ಪ್ರಧಾನಿ ನರೇಂದ್ರ ಮೋದಿ ಮನೆ ಬಳಿ Drone ಪತ್ತೆ..!

ನವದೆಹಲಿ: ವಿಮಾನ ಹಾರಾಟ ನಿಷೇಧಿತ ವಲಯವಾಗಿರುವ ದೆಹಲಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಬಳಿ ಇಂದು ಡ್ರೋನ್ ಪತ್ತೆಯಾಗಿದೆ. ಸೋಮವಾರ ಬೆಳಿಗ್ಗೆ 5:30 ರ ಸುಮಾರಿಗೆ ಪ್ರಧಾನಿಗೆ ನಿಕಟ ಭದ್ರತೆಯನ್ನು ಒದಗಿಸುವ ವಿಶೇಷ ರಕ್ಷಣಾ ಗುಂಪು (ಎಸ್ಪಿಜಿ) ಪೊಲೀಸರನ್ನು ಸಂಪರ್ಕಿಸಿದೆ ಎಂದು ದೆಹಲಿ ಪೊಲೀಸರು ತಿಳಿಸಿರುವುದಾಗಿ ವರದಿ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ

ಮೋದಿ ಮನೆ ಬಳಿ ಡ್ರೋನ್

ಘಟನೆ ಸಂಬಂಧ ತನಿಖೆ ನಡೆಯುತ್ತಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಈಗಾಗಲೇ ಡ್ರೋನ್ಗಾಗಿ ಶೋಧ ಕಾರ್ಯಾಚರಣೆ ಆರಂಭವಾಗಿದೆ. ಆದರೆ ಈವರೆಗೆ ಏನೂ ಪತ್ತೆಯಾಗಿಲ್ಲ.ದೆಹಲಿ ಪೊಲೀಸರ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಬಳಿ ಅಪರಿಚಿತ ಹಾರುವ ವಸ್ತುವೊಂದರ ಬಗ್ಗೆ ಎನ್ಡಿಡಿ ನಿಯಂತ್ರಣ ಕೊಠಡಿಯಲ್ಲಿ ಮಾಹಿತಿ ಬಂದಿದೆ.

https://pragatitv.in/prime-minister-narendra-modi-tweeted-on-bakrid-festival/

ಈವರೆಗೆ ಪೊಲೀಸರು ಮತ್ತು ಇತರ ಭದ್ರತಾ ಏಜೆನ್ಸಿಗಳ ಸಿಬ್ಬಂದಿ ಪಿಎಂ ಮೋದಿ ನಿವಾಸದ ಬಳಿ ಅನುಮಾನಾಸ್ಪದವಾಗಿ ಏನನ್ನೂ ಕಂಡುಕೊಂಡಿಲ್ಲ. ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ರೂಮ್ ಸಹ ಏನನ್ನೂ ಪತ್ತೆ ಮಾಡಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Facebook: https://www.facebook.com/PragathiTV/

Pragati TV Social Connect for more latest u

Leave a Reply

Your email address will not be published. Required fields are marked *