16 ಲಕ್ಷ ರೂ. ಮೌಲ್ಯದ ಶ್ರೀಗಂಧ ಕಲಾಕೃತಿ.
ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದ ‘ಕರಾವಳಿ ಉತ್ಸವ’ದಲ್ಲಿ ಭಾಗವಹಿಸಿದ ಡಿಸಿಎಂ ಡಿಕೆ ಶಿವಕುಮಾರ್ಗೆ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಭರ್ಜರಿ ಉಡುಗೊರೆ ನೀಡಿದ್ದಾರೆ. 16 ಲಕ್ಷ ರೂ. ಮೌಲ್ಯದ ಶ್ರೀಗಂಧದಿಂದ ತಯಾರಿಸಿದ ಭಗವಾನ್ ವಿಷ್ಣುವಿನ ವಿಶ್ವರೂಪ ದರ್ಶನದ ಕಲಾಕೃತಿ ನೀಡಿದ್ದಾರೆ. ಇದೇ ವೇಳೆ, ಡಿಕೆ ಶಿವಕುಮಾರ್ ಅವರ ಮನಸ್ಸಿನಲ್ಲಿರುವ ಎಲ್ಲಾ ಬಯಕೆಗಳು ಈಡೇರಲೆಂದು ಆಶಿಸುವೆ. ನಮಗೆ ಕೊಟ್ಟ ಆಶ್ವಾಸನೆ ಆದಷ್ಟು ಬೇಗ ಈಡೇರಿಸುವಂತಾಗಲೆಂದು ಹಾರೈಸಿ ಈ ಉಡುಗೊರೆ ನೀಡುತ್ತಿದ್ದೇನೆ ಎಂದು ಶಾಸಕ ಸತೀಶ್ ಸೈಲ್ ಹೇಳಿದ್ದಾರೆ.
For More Updates Join our WhatsApp Group :




