“ಶಿಕ್ಷಕರ ಕಿರುಕುಳದಿಂದ ಖಿನ್ನಗೊಂಡ 10ನೇ ತರಗತಿ ಬಾಲಕ ದೆಹಲಿ ಮೆಟ್ರೋದಲ್ಲಿ ಆತ್ಮ*ತ್ಯೆ.

 “ಶಿಕ್ಷಕರ ಕಿರುಕುಳದಿಂದ ಖಿನ್ನಗೊಂಡ 10ನೇ ತರಗತಿ ಬಾಲಕ ದೆಹಲಿ ಮೆಟ್ರೋದಲ್ಲಿ ಆತ್ಮ*ತ್ಯೆ.

ನವದೆಹಲಿ: ಅಮ್ಮಾ ನಿನ್ನನ್ನು ನೋಯಿಸಿದ್ದೇನೆ ಕ್ಷಮಿಸಿಬಿಡು ಎಂದು ಪತ್ರ ಬರೆದಿಟ್ಟು ಬಾಲಕನೊಬ್ಬ ದೆಹಲಿ ಮೆಟ್ರೋ ಎದುರು ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಮಂಗಳವಾರ ಬೆಳಗ್ಗೆ ಮನೆಯಿಂದ ಹೊರಟಿದ್ದ 16 ವರ್ಷದ ಬಾಲಕ ಡ್ರಾಮಾ ಕ್ಲಬ್​ನಲ್ಲಿ ಮತ್ತೊಂದು ದಿನ ಕಳೆಯಲು ಇಷ್ಟಪಟ್ಟಿದ್ದ, ಆದರೆ ಅಂದೇ ಮಧ್ಯಾಹ್ನ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ನ ಅಂಗಾಂಗಗಳನ್ನು ದಾನ ಮಾಡುವಂತೆ ಮತ್ತು ಯಾವುದೇ ಮಗು ತಾನು ಅನುಭವಿಸಿದ ನೋವನ್ನು ಅನುಭವಿಸಬಾರದು ಎಂದು ಆತ್ಮಹತ್ಯೆ ಪತ್ರವನ್ನು ಬರೆದಿಟ್ಟಿದ್ದಾನೆ.

ಖಾಸಗಿ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿ ಮಧ್ಯಾಹ್ನ 2.34 ಕ್ಕೆ ಮಧ್ಯ ದೆಹಲಿಯ ರಾಜೇಂದ್ರ ಪ್ಲೇಸ್ ಮೆಟ್ರೋ ನಿಲ್ದಾಣದ ಪ್ಲಾಟ್‌ಫಾರ್ಮ್‌ನಿಂದ ಹಾರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆತನನ್ನು ಹತ್ತಿರದಲ್ಲಿದ್ದ ಬಿಎಲ್​ಕೆ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಂತಿಮವಾಗಿ ಆತ ಮೃತಪಟ್ಟಿದ್ದಾನೆಂದು ವೈದ್ಯರು ಘೋಷಿಸಿದರು. ಆತ್ಮಹತ್ಯೆ ಪತ್ರದಲ್ಲಿ ಶಿಕ್ಷಕರ ಬಗ್ಗೆ ಮಾತನಾಡಿದ್ದು, ಸಾಕಷ್ಟು ದಿನಗಳಿಂದ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಬರೆದಿದ್ದಾನೆ.

ಶಾಲೆಯಲ್ಲಿ ಆತನನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿತ್ತು, ಸಾಕಷ್ಟು ದಿನಗಳಿಂದ ಆತ ಮಾನಸಿಕವಾಗಿ ಕುಗ್ಗಿ ಹೋಗಿದ್ದ,ಶಿಕ್ಷಕರು ಪ್ರತಿಯೊಂದು ಸಣ್ಣ ವಿಷಯಕ್ಕೂ ಅವನನ್ನು ಗದರಿಸುತ್ತಿದ್ದರು ಮತ್ತು ಭಾವನಾತ್ಮಕವಾಗಿ ನೋವುಂಟು ಮಾಡುತ್ತಿದ್ದರು.ನಾವು ಹಲವು ಬಾರಿ ದೂರು ನೀಡಿದ್ದೇವೆ, ಆದರೆ ಅದು ನಿಲ್ಲಲೇ ಇಲ್ಲ ಎಂದು ತಂದೆ ಪಿಟಿಐಗೆ ತಿಳಿಸಿದ್ದಾರೆ.

ಪರೀಕ್ಷೆಗಳು ತೀರಾ ಹತ್ತಿರವಾಗಿದ್ದವು, ಪರೀಕ್ಷೆಗಳು ಮುಗಿದ ನಂತರ ಅವನನ್ನು ಬೇರೆ ಶಾಲೆಗೆ ಸೇರಿಸಲಾಗುವುದು ಎಂದು ಕುಟುಂಬದವರು ಬಾಲಕನಿಗೆ ಭರವಸೆ ನೀಡಿದ್ದರು ಎಂದು ಹೇಳಿದರು. ಮಂಗಳವಾರ ಡ್ರಾಮಾ ಕ್ಲಬ್​ನಲ್ಲಿ ಕಾರ್ಯಕ್ರಮವಿದ್ದ ಕಾರಣ ಆತ ಅಲ್ಲಿಯೇ ಉಳಿದಿದ್ದ, ಅಲ್ಲಿ ಯಾವುದೋ ಘಟನೆ ನಡೆದಿರಬೇಕು ಅದಕ್ಕೆ ಆತ ಅಸಮಾಧಾನಗೊಂಡು ಈ ನಿರ್ಧಾರ ತೆಗೆದುಕೊಂಡಿದ್ದಾನೆ ಎಂದು ದೂರಿದ್ದಾರೆ.

ಆತ ನಾಟಕ ರಿಹರ್ಸಲ್ ಮಾಡುವಾಗ ಜಾರಿ ಬಿದ್ದಿದ್ದ, ಶಿಕ್ಷಕರು ಆತನನ್ನು ಎಲ್ಲರ ಮುಂದೆ ಅವಮಾನಿಸಿದ್ದರು. ಬಳಿಕ ಆತ ಅಳಲು ಶುರುಮಾಡಿದ್ದ ಇದನ್ನು ಶಿಕ್ಷಕರು ಲೆಕ್ಕಿಸಿರಲಿಲ್ಲ, ತನ್ನ ಮಗ ಮೂಲೆಗುಂಪಾಗಿದ್ದಾನೆಂದು ಭಾವಿಸಿದ್ದು ಇದೇ ಮೊದಲಲ್ಲ ಎಂದು ಅವರು ಹೇಳಿದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *