ಐಟಿ ದಾಳಿ, 15 ನಿಮಿಷಗಳ ಮೌನ, ಆಫ್ ಆಗಿದ್ದ ಸಿಸಿಟಿವಿ – ಉತ್ತರ ಬೇಕಾದ ಪ್ರಶ್ನೆಗಳು!
ಬೆಂಗಳೂರು : ಸಾವಿರಾರು ಕೋಟಿ ರೂಪಾಯಿ ಆಸ್ತಿಗಳ ಒಡೆಯ ಸಿಜೆ ರಾಯ್ ಐಟಿ ದಾಳಿ ನಡೆದ ಹೊತ್ತಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದ್ದು, ಅವರ ಸಾವಿನ ಸುತ್ತ ಇದೀಗ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಐಟಿ ದಾಳಿಯಿಂದ ಹುಟ್ಟಿಕೊಂಡ ಭಯ ಆತ್ಮಹತ್ಯೆಗೆ ಕಾರಣ ಎಂದು ಅನುಮಾನಪಡಲಾಗಿದೆ. ಆದರೆ, ಈ ಸಾವಿನ ಹಿಂದೆ ಬೇರೆ ಕಾರಣವೂ ಇರಬಹುದು ಎನ್ನಲಾಗುತ್ತಿದೆ. ಶೂನ್ಯ ಸಾಲದ ಬ್ಯುಸಿನೆಸ್ ಮಾಡೆಲ್ನಿಂದ ಪ್ರಖ್ಯಾತಿ ಗಳಿಸಿದ್ದ ರಾಯ್ ಸಾವಿನ ಹಿಂದೆ ಅನುಮಾನದ ಹುತ್ತವೇ ಬೆಳೆದು ನಿಂತಿದೆ.
ಅನುಮಾನ ನಂ.1: ಐಟಿ ಟಾರ್ಚರ್ಗೆ ಆತ್ಮಹತ್ಯೆ?
ಸತತ ಮೂರು ತಿಂಗಳಿಂದಲೂ ಕಾನ್ಫಿಡೆಂಟ್ ಗ್ರೂಪ್ ಮೇಲೆ ಐಟಿ ಅಧಿಕಾರಿಗಳು ರೇಡ್ ನಡೆಸಿದ್ದಾರೆಂಬ ಮಾಹಿತಿ ಇದೆ. ಕಳೆದ ಡಿಸೆಂಬರ್ನಲ್ಲೂ ಕೇರಳದ ಕೊಚ್ಚಿ ಮತ್ತು ಬೆಂಗಳೂರಿನಲ್ಲಿ ರೇಡ್ ಮಾಡಿದ್ದರು ಎನ್ನಲಾಗಿದೆ. ಈಗ ಅದೇ ಡಿಸೆಂಬರ್ ರೇಡ್ನ ಮುಂದುವರಿದ ದಾಳಿ ಶುಕ್ರವಾರ ನಡೆದಿತ್ತು. ಬುಧವಾರ ಕೇರಳದ ಕೊಚ್ಚಿಯಿಂದ ಐಟಿ ಅಧಿಕಾರಿಗಳ ತಂಡ ಆಗಮಿಸಿತ್ತು. ಬುಧವಾರದಿಂದ ಪರಿಶೀಲನೆ ಬಳಿಕ ಕೆಲ ಸ್ಪಷ್ಟನೆ ಕೇಳಲು ಶುಕ್ರವಾರ ಮತ್ತೆ ಐಟಿ ತಂಡ, ಮಧ್ಯಾಹ್ನ 3ಗಂಟೆ ಸುಮಾರಿಗೆ ರಾಯ್ ಅಪಾರ್ಟ್ಮೆಂಟ್ ಕಚೇರಿಗೆ ಬಂದಿತ್ತು.
ಹೀಗಾಗಿ, ಐಟಿ ಅಧಿಕಾರಿಗಳ ಟಾರ್ಚರ್ ಸಹೋದರನ ಸಾವಿಗೆ ಕಾರಣ. ಐಟಿ ಅಧಿಕಾರಿ ಅಡಿಷನಲ್ ಕಮಿಷನರ್ ಕೃಷ್ಣಪ್ರಸಾದ್ ಎಂಬುವವರೇ ಸಾವಿಗೆ ಕಾರಣ ಎಂದು ರಾಯ್ ಸಹೋದರ ಬಾಬು ಸಿ ಜೋಸೆಫ್ ಆರೋಪ ಮಾಡಿದ್ದಾರೆ.
ರಾಯ್ ಸಹೋದರ ಹೇಳಿದಂತೆ ಶುಕ್ರವಾರ ಮಧ್ಯಾಹ್ನ 3ಗಂಟೆ ಸುಮಾರಿಗೆ 2 ಕಾರುಗಳಲ್ಲಿ 10 ಮಂದಿ ಕೊಚ್ಚಿಯ ಐಟಿ ಅಧಿಕಾರಿಗಳ ತಂಡ ಆನೆಪಾಳ್ಯದ ಅಪಾರ್ಟ್ಮೆಂಟ್ ಕಚೇರಿಗೆ ಬಂದಿತ್ತು. ಆದರೆ, ಆ ವೇಳೆ ಪ್ರತ್ಯೇಕವಾಗಿ ಕೊಠಡಿಗೆ ರಾಯ್ ಹೋಗಿದ್ದೇಕೆ ಎಂಬುದೇ ಈಗ ಅನುಮಾನಕ್ಕೆ ಕಾರಣವಾಗಿದೆ.
For More Updates Join our WhatsApp Group :




