ಗ್ರಾಮೀಣ ಮಹಿಳೆಯರಿಗೆ ದೊಡ್ಡ ಎಚ್ಚರಿಕೆ.

ಗ್ರಾಮೀಣ ಮಹಿಳೆಯರಿಗೆ ದೊಡ್ಡ ಎಚ್ಚರಿಕೆ.

ಕರ್ನಾಟಕದಲ್ಲಿ ಹೆಚ್ಚುತ್ತಿರುವ ಗರ್ಭಕಂಠದ ಕ್ಯಾನ್ಸರ್.

ಭಾರತದಾದ್ಯಂತ ಗರ್ಭಕಂಠದ ಕ್ಯಾನ್ಸರ್  ಪ್ರಕರಣಗಳು ಕ್ರಮೇಣ ಕಡಿಮೆಯಾಗುತ್ತಿದ್ದರೂ, ಕರ್ನಾಟಕದ ವೈದ್ಯರು ಈ ರೋಗವು ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರ ಮೇಲೆ ಹೆಚ್ಚಿನ ಪರಿಣಾಮವನ್ನು ಉಂಟು ಮಾಡುತ್ತಿದೆ ಎಂದು ಹೇಳಿದ್ದಾರೆ. ಈ ರೋಗಕ್ಕೆ ಸರಿಯಾದ ಚಿಕಿತ್ಸೆ ಮಾಡಿದಿರುವುದೇ ಕಾರಣ ಎಂದು ಹೇಳಿದ್ದಾರೆ. ಕಿದ್ವಾಯಿ ಸ್ಮಾರಕ ಆಂಕೊಲಾಜಿ ಸಂಸ್ಥೆಯ ಆಂಕೊಲಾಜಿಸ್ಟ್ ಸಲಹೆಗಾರ ಡಾ. ಎಸ್.ಡಿ. ಶ್ಯಾಮಸುಂದರ್​​ ಅವರು ಹೇಳಿರುವ ಪ್ರಕಾರ, ಗ್ರಾಮೀಣ ಪ್ರದೇಶಗಳಲ್ಲಿ ಗರ್ಭಕಂಠದ ಕ್ಯಾನ್ಸರ್ ರೋಗಗಳು ಕಂಡು ಬಂದಿದೆ. ಒಂದು ಕಡೆ ನಗರ ಪ್ರದೇಶಗಳಲ್ಲಿ ಸ್ತನ ಕ್ಯಾನ್ಸರ್ ಹೆಚ್ಚಾಗಿ ಕಂಡು ಬಂದರೆ, ಗರ್ಭಕಂಠದ ಕ್ಯಾನ್ಸರ್ ಗ್ರಾಮೀಣ ಕರ್ನಾಟಕದ ಅನೇಕ ಮಹಿಳೆಯರ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಬಾಲ್ಯ ವಿವಾಹ, ಬಹು ಹೆರಿಗೆ, ಮನೆಯಲ್ಲಿಯೇ ಹೆರಿಗೆ ಮಾಡಿಸುವುದು, ಮುಟ್ಟಿನ ನೈರ್ಮಲ್ಯದ ಕೊರತೆ ಮತ್ತು ಅರಿವಿನ ಕೊರತೆ ಇದಕ್ಕೆ ಕಾರಣ ಎಂದು ಹೇಳಿದ್ದಾರೆ.

ಗರ್ಭಕಂಠದ ಕ್ಯಾನ್ಸರ್ HPV ವೈರಸ್‌ನ ನಿರಂತರ ಸೋಂಕಿನಿಂದ ಉಂಟಾಗುತ್ತದೆ. ಇದರ ಜತೆಗೆ ಹೆರಿಗೆಯ ಸಮಯದಲ್ಲಿ ಅಸಮರ್ಪಕ ನೈರ್ಮಲ್ಯ, ಸಾಂಸ್ಥಿಕವಲ್ಲದ ಹೆರಿಗೆಗಳು, ಚಿಕ್ಕ ವಯಸ್ಸಿನಲ್ಲಿ ಹೆರಿಗೆ ಆಗುವುದು. ಈ ಎಲ್ಲ ಅಂಶಗಳು ಅಪಾಯವನ್ನು ಹೆಚ್ಚಿಸುತ್ತವೆ. ನಗರ ಪ್ರದೇಶಗಳಲ್ಲಿಯೂ ಈಗಲ್ಲೂ ಇದರ ಚಿಕಿತ್ಸೆ ಪಡೆಯಲು ಹಿಂಜರಿಯುತ್ತಿದ್ದರೆ ಎಂಬುದು ಕೂಡ ಅಚ್ಚರಿಯ ವಿಚಾರವಾಗಿದೆ. ಹಾಗೂ ಮಹಿಳೆಯರು ಸಾಮಾನ್ಯವಾಗಿ ತಮ್ಮನ್ನು ತಾವು ಪರೀಕ್ಷಿಸಿಕೊಳ್ಳಲು ಹಿಂಜರಿಯುತ್ತಾರೆ ಎಂದು ರಂಗದೊರೆ ಸ್ಮಾರಕ ಆಸ್ಪತ್ರೆಯ ಕನ್ಸಲ್ಟೆಂಟ್ ಸರ್ಜಿಕಲ್ ಆಂಕೊಲಾಜಿಸ್ಟ್ ಡಾ. ಕವಿತಾ ಜೈನ್ ಹೇಳಿದ್ದಾರೆ ಎಂದು ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.

