ್ಲಿ ಬೆರೆಸಿ. ಶೂಗಳ ಒಳಭಾಗಕ್ಕೆ ಸಿಂಪಡಿಸಿ. ಬಿಳಿ ವಿನೆಗರ್ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಇದು ವಾಸನೆಯನ್ನು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

ನಿಂಬೆ ಅಥವಾ ಕಿತ್ತಳೆ ಸಿಪ್ಪೆಶೂಗಳಿಂದ ವಾಸನೆಯನ್ನು ತೆಗೆದುಹಾಕಲು, ರಾತ್ರಿ ಮಲಗುವ ಮುನ್ನ ನಿಂಬೆ ಅಥವಾ ಕಿತ್ತಳೆ ಸಿಪ್ಪೆಗಳನ್ನು ಅವುಗಳ ಒಳಗೆ ಇರಿಸಿ. ಮರುದಿನ ಬೆಳಿಗ್ಗೆ ಸಿಪ್ಪೆಗಳನ್ನು ತೆಗೆಯಿರಿ.  ಈ ಸುಲಭ ತಂತ್ರ ನಿಮ್ಮ ಶೂಗಳಲ್ಲಿನ ವಾಸನೆಯು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *