ವೇಗವಾಗಿ ಬಂದ ಕಾರು ಬೈಕ್ಗೆ ಡಿಕ್ಕಿ ಹೊಡೆದಿದೆ.
ಸಾಂಗ್ಲಿ : ವೇಗವಾಗಿ ಬಂದ ಕಾರೊಂದು ರಸ್ತೆ ಬದಿ ನಿಂತಿದ್ದ ಬೈಕ್ಗೆ ಡಿಕ್ಕಿ ಹೊಡೆದ ವಿಡಿಯೋ ವೈರಲ್ ಆಗಿದೆ. ಎರಡು ಬೈಕ್ಗಳು ನಿಂತಿದ್ದವು, ಒಂದು ಬೈಕ್‌ನಲ್ಲಿ ಓರ್ವ ಪುರುಷ ಮತ್ತೊಬ್ಬರು ಮಹಿಳೆ ಇದ್ದರೆ, ಮತ್ತೊಂದು ಬೈಕ್ ಪಕ್ಕದಲ್ಲಿ ಆ ಬೈಕ್ ಸವಾರ ನಿಂತಿದ್ದರು. ಇಬ್ಬರೂ ಮಾತನಾಡುತ್ತಿರುವಾಗ ಇಬ್ಬರು ಇದ್ದ ಬೈಕ್ಗೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದಿದೆ. ಅದಾದ ಬಳಿಕ ಪಾದಚಾರಿಗಳಿಗೂ ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ.
ಈ ಘಟನೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದಿದೆ. ಸಖ್ರಲೆ ಪ್ರದೇಶದ ಈಶ್ವರಪುರ-ಟಕಾರಿ ರಸ್ತೆಯಲ್ಲಿರುವ ಪೆಟ್ರೋಲ್ ಪಂಪ್ ಬಳಿ ಈ ಅಪಘಾತ ಸಂಭವಿಸಿದೆ. ಈಶ್ವರಪುರದ ನಿನೈನಗರ ನಿವಾಸಿ ನಿತಿನ್ ಶಿವಾಜಿ ಪವಾರ್ ತನ್ನ ತಾಯಿ ಛಾಯಾ ಪವಾರ್ ಅವರೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿದೆ.
For More Updates Join our WhatsApp Group :