ಗರ್ಭಕಂಠದ ಕ್ಯಾನ್ಸರ್ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಲು ಪ್ರಮುಖ ಕಾರಣ:

ಅರಿವಿನ ಕೊರತೆ: ರೋಗದ ಲಕ್ಷಣಗಳ ಬಗ್ಗೆ ಮತ್ತು ಸ್ಕ್ರೀನಿಂಗ್ (Screening) ಮಹತ್ವದ ಬಗ್ಗೆ ಗ್ರಾಮೀಣ ಮಹಿಳೆಯರಲ್ಲಿ ಮಾಹಿತಿ ಕಡಿಮೆ ಇರುವುದು.

ತಡವಾಗಿ ಚಿಕಿತ್ಸೆ: ಶೇ. 60-70 ರಷ್ಟು ಪ್ರಕರಣಗಳು ಕೊನೆಯ ಹಂತದಲ್ಲಿ ಪತ್ತೆಯಾಗುತ್ತಿವೆ. ಇದರಿಂದ ಚಿಕಿತ್ಸೆ ಫಲಕಾರಿಯಾಗುವುದು ಕಷ್ಟವಾಗುತ್ತಿದೆ.

ಸಾಮಾಜಿಕ ಮತ್ತು ಆರ್ಥಿಕ ಕಾರಣಗಳು: ಬಾಲ್ಯ ವಿವಾಹ, ಚಿಕ್ಕ ವಯಸ್ಸಿನಲ್ಲಿ ಗರ್ಭಧಾರಣೆ, ಹೆಚ್ಚು ಮಕ್ಕಳನ್ನು ಪಡೆಯುವುದು ಮತ್ತು ಪೌಷ್ಟಿಕಾಂಶದ ಕೊರತೆ ಅಪಾಯವನ್ನು ಹೆಚ್ಚಿಸುತ್ತಿವೆ.

ನೈರ್ಮಲ್ಯದ ಕೊರತೆ: ಮುಟ್ಟಿನ ಅವಧಿಯಲ್ಲಿ ಸರಿಯಾದ ನೈರ್ಮಲ್ಯ ಕಾಪಾಡಿಕೊಳ್ಳದಿರುವುದು ಸೋಂಕಿಗೆ ದಾರಿ ಮಾಡಿಕೊಡುತ್ತಿದೆ.

ರೋಗದ ಲಕ್ಷಣಗಳು:

ಅಸಹಜ ಯೋನಿ ರಕ್ತಸ್ರಾವ (ಮುಟ್ಟಿನ ನಡುವೆ ಅಥವಾ ದೈಹಿಕ ಸಂಬಂಧದ ನಂತರ).

ಕೆಟ್ಟ ವಾಸನೆಯಿಂದ ಕೂಡಿದ ಸ್ರಾವ.

ಕೆಳಹೊಟ್ಟೆ ಅಥವಾ ಸೊಂಟದ ಭಾಗದಲ್ಲಿ ನಿರಂತರ ನೋವು.

ಕಾಲುಗಳಲ್ಲಿ ಊತ ಮತ್ತು ಅತಿಯಾದ ಸುಸ್ತು.

ಈ ಬಗ್ಗೆ ಸರ್ಕಾರದ ಹೊಸ ಕ್ರಮಗಳು (2025-26):

ಉಚಿತ ಎಚ್ಪಿವಿ ಲಸಿಕೆ (HPV Vaccine): ಕಲ್ಯಾಣ ಕರ್ನಾಟಕದ ಭಾಗದ 14 ವರ್ಷದ ಬಾಲಕಿಯರಿಗೆ ಉಚಿತವಾಗಿ ಎಚ್‌ಪಿವಿ ಲಸಿಕೆ ನೀಡುವ ಅಭಿಯಾನ ಆರಂಭವಾಗಿದೆ.

ಗೃಹ ಆರೋಗ್ಯ ಯೋಜನೆ: ಈ ಯೋಜನೆಯಡಿ ಆರೋಗ್ಯ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಗರ್ಭಕಂಠದ ಕ್ಯಾನ್ಸರ್ ತಪಾಸಣೆ ಮತ್ತು ಅರಿವು ಮೂಡಿಸುತ್ತಿದ್ದಾರೆ.

ಚಿಕ್ಕಬಳ್ಳಾಪುರ ಪೈಲಟ್ ಪ್ರಾಜೆಕ್ಟ್: ಗರ್ಭಕಂಠದ ಕ್ಯಾನ್ಸರ್ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಇಲ್ಲಿ ವಿಶೇಷ ಸ್ಕ್ರೀನಿಂಗ್ ಕ್ಯಾಂಪ್‌ಗಳನ್ನು ಆಯೋಜಿಸಲಾಗಿದೆ.

ತಡೆಗಟ್ಟುವ ಕ್ರಮಗಳು:

ಪ್ಯಾಪ್ ಸ್ಮೀಯರ್ ಟೆಸ್ಟ್ (Pap Smear): 25 ವರ್ಷ ಮೇಲ್ಪಟ್ಟ ಮಹಿಳೆಯರು ಪ್ರತಿ 3-5 ವರ್ಷಕ್ಕೊಮ್ಮೆ ಈ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.

ಲಸಿಕೆ: 9 ರಿಂದ 14 ವರ್ಷದ ಹೆಣ್ಣು ಮಕ್ಕಳಿಗೆ ಲಸಿಕೆ ಕೊಡಿಸುವುದು ಅತ್ಯಂತ ಪರಿಣಾಮಕಾರಿ ಮಾರ್ಗ

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *