ಗಾಜಾ ದಂಪತಿಯ ಕೃತಜ್ಞತೆ: ಮಗುವಿಗೆ ‘ಸಿಂಗಾಪುರ್’ ಎಂದು ಹೆಸರಿಟ್ಟು ವಿಶ್ವವನ್ನು ಸ್ಪರ್ಶಿಸಿದ ಕಥೆ.

ಗಾಜಾ ದಂಪತಿಯ ಕೃತಜ್ಞತೆ: ಮಗುವಿಗೆ ‘ಸಿಂಗಾಪುರ್’ ಎಂದು ಹೆಸರಿಟ್ಟು ವಿಶ್ವವನ್ನು ಸ್ಪರ್ಶಿಸಿದ ಕಥೆ.

ಗಾಜಾ ಯುದ್ಧ ಭೂಮಿಯಲ್ಲಿ ಒಂದು ಮನಕಲಕುವ ಘಟನೆ ನಡೆದಿದೆ. ಇದೀಗ ಈ ಘಟನೆ ವಿಶ್ವದಲ್ಲೇ ಸುದ್ದಿಯಾಗುತ್ತಿದೆ. ಕೆಲವರು ಮಾಡಿದ ಸಹಾಯಕ್ಕೆ ಕೃತಜ್ಞತೆ ಸಲ್ಲಿಸುವುದು ಬಿಡಿ, ಅದನ್ನು ನೆನಪಿಸಿಕೊಳ್ಳುವುದಿಲ್ಲ, ಆದರೆ ಇಲ್ಲೊಂದು ದಂಪತಿಗಳು ಒಂದು ದೇಶ ಯುದ್ಧ ಸಮಯದಲ್ಲಿ ಮಾಡಿದ ಸಹಾಯಕ್ಕೆ ಕೃತಜ್ಞತೆ ಸಲ್ಲಿಸಲು ತಮಗೆ ಹುಟ್ಟಿದ ಮಗುವಿಗೆ ಆ ದೇಶದ ಹೆಸರನ್ನು ಇಟ್ಟಿದ್ದಾರೆ. ಅಷ್ಟಕ್ಕೂ ಗಾಜಾಕ್ಕೆ ಸಹಾಯ ಮಾಡಿದ ದೇಶ ಯಾವುದು? ಎಂಬ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ. ಗಾಜಾದ ದಂಪತಿಗಳು ತಮ್ಮ ನವಜಾತ ಶಿಶುವಿಗೆ “ಸಿಂಗಾಪುರ” ಎಂದು ಹೆಸರಿಟ್ಟಿದ್ದಾರೆ. ಸಂಘರ್ಷದ ಸಮಯದಲ್ಲಿ ಸಿಂಗಾಪುರ್​​​ ಮೂಲದ ದತ್ತಿ ಸಂಸ್ಥೆಯು ನೀಡಿದ ಸಹಾಯಕ್ಕೆ ಈ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.

ಸಿಂಗಾಪುರನ ಗಿಲ್ಬರ್ಟ್ ಗೋ ನೇತೃತ್ವದ ಮಾನವೀಯ ತಂಡ ಲವ್ ಏಡ್ ಸಿಂಗಾಪುರ್ ಈ ಬಗ್ಗೆ ಹಂಚಿಕೊಂಡಿದೆ. ಈ ಮಗು ಅಕ್ಟೋಬರ್ 16 ರಂದು ಜನಿಸಿತು. ಮಗುವಿನ ತಂದೆ, ಗಾಜಾದಲ್ಲಿ ಲವ್ ಏಡ್ ಸಿಂಗಾಪುರ ನಡೆಸುತ್ತಿದ್ದ ಸೂಪ್ ಕಿಚನ್‌ನಲ್ಲಿ ಅಡುಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು, ಗಾಜಾದಲ್ಲಿ ಸಂಘರ್ಷಣೆ ವೇಳೆ ಈ ಕುಟುಂಬಕ್ಕೆ ಲವ್ ಏಡ್ ಸಿಂಗಾಪುರ್ ಸಹಾಯವನ್ನು ಮಾಡಿತ್ತು. ಈ ಕಾರಣಕ್ಕೆ ತಮ್ಮ ಮಗುವಿನ ಹೆಸರನ್ನು ಸಿಂಗಾಪುರ್ ಎಂದು ಇಡುವ ಮೂಲಕ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಇಸ್ರೇಲ್-ಹಮಾಸ್ ಸಂಘರ್ಷದ ವೇಳೆ ಹಮ್ದಾನ್ ಹದಾದ್ ಎಂಬುವವರ ಪತ್ನಿಗೆ ಗರ್ಭಾವಸ್ಥೆಯಲ್ಲಿ ದೊಡ್ಡ ಮಟ್ಟದ ಸಹಾಯವನ್ನು ಲವ್ ಏಡ್ ಸಿಂಗಾಪುರ್ ಸಂಸ್ಥೆ ಸಹಾಯವನ್ನು ಮಾಡಿತ್ತು ಎಂದು ಹೇಳಿದ್ದಾರೆ. ” ನನಗೆ ತುಂಬಾ ಖುಷಿಯಾಗುತ್ತಿದೆ. ನನ್ನ ಮಗಳನ್ನು ತುಂಬಾ ಪ್ರೀತಿಸುತ್ತೇನೆ. ಅವಳು ಹುಟ್ಟುವುದೇ ಇಲ್ಲ ಎಂದು ಅಂದುಕೊಂಡಿದೆ. ಅಷ್ಟೊಂದು ಕೆಟ್ಟ ಪರಿಸ್ಥಿತಿ ಇಲ್ಲಿತ್ತು. ಆದರೆ ಲವ್ ಏಡ್ ಸಿಂಗಾಪುರ್ ತಂಡ ನನ್ನ ಮಗಳು ಹಾಗೂ ಪತ್ನಿಯನ್ನು ಕಾಪಾಡಿದ್ದಾರೆ. ಆ ಕಾರಣಕ್ಕೆ ನನ್ನ ಮಗಳಿಗೆ ಸಿಂಗಾಪುರ್ ಎಂದು ಹೆಸರು ಇಟ್ಟಿದ್ದೇನೆ” ಎಂದು ಹೇಳಿದ್ದಾರೆ.

ಇನ್ನು ಲವ್ ಏಯ್ಡ್ ಸಿಂಗಾಪುರ್ ನೀಡಿರುವ ವರದಿ ಪ್ರಕಾರ, ಮಗು ಹುಟ್ಟುವಾಗ 2.7 ಕೆಜಿ ತೂಕ ಇತ್ತು, ಪ್ಯಾಲೆಸ್ಟೀನಿಯನ್ ಶಿಶುವಿಗೆ “ಸಿಂಗಾಪುರ” ಎಂದು ಹೆಸರಿಸಲಾದ ಮೊದಲ ಮಗು ಎಂದು ಹೇಳಿದೆ. ದತ್ತಿ ಸಂಸ್ಥೆಯು ಆಕೆಯ ಜನನ ಪ್ರಮಾಣಪತ್ರದ ಫೋಟೋವನ್ನು ಹಂಚಿಕೊಂಡಿದೆ. ಅಕ್ಟೋಬರ್ 18 ರಂದು ಲವ್ ಏಯ್ಡ್ ಸಿಂಗಾಪುರ್ ತಂಡ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಈ ಬಗ್ಗೆ ಹಂಚಿಕೊಂಡಿದ್ದು, ಲವ್ ಏಯ್ಡ್ ಸಿಂಗಾಪುರ್ ಮಗುವಿನ ಆರೋಗ್ಯಕ್ಕೆ ಹಾರೈಸಿದ್ದು, ಪೋಷಕರಿಗೆ ಧನ್ಯವಾದವನ್ನು ಈ ಮೂಲಕ ತಿಳಿಸಿದೆ. ಕದನ ಬೇಗ ನಿಲ್ಲಲಿ, ಆ ಮಗು ಜಗತ್ತಿನಲ್ಲಿ ದೊಡ್ಡ ಹೆಸರು ಮಾಡುತ್ತದೆ ಎಂದು ಲವ್ ಏಯ್ಡ್ ಸಿಂಗಾಪುರ್ ಹೇಳಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *