ಪೊಲೀಸರ ಮೇಲೆ ತಲ್ವಾರ್​ ಬೀಸಿದ ಡ್ರಗ್ ಪೆಡ್ಲರ್‌ಗೆ ಗುಂಡೇಟು

ಹೊಸಕೋಟೆ: ಬೆಂಗಳೂರು ನಗರ ಸೇರಿದಂತೆ ಹೊರವಲಯದಲ್ಲಿ ಕಳೆದೊಂದು ವಾರದಿಂದ ಸರಗಳ್ಳತನ ಪ್ರಕರಣಗಳು ಹೆಚ್ಚಾಗಿವೆ. ಸರಗಳ್ಳರನ್ನು ಹಿಡಿಯಲು ನಗರದ ಹೊರಭಾಗಗಳಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಡ್ರಗ್ ಪೆಡ್ಲರ್‌ವೋರ್ವನನ್ನು ಪೊಲೀಸರು ಹಿಡಿಯಲು ಮುಂದಾಗಿದ್ದು, ಆತ ಪೊಲೀಸರ ಮೇಲೆಯೇ ತಲ್ವಾರ್​ನಿಂದ ಹಲ್ಲೆ ನಡೆಸಲು ಮಾಡಲು ಮುಂದಾಗಿದ್ದಾನೆ. ಪೊಲೀಸರು ಗುಂಡು ಹಾರಿಸಿ, ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಹೊಸಕೋಟೆ ಟೋಲ್ ಪ್ಲಾಜಾ ಸಮೀಪ ಮಂಗಳವಾರ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಘಟನೆ ನಡೆದಿದೆ.

ಟೋಲ್ ಪ್ಲಾಜಾ ಸಮೀಪ ಮೂವರು ವ್ಯಕ್ತಿಗಳು ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಮಾಹಿತಿ ಪಡೆದ ಹೊಸಕೋಟೆ ಇನ್ಸ್‌ಪೆಕ್ಟರ್ ಅಶೋಕ್ ನೇತೃತ್ವದ ತಂಡ ಸ್ಥಳಕ್ಕೆ ತೆರಳುತ್ತಿದ್ದಂತೆ ಸ್ಕೂಟರ್‌ನ್ಲಲಿ ಬಂದಿದ್ದ ಡ್ರಗ್ ಪೆಡ್ಲರ್ ಸೈಯದ್ ಸುಹೇಲ್ ಎಂಬಾತ ತನ್ನಲ್ಲಿದ್ದ ಮಾರಕಾಸ್ತ್ರದಿಂದ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ಇನ್ಸ್‌ಪೆಕ್ಟರ್ ಅಶೋಕ್, ಆರೋಪಿಯ ಮೇಲೆ ಗುಂಡು ಹಾರಿಸಿದ್ದಾರೆ” ಎಂದು ಬೆಂಗಳೂರು ಗ್ರಾಮಾಂತರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾಗರಾಜ್ ತಿಳಿಸಿದ್ದಾರೆ.

”ಆರೋಪಿ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆಯಲಾಗಿದೆ. ತಕ್ಷಣ ಆತನನ್ನು ಹೊಸಕೋಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಎಂ.ವಿ.ಜೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಬಂಧಿತ ಡ್ರಗ್ ಪೆಡ್ಲರ್ ಈ ಹಿಂದೆ ಯಲಹಂಕ ಪೊಲೀಸರ ಮೇಲೂ ಹಲ್ಲೆ ನಡೆಸಿ ಪರಾರಿಯಾಗಿದ್ದ” ಎಂದು ಅವರು ಮಾಹಿತಿ ನೀಡಿದರು.

Leave a Reply

Your email address will not be published. Required fields are marked *